Showing posts with label ನೋಡಲುಬೇಕೇ ಎನ್ನೊಡೆಯನನೂ ನೋಡಿದಿರೇ ತಾಳಪಾಕಂ ಚಿಣ್ಣೈಯಾ vaikunta vittala. Show all posts
Showing posts with label ನೋಡಲುಬೇಕೇ ಎನ್ನೊಡೆಯನನೂ ನೋಡಿದಿರೇ ತಾಳಪಾಕಂ ಚಿಣ್ಣೈಯಾ vaikunta vittala. Show all posts

Sunday 1 August 2021

ನೋಡಲುಬೇಕೇ ಎನ್ನೊಡೆಯನನೂ ನೋಡಿದಿರೇ ತಾಳಪಾಕಂ ಚಿಣ್ಣೈಯಾ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ನೋಡಲುಬೇಕೇ ಎನ್ನೊಡೆಯನನೂ

ನೋಡಿದಿರೇ ತಾಳಪಾಕಂ ಚಿಣ್ಣೈಯಾ ಪ


ದಿಕ್ಕುಗಳನು ಬೆಳಗುವ ಸುಕೀರಿಟವ

ನಿಕ್ಕಿಹ ಮಾಣಿಕದೋಲೆಯನೂ

ಚೊಕ್ಕಟ ಮೂಗುತಿಯಿಂದೊಪ್ಪುವನ್ನ ಜ

ಗಕ್ಕೆ ಪತಿಯೆನ್ನೆರೆಯ ಚೆನ್ನಿಗನಾ 1


ಕಂಬು ಚಕ್ರಗದೆ ಪದುಮವ ಪಿಡಿದು ಪೀ

ತಾಂಬರದಂಗಿಯ ಧರಿಸಿಕೊಂಡೂ

ತುಂಬಿದ ವಕ್ಷದಿ ರಮೆ ಕೌಸ್ತುಭದಿಂ

ಗಂಭೀರಾರ್ಣವನಾದ ಚೆನ್ನಿಗನ 2


ಸುರರೆಲ್ಲರು ಪೂಜಿಸುವ ಚರಣದೊಳು

ಕಿರುಗೆಜ್ಜೆ ಪೆಂಡೆಯವಿಟ್ಟವನಾ

ವರವೈಕುಂಠ ವೇಲಾಪುರದರಸನ

ಶರಣ ವತ್ಸಲನಾದ ಕರುಣಾಂಬುಧಿಯಾ 3

***