..
ನಂಬಿಭಜಿಸೊ ನಿರಂತರ | ನೆರೆ ನಂಬಿ ಭಜಿಸಿ ಮನವೆ ಪ
ಕುಂಭಿಣಿನಾಥ ದಾಸಾರ್ಯ | ಸಹ್ಲಾದರಾ | ಶಲ್ಯಾಖ್ಯರಾ ಅ.ಪ
ಆದಿಯುಗದಿ ಪ್ರಹ್ಲಾದನನುಜ | ಸಹ್ಲಾದನೆಂದೆನಿಸಿದರಾಯರ 1
ದ್ವಾಪರದಲ್ಲಿ ಶರಚಾಪಧಾರಿ | ಶಲ್ಯಭೂಪರೆನಿಸಿದ ರಾಯರು 2
ಪುರಂದರರಾರ್ಯರ ಪುಟ್ಟ ತರಳರೆನಿಸಿ
ಭಾವಿ ಮರುತರಾಜರ ಪ್ರೀಯ ದೂತರ 3
ಶೀಲ ಸುಜ್ಞಾನ ಮಹಿಮಶಾಲಿ ವಿಜಯಧೇನು
ಪಾಲದಾಸರ ದಯಷಾತ್ರರ 4
ಡಿಂಗರೀತಗಮರಾಂಘ್ರಿಪರೆನಿಸಿದ
ರಂಗವಲಿದ ಗುರುರಾಯರ 5
ದೀನಜನರಾಮರಧೇನುವೆಂದೆನಿಸಿದ ಮಾನವಿಕ್ಷೇತ್ರ ನಿವಾಸರ 6
ಶ್ರೀ ಶಾಮಸುಂದರನ ಭಾಸುರಕಥೆ | ಪೀಯೂಷ
ಬುಧರಿಗೆರೆದ ರಾಯರ 7
***