ಕರುಣಾಕರ ನೀನೆಂಬುವದೇತಕೋ
ಭರವಸೆಯಿಲ್ಲೆನಗೆ ||ಪ||
ಪರಿಪರಿಯಲಿ ಈ ಜನ್ಮವನಿತ್ತು
ತಿರುಗಿ ತಿರುಗಿ ಮನ ಕರಗಿಸುವುದ ಕಂಡು ||
ಕರಿಧ್ರುವ ಬಲಿ ಪಾಂಚಾಲಿ ಅಹಲ್ಯೆಯ
ಪೊರೆದವ ನೀನಂತೆ
ಅರಿತು ವಿಚಾರಿಸಿ ನೋಡಲದೆಲ್ಲವು
ಪರಿಪರಿ ಕಂತೆಗಳಂತಿದೆ ಕೃಷ್ಣ ||
ಕರುಣಾಕರ ನೀನಾದರೆ ಈಗಲೆ
ಕರಪಿಡಿದೆನ್ನನು ಹರಿ ಕಾಯೊ
ಸರಸಿಜಾಕ್ಷನೆ ಸರಸ ನೀನಾದರೆ
ದುರಿತಗಳೆನ್ನನು ಪೀಡಿಪುದುಂಟೆ ||
ಮರಣಕಾಲದಲಿ ಅಜಮಿಳಗೊಲಿದೆ
ಗರುಡಧ್ವಜನೆಂಬ ಬಿರುದಿನಿಂದ
ವರಬಿರುದುಗಳು ಉಳಿಯಬೇಕಾದರೆ
ತ್ವರಿತದಿ ಕಾಯೋ ಪುರಂದರವಿಠಲ ||
****
rAgA: dhanyAsi. Adi tALA.(raga tala may differ in audio)
P: karuNAkara nInembuvudyAtako bharavasavillenege
A: paripariyali I nara janmavanittu tirugi tirugi mana karagisuvuda kaNDu
C1: kari dhruva bali pANcAla ahalyeya poredava nInante
aritu vicArisi nODaladellavu paripari kantegaLantide krSNa
2: karuNAkara nInAdare Igale kara piDidennanu hari kAyO
sarasijAkSaNe sarasa nInAdare duritagaLennanu pIDipuduNTe
3: maraNa kAladali ajamiLagolide garuDa dhvajanemba nAmadinda
vara birudugaLu uLiya bEkAdare tvaritadi kAyO purandara viTTala
***
pallavi
karuNAkara nInembuvudyAtako bharavasavillenenge
anupallavi
paripariyali I nara janmavanittu tirugi tirugi mana karagisuvuda kaNDu
caraNam 1
kari dhruva bali pANcAla ahalyeya poradava nInante
aridu vicArisi nODaladellavu paripari kandegaLantide krSNa
caraNam 2
karuNAkara nInAdare Igale kara piDidennanu hari kAyO
sarasijAkSaNe sarasa nInAdare duritagaLennanu biDivuduNTe
caraNam 3
maraNa kAladali ajamiLagolide garuDa dhvajanemba birudininda
vara birudugaLu uLiya bEkAdare dvaritadi kAyO purandara viTTala
***
ಕರುಣಾಕರ ನೀನೆಂಬುವುದೆತಕೊ |ಭರವಸೆ ಇಲ್ಲೆನಗೆ ಪ
ಕರಿಧ್ರುವಬಲಿಪಾಂಚಾಲಿ ಅಹಲ್ಯೆಯ |ಪೊರೆದವ ಭವದಲಿ ನೀನಂತೆ ||ಅರಿತು ವಿಚಾರಿಸಿ ನೋಡಲಿದೆಲ್ಲವು |ಪರಿಪರಿ ಕಂತೆಗಳಂತಿದೆ ಕೃಷ್ಣ 1
ಕರುಣಾಕರ ನೀನಾದರೆ ಈಗಲೆ |ಕರಪಿಡಿದೆನ್ನನು ನೀ ಕಾಯೊ ||ಸರಸಿಜಾಕ್ಷನೇ ಅರಸು ನೀನಾದರೆ |ದುರಿತಗಳೆನ್ನನು ಪೀಡಿಪುದುಂಟೆ 2
ಮರಣ ಕಾಲದಲಿ ಅಜಮಿಳಗೊಲಿದೆಯೊ |ಗರುಡಧ್ವಜನೆಂಬ ಬಿರುದಿನಿಂದ ||ವರಬಿರುದುಗಳ್ನಿನಗುಳಿಯಬೇಕಾದರೆ |ತ್ವರಿತದಿ ಕಾಯೋ ಪುರಂದರವಿಠಲ 3
***
ರಾಗ ಧನಶ್ರೀ ಆದಿತಾಳ (RAGA TALA MAY DIFFER IN AUDIO)
ಪುರಂದರದಾಸರು
ಕರುಣಾಕರ ನೀನೆಂಬುವುದೆತಕೊ |ಭರವಸೆ ಇಲ್ಲೆನಗೆ ಪ
ಕರಿಧ್ರುವಬಲಿಪಾಂಚಾಲಿ ಅಹಲ್ಯೆಯ |ಪೊರೆದವ ಭವದಲಿ ನೀನಂತೆ ||ಅರಿತು ವಿಚಾರಿಸಿ ನೋಡಲಿದೆಲ್ಲವು |ಪರಿಪರಿ ಕಂತೆಗಳಂತಿದೆ ಕೃಷ್ಣ 1
ಕರುಣಾಕರ ನೀನಾದರೆ ಈಗಲೆ |ಕರಪಿಡಿದೆನ್ನನು ನೀ ಕಾಯೊ ||ಸರಸಿಜಾಕ್ಷನೇ ಅರಸು ನೀನಾದರೆ |ದುರಿತಗಳೆನ್ನನು ಪೀಡಿಪುದುಂಟೆ 2
ಮರಣ ಕಾಲದಲಿ ಅಜಮಿಳಗೊಲಿದೆಯೊ |ಗರುಡಧ್ವಜನೆಂಬ ಬಿರುದಿನಿಂದ ||ವರಬಿರುದುಗಳ್ನಿನಗುಳಿಯಬೇಕಾದರೆ |ತ್ವರಿತದಿ ಕಾಯೋ ಪುರಂದರವಿಠಲ ೩