by ಪಾಂಡುರಂಗಿ ಹುಚ್ಚಾಚಾರ್ಯರು
ಅಂತರಂಗದ ರೋಗ ಚಿಂತೆ ಪರಿಹರಿಸಿ ಮೋಕ್ಷ
ಪಂಥ ಸಾಧಿಸು ಧನ್ವಂತ್ರಿ ಪ್ರಭುವೆ ||ಪ||
ಸುರರು ಅಸುರರು ಕೂಡಿ ಶರಧಿಯ ಮಥಿಸಲು
ಕರದೊಳಮೃತ ಪಾತ್ರೆ ಧರಿಸಿ ನೀ ಬಂದೆ ||೧||
ಇಂದ್ರ ನೀಲಾಂಭ್ರಣಿ ಸನ್ನಿಭರೂಪ
ಚಂದ್ರಮಂಡಲದೊಳು ನಿಂತು ರಾಜಿಸುವಿ ||೨||
ಯೋಷಿತ ರೂಪದಿ ಸುಧೆಯನು ಕೊಟ್ಟು
ಪೋಷಿಸಿದೆಯೋ ಇಂದಿರೇಶ ದಿವಿಜರ ||೩||
****
ಅಂತರಂಗದ ರೋಗ ಚಿಂತೆ ಪರಿಹರಿಸಿ ಮೋಕ್ಷ
ಪಂಥ ಸಾಧಿಸು ಧನ್ವಂತ್ರಿ ಪ್ರಭುವೆ ||ಪ||
ಸುರರು ಅಸುರರು ಕೂಡಿ ಶರಧಿಯ ಮಥಿಸಲು
ಕರದೊಳಮೃತ ಪಾತ್ರೆ ಧರಿಸಿ ನೀ ಬಂದೆ ||೧||
ಇಂದ್ರ ನೀಲಾಂಭ್ರಣಿ ಸನ್ನಿಭರೂಪ
ಚಂದ್ರಮಂಡಲದೊಳು ನಿಂತು ರಾಜಿಸುವಿ ||೨||
ಯೋಷಿತ ರೂಪದಿ ಸುಧೆಯನು ಕೊಟ್ಟು
ಪೋಷಿಸಿದೆಯೋ ಇಂದಿರೇಶ ದಿವಿಜರ ||೩||
****