Showing posts with label ರಂಗ ರಥವನೇರಿದನಕ್ಕ ಮೋಹನಾಂಗ purandara vittala. Show all posts
Showing posts with label ರಂಗ ರಥವನೇರಿದನಕ್ಕ ಮೋಹನಾಂಗ purandara vittala. Show all posts

Friday 6 December 2019

ರಂಗ ರಥವನೇರಿದನಕ್ಕ ಮೋಹನಾಂಗ purandara vittala

ಪುರಂದರದಾಸರು
ರಂಗ ರಥವನೇರಿದನಕ್ಕ ಮೋಹ |ನಾಂಗ ನಮ್ಮ ಸೇರದೆ ಪೋಗುವನಕ್ಕ ಪ

ಮಾತುಳಮಥರೆಯೊಳಿಹನಂತೆ - ಅಲ್ಲಿ |ಮಾತಾಪಿತರಿಗೆ ಬಂಧನವಂತೆ, ಇವರು |ನೂತನ ಬಿಲ್ಲಿನ ಅರ್ಥಿಗಳಂತೆ ||ಪೀತಾಂಬರಧರನ ಪೂಜೆ ನೋಡುವೆನೆಂಬ |ಆತುರದಿಂದಿರೆ ಅಕ್ರೂರನೊಡನೆ ಈಗ 1

ಬಲರಾಮ ಬಂಧುವಿನೊಡಗೂಡಿ ನಂದ-|ನಡಿಗೆ ಯಶೋದೆಗೆ ವಂದನೆ ಮಾಡಿ-ತಾವು |ಬಿಡಲಾರೆವೆಂದು ಭಾಷೆಯ ನೀಡಿ ||ತಡೆಯೆನೆನುತ ತಾಯಿಗೆ ಭರವಸೆಯಿತ್ತು |ಕಡಲಶಯನನು ಕಾತರದಿಂದಲಿ ಈಗ 2

ಮಧುರಾ ಪಟ್ಟಣದ ಮಾನಿನಿಯರು ಅತಿ |ಚದುರೆ ಚೆಂಚಲೆ ಚಾಪಲತೆಯರು-ನಮ್ಮ |ಮದನನಯ್ಯನ ಮೋಹಿಸುತಿಹರು ||ಕಧಿಜನಾಭ ನಮ್ಮ ಪುರಂದರವಿಠಲ |ಪದುಮನಾಭನ ಪಯಣವ ನಿಲ್ಲಿಸಕ್ಕ 3
***

pallavi

ranga rathavanEridanakka mOhanAnga namma sErade pOguvanakka

caraNam 1

mAtuLa mathureyoLihanante alli mAtA pitarige bandhanavante ivaru nUtana billina ardhigaLante
pItAmbaradharana pUje nODuvenemba Aduradindare akrUraLodaLe Iga

caraNam 2

balarAma bandhuvinoDa gUDi nandanaDige yashOdege vandane mADi tAvu
biDalArevendu bhASeya nIDi taDeyeyenuta tAyige bharavaseyittu kaDala shayananu kAtaradindali Iga

caraNam 3

mathurA paTTanada mAniniyaru ati cature cancale cApalateyaru namma madanaLayyana
mOhisutiharu kadhijanAbha namma purandara viTTala padumanAbhana payaNava nillisakka
***