raga hindola tala adi
ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ||
ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ||
ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತು
ಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟ
ಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆ
ತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯ ಪ್ರಾಣ ||
ಕಾಮಧೇನು ಚಿಂತಾಮಣಿ ಕಲ್ಪ ವೃಕ್ಷನಾದ ಸ್ವಾಮಿ
ಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣೆಯುಂಟೆ
ಸಾಮಾನ್ಯವಲ್ಲವೋ ಈತ ಮೋಕ್ಷ ಸಂಪದವಿಗಳ ದಾತ
ಆ ಮಹಾ ಅಪರೋಕ್ಷ ಜ್ಞಾನ ದಾರ್ಢ್ಯ ಭಕ್ತಿ ಕೊಡುವ ||
ಅವತಾರ ತ್ರಯಂಗಳಲ್ಲಿ ಹರಿಯ ಸೇವಿಸುತ ಮತ್ತು
ತವಕದಿಂದ ಪೂಜಿಪ ಮಹಾ ಮಹಿಮೆಯುಳ್ಳವರೊ
ಕವಿತ ವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿ
ಭವಬಂಧನ ಕಳೆವ ಕಾವ ಪುರಂದರ ವಿಠಲನ ದಾಸ ||
****
ರಾಗ: ಮೋಹನ ಏಕ ತಾಳ (raga, taala may differ in audio)
pallavi
hanuma bhIma madhva muniya nenedu badukirO
anupallavi
anumAnangaLilladale manObhISTangalanIva
caraNam 1
prANigaLa prANoddhAra jIvarOttamaru mattu prANApAna vyOnOdAna samAnaroLut-krSTa
kANirEno kAya karma caSurindriyagaLige trANagoTTu salahuva jANa guru mukhya prANa
caraNam 2
kAmadhEnu cintAmaNi kalpa vrkSanAda svAmi prEmadindali neneyuvavara bhAgyakeNayuNTe
sAmAnyavallavO Ida mOkSa sampadavigaLa dAta A maha aparOkSa jnAna dArDhya bhakti koDuva
caraNam 3
avatAra trayangaLalli hariya sEvisuta mattu tavakadinda pUjipa mahA mahimeyuLLavaro
kavita vAkyavallavidu avivEka vendeNisa bEDi bhava bandhana kaLeva kAva purandara viTTalana dAsa
***
ಪ್ರಾಣಿಗಳ ಪ್ರಾಣೋದ್ದಾರ ಪ್ರಾಣರಲ್ಲುತ್ತಮ ಮತ್ತೆಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕøಷ್ಟ ||ಕಾಣಿರೇನೋ ಕಾಯಕರ್ಮ ಚಕ್ಷುರಿಂದ್ರಿಯಗಳಿಗೆತ್ರಾಣಕೊಟ್ಟು ಸಲಹುವ ಜಾಣಗುರುಮುಖ್ಯಪ್ರಾಣ1
ಕಾಮಧೇನು ಚಿಂತಾಮಣಿ ಕಲ್ಪವೃಕ್ಷನಾದ ಸ್ವಾಮಿಪ್ರೇಮದಿಂದ ನೆನಯುವವರ ಭಾಗ್ಯಕ್ಕೆಣೆಯುಂಟೇ ? ||ಸಾಮಾನ್ಯವಲ್ಲವೊ ಈಗ ಮೋಕ್ಷಾದಿ ಸಂಪದದಾತಆ ಮಹಾ ಪರೋಕ್ಷಜ್ಞಾನ ದಾಢ್ರ್ಯ ಭಕುತಿ ಕೊಡುವ 2
ಅವತಾರ ತ್ರಯಗಳಿಂದ ಶ್ರೀಹರಿಯ ಸೇವಿಸುವತವಕದಿ ಪೂಜಿಪ ಮಹಾಮಹಿಮೆಯುಳ್ಳವನು ||ಕವಿತೆವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿಭವಬಂಧನ ಕಳೆದುಕಾವಪುರಂದರವಿಠಲನ ದಾಸ3
****
rendered by
shrI Ananda rAo, srIrangam
to aid learning the dAsara pada for beginners
Lyrics:
rAga: hindOLa
tALa: Adi
hanuma bhIma madhva muniya nenedu badukirO |
anumAna~ngaLilladale manObhIShTa~ngaLanIva ||
prANigaLa prANOddhAra jIvarOttamaru mattu
prANApAna vyAnOdAna samAnarOLutkRShTa |
kANirEno kAya karma cakShurindriyagaLige
trANagoTTu salahuva jANa guru mukhya prANa || hanuma bhIma ... ||
kAmadhEnu cintAmaNi kalpavRkShanAda svAmi
prEmadindali nenayuvavara bhAgyakeNeyuNTe |
sAmAnyavallavO Ita mOkSha sampadavigaLa dAta
A maha aparOkSha GYAna dArDhya bhakti koDuva || hanuma bhIma ... ||
avatAra traya~ngaLalli hariya sEvisuta mattu
tavakadinda pUjipa mahA mahimeyuLLavaro |
kavitA vAkhyavallavidu avivEka vendeNisa bEDi
bhavabandhana kalEva kAva purandara viTThalana dAsa || hanuma bhIma ... ||
*******