andavaada toyajana
ಅಂದವಾದ ತೋಯಜನ ಚಂದವಾದ |
ಪಾದದಿಂದ ಓಡಿಬಾರೊ ರಂಗ ಸಾಗಿಬಾರೊ |
ಸುತ್ತ ಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಯುವ ನಿನ್ನ |
ಸುತ್ತಿ ಸುತ್ತಿ ತಾಳಲಾರೆ ಓಡೀ ಬಾರೊ |
ಕತ್ತಲಾಯಿತೆನ್ನ ಕಂದಾ ಸಾಗಿ ಬಾರೋ | ೧ |
ನೊರೆ ಹಾಲು ಮೊಸರು ಬೆಣ್ಣೆ ಕರೆವ ತುರುಗಳು ಎಲ್ಲಾ |
ಹರೀ ಎಲ್ಲಿ ಎನ್ನುತಲಿವೆ ಓಡೀ ಬಾರೋ |
ಕರೆದರೆ ಸುಮ್ಮನೆ ನೀನು ಸಾಗಿ ಬಾರೋ | ೨ |
ಕಂಡ ಕಂಡ ಜನವು ನಿನ್ನ ಪುಂಡನೆಂದು ಸಾರುತ್ತೀವೆ |
ಪುಂಡನೇನೊ ನೀನು ಓಡೀ ಬಾರೋ |
ಪ್ರಚಂಡ ಆನಂದವಿಠಲ ಸಾಗಿ ಬಾರೋ | ೩ |
****
just scroll down for other devaranama