by hosakere chidambarayya
ಕರುಣದಿಂದ ಪೊರೆವುದೆನ್ನಪರಮಪುರುಷ ಸೂರ್ಯದೇವ ಪ
ಗಾಲಿಯೊಂದೆ ಇರುವ ರಥವುಕಾಲುಕುಂಟನಾದ ಸಾರಥಿ
ಏಳುಕುದುರೆ ಇರಲು ನಡೆವಕಾಲಚಕ್ರ ನಿಯಂತಾರ 1
ಲೋಕಕೆಲ್ಲ ಕಣ್ಣೆನಿಸುತಭೀಕರಾಂಧಕಾರವನುನೂಕಿ
ಜಗಕೆಬೆಳಕನೀವಸಾಕಾರ ಪರಬ್ರಹ್ಮ 2
ಸರ್ವಸ್ಟೃಕರ್ತನಾಗಿಸರ್ವಸ್ಥಿತಿಗೆ ಕಾರಣನಾಗಿಉರ್ಪಿಯೊಳಗೆ ಬೆಳಗುತಿರುವಸರ್ವದೇವ ಚಿತ್ಸ್ವರೂಪ 3
****