Showing posts with label ಬೇಡ ಬೇಡ ಎಲೆಲೆ ದುರಿತಗಳಿರಾ ನಮ್ಮ neleyadikeshava. Show all posts
Showing posts with label ಬೇಡ ಬೇಡ ಎಲೆಲೆ ದುರಿತಗಳಿರಾ ನಮ್ಮ neleyadikeshava. Show all posts

Wednesday, 16 October 2019

ಬೇಡ ಬೇಡ ಎಲೆಲೆ ದುರಿತಗಳಿರಾ ನಮ್ಮ ankita neleyadikeshava

ಬೇಡ ಬೇಡ ಎಲೆಲೆ ದುರಿತಗಳಿರಾ ನಮ್ಮಬಾಡದಾಧಿಪನ ಕಿಂಕರನ ಕೂಡ ತೊಡರು ||pa||

ವಾರಿಕಲ್ಲಾನೆ ವಜ್ರದ ಮೃಗೇಂದ್ರನ ಕೂಡೆಹೋರಿ ಹೊದುಕುಳಿಗೊಂಡು ಗೆಲಬಲ್ಲುದೆ ?|
ಭೂರಿ ಭೂತಗಳೆ ಭೂಸತಿಯ ಕಾಂತನ ನಾಮಧಾರಿಗಳ ತೊಡರು ನಿಮಗಳವಡದು ನಾನರಿವೆ ||1||

ಮೇಣದಹಿಕೋಟಿ ದಳ್ಳುರಿಯ ಗರುಡನ ಕೂಡಪ್ರಾಣದಿಂ ಕಾದಿ ಜಯಿಸುವುದೆ ಹೇಳಾ|
ಕ್ಷೋಣಿಯೊಳು ಕ್ಷೀಣದೈವ ಬ್ರಹ್ಮಾಂಡ ಕೋಟಿಗಳುದಾನವಾರಿಯ ದಾಸಗಳವಡವು ನಾನರಿವೆ ||2||

ಹುಲಿಯ ಮೀಸೆಯ ಪಾಶವಿಡಿದು ಗೋವತ್ಸಗಳುನಲಿದು ಉಯ್ಯಾಲೆಯನಾಡುವವೆ ಹೇಳಾ|
ಕಲಿ ಬಾಡದಾದಿಕೇಶವರಾಯ ಚಕ್ರದಲಿತಲೆಗಳನು ಚೆಂಡಾಡಿಸುವ ಕಾಣೊ ಬೇಡ ||3||
***

Beda beda elele durithagalira namma
Badadadipana kinkarana kuda thodadu||p||

Vari kallane vajrada mrugendrana koode
Hori hodukuligondu gellaballude
Buri buthagale busathiya kanthana naama
Darigala thodaraya Nimagalavadadu Naanarive||1||

Menadahikoti dalluriya garudana kuda
Thranadim kaadi jayisuvude hela
Kshoniyolu ksheeenadaiva bramhanda kotigalu
Daanavariya Dasagalavadavu Naanariye||2||

Huliya meeseya pashavididu govathsagalu
Nalidu vuyyaleyanaduvave hela
Kali baadadadikeshavaraya chakradali
Thalegala chendadisuvano beda||3||
***