ಅಳದಿರೊ ಸುಮ್ಮನಿರಮ್ಮ ನೀಅಳದಿರೊ
ಬವ್ವ ಬಂದಾವಮ್ಮ ಕೃಷ್ಣಮ್ಮ ಪ.
ನಾಲ್ಕು ಮೊಗವುಳ್ಳ ಬವ್ವ
ಹದಿನಾಲ್ಕು ಜಗವ ಜೋಳಿಯಲ್ಲಿಟ್ಟ ಬವ್ವ
ಗೋಳಿಟ್ಟಿಸುತಿದೆ ಬವ್ವ ನಿನ್ನಕಾಲು
ಕಂಡರೆ ಕಚ್ಚಿ ಕೊಂಡೊಯ್ವ ಬವ್ವ 1
ಗಗನ ತುಂಬ್ಯಾಡುವ ಬವ್ವ
ಪ್ರಾಣಿಗಳ ದೇಹವ ಪೊಕ್ಕು ಚೇಷ್ಟಿಪ ಬವ್ವ
ಜಗವನಲ್ಲಾಡಿಪ ಬವ್ವ
ನಿನ್ನಮೊಗವರಿತು ದೂರಲಿ ದಿ? ನಿಂತಿಪ್ಪ ಬವ್ವ 2
ಮೊಗವೈದು ಪಣೆಗಣ್ಣ ಬವ್ವ
ಪುಲಿದೊಗಲು ಕೆಂಜೆಡೆ ರುಂಡಮಾಲೆಯ ಬವ್ವ
ಬಗೆಯಿಂದ ಪೆಣ್ಣೆತ್ತಿ ಬವ್ವ
ತಾಸೊಗಸಿಲೆ ರಾಮರಾಮೆನುತಿದೆ ಬವ್ವ 3
ಮೈಯೆಲ್ಲ ಕಣ್ಣಿನ ಬವ್ವ
À ತನ್ನಕೈಯಲ್ಲಿ ವಜ್ರವ ಬೀಸುವ ಬವ್ವ
ಉಯ್ಯಲಾಡುತಲಿದೆ ಬವ್ವ
ನಿನ್ನಒಯ್ವೆನೆನುತ ಬಂತು ಹಲಕಾಲ ಬವ್ವ 4
ಒಂದಲ್ಲ ನೂರಲ್ಲ ಬವ್ವ
ನಿನ್ನಮಂದಿರ ಸುತ್ತುತವನಂತ ಬವ್ವ
ಪೊಂದೊಟ್ಟಿಲೊಳು ನಿದ್ರೆಗೆಯ್ಯೈ
ಎನ್ನತಂದೆ ಪ್ರಸನ್ವೆಂಕಟ ಸಿರಿದೊರೆಯೆ 5
***