ವೀಣೆ ಧರಿಸಿದ ಕಾರಣೇನೊ ಹನುಮಾ
ಜಾಣತನವಿದು ಏನು ಪೇಳೊ ಬಲಭೀಮ ಪ.
ತ್ರೇತೆಯಲಿ ಶ್ರೀ ರಾಮದಾಸತ್ವ ಚರಿಸಿದುದು
ಖ್ಯಾತಿ ಬರಲಿಲ್ಲೆಂದು ಮನದಿ ತಿಳಿದೂ
ಪ್ರೀತಿಯಿಂದಲಿ ಕೃಷ್ಣನಂಘ್ರಿ ಗುಪ್ತದಿ ಭಜಿಸಿ
ನೀ ತಪೋನಿಧಿ ಎನಿಸಿ ಮುನಿಯಾದ ಮಹಿಮಾ 1
ಮೂರು ಅವತಾರದಲಿ ತೋರದಂತ್ಹರಿ ದಾಸ್ಯ
ಆರಾಧಿಸುತ ಮೀಸಲಾಗಿ ಚಲಿಸೇ
ಧೀರಭಕ್ತರು ಬಯಲಿಗೆಳೆದು ಖ್ಯಾತಿಯ ಪಡೆಯೆ
ತೋರದಂತಾಗೆ ಬೇಗನೆ ದಾಸ್ಯ ವಹಿಸೀ 2
ದಾಸರನುಭವಿಪ ಆನಂದ ನೋಡುತ ಭಾರ
ತೀಶ ನೀ ಮೊದಲು ದಾಸನು ಎನಿಸಲು
ವಾಸುಕೀಶಯನ ಗೋಪಾಲಕೃಷ್ಣವಿಠ್ಠಲಗೆ
ದಾಸನಾಗುತ ವೀಣೆ ಪುಸ್ತಕವ ಪಿಡಿದಿಯಾ 3
****
ವೀಣೆ ಧರಿಸಿದ ಕಾರಣೇನೊ ಹನುಮಾ ಜಾಣತನವಿದು ಏನು ಪೇಳೊ ಬಲಭೀಮ ಪ.
ತ್ರೇತೆಯಲಿ ಶ್ರೀ ರಾಮದಾಸತ್ವ ಚರಿಸಿದುದು ಖ್ಯಾತಿ ಬರಲಿಲ್ಲೆಂದು ಮನದಿ ತಿಳಿದೂ ಪ್ರೀತಿಯಿಂದಲಿ ಕೃಷ್ಣನಂಘ್ರಿ ಗುಪ್ತದಿ ಭಜಿಸಿ ನೀ ತಪೋನಿಧಿ ಎನಿಸಿ ಮುನಿಯಾದ ಮಹಿಮಾ 1
ಮೂರು ಅವತಾರದಲಿ ತೋರದಂತ್ಹರಿ ದಾಸ್ಯ ಆರಾಧಿಸುತ ಮೀಸಲಾಗಿ ಚಲಿಸೇ ಧೀರಭಕ್ತರು ಬಯಲಿಗೆಳೆದು ಖ್ಯಾತಿಯ ಪಡೆಯೆ ತೋರದಂತಾಗೆ ಬೇಗನೆ ದಾಸ್ಯ ವಹಿಸೀ 2
ದಾಸರನುಭವಿಪ ಆನಂದ ನೋಡುತ ಭಾರ ತೀಶ ನೀ ಮೊದಲು ದಾಸನು ಎನಿಸಲು ವಾಸುಕೀಶಯನ ಗೋಪಾಲಕೃಷ್ಣವಿಠ್ಠಲಗೆ ದಾಸನಾಗುತ ವೀಣೆ ಪುಸ್ತಕವ ಪಿಡಿದಿಯಾ 3
***
ಅಂಬಾಬಾಯಿ