Showing posts with label ಮಾತರಿಶ್ವ ಮಹಾರಾಯಾ ನಿನ್ನ ದೂತನಾದೆನೊ ಪೊರಿ ಜೀಯಾ gurujagannatha vittala MAATARISHWA MAHARAAYA NINNA DOOTANAADENO PORI JEEYA. Show all posts
Showing posts with label ಮಾತರಿಶ್ವ ಮಹಾರಾಯಾ ನಿನ್ನ ದೂತನಾದೆನೊ ಪೊರಿ ಜೀಯಾ gurujagannatha vittala MAATARISHWA MAHARAAYA NINNA DOOTANAADENO PORI JEEYA. Show all posts

Friday 10 December 2021

ಮಾತರಿಶ್ವ ಮಹಾರಾಯಾ ನಿನ್ನ ದೂತನಾದೆನೊ ಪೊರಿ ಜೀಯಾ ankita gurujagannatha vittala MAATARISHWA MAHARAAYA NINNA DOOTANAADENO PORI JEEYA

 ರಾಗ ರೀತಿಗೌಳ    ಆದಿತಾಳ


ಶ್ರೀಗುರುಜಗನ್ನಾಥದಾಸರ ಕೃತಿ


ಮಾತರಿಶ್ವ ಮಹರಾಯ ನಿನ್ನ

ದೂತನಾದೆನೊ ಪೊರಿ ಜೀಯಾ॥ಪ॥


ಭೂತನಾಥ ಪುರುಹೂತ ಪ್ರಮುಖ ಸುರ

ವ್ರಾತವಿನುತ ಶಿರಿನಾಥನೆ ನಿನ್ನೊಳು

ಪ್ರೀತಿಲಿ ತೋರಿಸಿ ನೀತ ಜ್ಞಾನವಿತ್ತು

ಮಾತು ಲಾಲಿಸೊ ಎನ್ನ ಮಾತೆಯ ತೆರದಿ॥ಅ.ಪ॥


ಪ್ರಾಣಾದಿ ಪಂಚರೂಪಕನೆ ಜನ

ತ್ರಾಣ ಭಾವಿವಿರಂಚನೆ

ಮಾಣದೆ ತವ ರೂಪ ಕಾಣಿಸಿ ಮನದಲ್ಲಿ

ಪಾಣಿಯುಗವ ಮುಗಿವೆ ಕ್ಷೀಣಪಾಪನ್ನ ಮಾಡು

ಕ್ಷೋಣಿಜಧವ ಪಾದಪದುಮ

ರೇಣು ಭಜನಿಯಗೈಸು ಸರ್ವದಾ

ವೀಣ ಪಿಡಿದತಿ ಗಾನ ಮಾಡುತ

ಜಾಣನೆನಿಸಿ ಕ್ಷೋಣಿ ಪಾಲಿಪೆ॥೧॥


ಮೂಲರಾಮನ ಪಾದಕಮಲಯುಗಕೆ

ನೀಲ ಷಟ್ಪದ ವರ

ವಾಲಿಯನುಜ ಕಪಿ ಜಾಲ ಬಾಲಕನನ್ನು

ಆಲಿಸಿ ಭೂಮಿಜ ಲೋಲರಾಮನ ಮೈತ್ರಿಯ

ಪಾಲಸಿ ಶರಧಿಯನು

ಲೀಲೆಯಿಂದಲಿ ದಾಟಿ ಸೀತೆಗೆ

ಬಾಲರೂಪದಿ ರಾಮವಾರ್ತಿಯ

ಪೇಳಿ ವನವನು ಹಾಳುಮಾಡಿದಿ॥೨॥


ಪಾತಕ ರಾವಣ ಮಗನಾ ರಣದಿ

ಘಾತಿಸಿ ಯಮಗಿತ್ತಿ ಅವನ

ತಾತ ಗುರುಜಗನ್ನಾಥವಿಠಲ ನಿಜ

ಪೋತನಾಗಿ ಜಗದಿ ಖ್ಯಾತಿಯ ಪಡದಿ

ರೀತಿ ಏನಿದು ನಿನ್ನ ಪದಯುಗ

ದೂತನಾಲ್ಪರಿವ ಮಾತನು

ಯಾತಕೆ ಕಿವಿ ಕೇಳದು ಕಪಿ

ನಾಥ ಪಾಲಿಸೊ ಎನ್ನ ತಾತಾ॥೩॥

****


ಮಾತರಿಶ್ವ ಮಹಾರಾಯಾ ನಿನ್ನ

ದೂತನಾದೆನೊ ಪೊರಿ ಜೀಯಾ ಪ


ಭೂತನಾಥ ಪುರುಹೂತ ಪ್ರಮುಖ ಸುರ

ವ್ರಾತವಿನುತ ಶಿರಿನಾಥನ ನಿನ್ನೊಳು

ಪ್ರೀತಿಲಿ ತೋರಿಸಿ ನೀತ ಜ್ಞಾನವಿತ್ತು

ಮಾತು ಲಾಲಿಸೊ ಎನ್ನ ಮಾತೆಯ ತೆರದಿ ಅ.ಪ


ಪ್ರಾಣಾದಿ ಪಂಚರೂಪಕನೆ ಜಗ

ತ್ರಾಣ ಭಾವಿ ವಿರಿಂಚನೆ

ಮಾಣದೆ ತವ ರೂಪ ಕಾಣಿಸೊ ಮನದಲ್ಲಿ

ಪಾಣಿಯುಗವ ಮುಗಿವೆ ಕ್ಷೀಣಪಾಪನ ಮಾಡೊ

ಕ್ಷೋಣಿಜಾಧವ ಪಾದಪದುಮದ

ರೇಣು ಭಜನೆಯ ಗೈದು ಸರ್ವದ

ವೀಣೆ ಪಿಡಿದತಿ ಗಾನ ಮಾಡುತ

ಜಾಣನೆನಿಸಿ ಕ್ಷೋಣಿ ಪಾಲಿಪೆ 1


ಮೂಲರಾಮನ ಪಾದಕಮಲಾ ಯುಗಕೆ

ನೀಲಷಟ್ಟದ ವರಬಾಲಾ

ವಾಲಿಯಾನುಜ ಕಪಿ ಜಾಲಪಾಲಕನನ್ನು

ಆಲಿಸಿ ಭೂಮಿಜ ಲೋಲರಾಮನ ಮೈತ್ರ್ಯ

ಪಾಲಿಸೀ ಶರಧಿಯನು ನೀನೆ

ಲೀಲೆಯಿಂದಲಿ ದಾಟಿ ಸೀತೆಗೆ

ಬಾಲರೂಪದಿ ರಾಮವಾರ್ತೆಂiÀi

ಪೇಳಿ ವನವನು ಹಾಳುಮಾಡಿದಿ 2


ಪಾತಕÀ ರಾವಣ ಮಗನಾ ರಣದಿ

ಘಾತಿಸಿ ಯಮಗಿತ್ತವನಾ

ತಾತಗುರು ಜಗನ್ನಾಥವಿಠಲ ನಿಜ

ಪೋತನಾಗಿ ಜಗದಿ ಖÁ್ಯತಿಯ ಪಡೆದಿ

ರೀತಿ ಏನಿದು ನಿನ್ನ ಪದಯುಗ

ದೂತನಾಲ್ಪರಿವ ಮಾತನು

ಯಾತಕೇ ಕಿವಿ ಕೇಳದೋ ಕಪಿ

ನಾಥ ಪಾಲಿಸೊ ಎನ್ನ ತಾತಾ 3

***