..
kruti by ಲಕ್ಷ್ಮೀನಾರಯಣರಾಯರು Lakshminarayanaru
ರಕ್ಷಿಸು ಕಮಲಾಕ್ಷ ಶ್ರೀ ವಕ್ಷ ಪ
ರಕ್ಷಾ ಶಿಕ್ಷಾಶ್ರಿತಜನ ಸಂರಕ್ಷ
ಅಕ್ಷಯ ಸುರಪಕ್ಷ ಅಧ್ಯಕ್ಷ ಅ.ಪ.
ಪ್ರಾಚೀನ ಕರ್ಮಾಬ್ಧಿ ವೀಚಿಯೊಳಗೆ ಸಿಕ್ಕಿ
ಪೇಚಾಡುತಲಿರೆ ತೋರದು ಯೋಚನೆ
ಶ್ರೀ ಚರಣಕೆ ಶಿರಬಾಗುವೆ ಶ್ರೀಕರ
ಸೂಚಿಸಿ ಘನ ಭಕ್ತಿ ವಿರಕ್ತಿ 1
ಆರ್ತ ಬಾಂಧವನೆಂದು ಕೀರ್ತಿ ಪೊತ್ತವನೆಂದು
ಅರ್ತಿಯಿಂದಲಿ ಬಂದೆ ಸುತ್ತುತೆ ತಂದೆ
ಕೀರ್ತಿಯ ಉಳುಹಿಕೊ ಕೀರ್ತಿಯ ತಂದುಕೊ
ಭಕ್ತವತ್ಸಲ ಸ್ವಾಮಿ ಸುಪ್ರೇಮಿ 2
ಜನನಿ ಜನಕರು ಅನುಜಾ ತನುಜರು
ಅನುವಾಗಿದ್ದರೆ ಎಲ್ಲ ನಮ್ಮವರೆ
ಅನುವು ತಪ್ಪಿದರಾರು ಕಣ್ಣಲಿ ನೋಡರು
ಅನಿಮಿತ್ತ ದಯವಂತ ಶ್ರೀಕಾಂತ 3
***