ರಾಗ: ಸೌರಾಷ್ಟ್ರ ತಾಳ: ಅಟ
ಜೋ ಜೋ ಜೋ ಜೋ ಜೋ ರಾಘವೇಂದ್ರ
ಜೋ ಜೋ ಜೋ ಜೋ ಜೋ ಯತಿಚಂದ್ರ ಪ
ನರಹರಿ ಶ್ರೀರಾಮಕೃಷ್ಣರು ಈಗ
ಭರದಿಂದ ನಿದ್ರೆ ಮಾಡಿಹರಯ್ಯ
ಗುರುರಾಯ ನೀನೀಗ ಮಲಗಯ್ಯ ಬೇಗ
ಅರುಣೋದಯ ಮುನ್ನ ನೀ ಏಳಲಾಗ 1
ವರಬೇಡಿ ಬಂದಂಥ ಭಕುತರು ಈಗ
ಸ್ಮರಿಸುತ್ತ ನಿನ್ನನು ಮಲಗಿದರಯ್ಯ
ಭರದಿಂದ ಭಕ್ತರ ಸ್ವಪ್ನದಿ ಬರಲು
ಗುರುರಾಯ ಮಲಗಲು ಅನುವಾಗು ಬೇಗ 2
ವರಗಳ ನೀ ನಾಳೆ ಸುರಿಸುವುದಕ್ಕೆ
ವರರಾಶಿ ಅಣಿಯಾಗಿ ಇಟ್ಟಿಹುದಯ್ಯ
ಸ್ಮರಿಸಿ ಸೀತಾರಾಮವಿಠಲನ್ನ ಈಗ
ಪರಿಮಳಾಚಾರ್ಯನೆ ಮಲಗೋ ನೀ ಬೇಗ 3
***