Showing posts with label ಕೃಷ್ಣ ತನ್ನರೂಪಇಟ್ಟಉತ್ಕøಷ್ಟ ಭಕ್ತರ ಮನೆ ramesha. Show all posts
Showing posts with label ಕೃಷ್ಣ ತನ್ನರೂಪಇಟ್ಟಉತ್ಕøಷ್ಟ ಭಕ್ತರ ಮನೆ ramesha. Show all posts

Monday, 11 November 2019

ಕೃಷ್ಣ ತನ್ನರೂಪಇಟ್ಟಉತ್ಕøಷ್ಟ ಭಕ್ತರ ಮನೆ ankita ramesha

by ಗಲಗಲಿಅವ್ವನವರು
ಕೃಷ್ಣ ತನ್ನರೂಪಇಟ್ಟಉತ್ಕøಷ್ಟ ಭಕ್ತರ ಮನೆ ಬಿಟ್ಟು ಹೋಗಲಾರದೆ ಪ.

ಮಿತಿಯಿಲ್ಲದೆ ರೂಪದಿಂದ ಕುಂತಿ ಸುತರಭಕ್ತಿಗೆ ಲಕ್ಷ್ಮೀಪತಿ ಅಲ್ಲೆ ನಿಂತಮಿತರೂಪ ದ್ವಾರಕೆಗೆ ಬಂದಇಂಥ ಅತಿಶಯ ಶಕ್ತಿ ನೋಡುವದೆಂಥ ಚಂದ 1

ಚೆಲ್ವನ ನೋಡುವರು ಜನರುಮನೆ ಒಲ್ಲದೆ ಜರಿದಾತನಲ್ಲೆ ಇದ್ದರುಫುಲ್ಲನಾಭನರೂಪಚಾರುಇದಕೆಲ್ಲರೂ ನಗಲುಹೃದಯದಂಬರದಲ್ಲಿ ತುಂಬಿದರು 2

ಧಿಟ್ಟ ಬೊಮ್ಮಾದಿಗಳೆ ಸಾಕ್ಷಿಇದನಷ್ಟು ಬಲ್ಲಂಥ ಶಿವನೊಬ್ಬ ಸಾಕ್ಷಿಅಷ್ಟ ದಿಕ್‍ಪಾಲಕರೆ ಸಾಕ್ಷಿಮತ್ತಷ್ಟು ವೈಭವದ ಸುರರೆಲ್ಲ ಸಾಕ್ಷಿ 3

ಭಕ್ತ ಪ್ರಲ್ಹಾದನೆ ಸಾಕ್ಷಿಇಂಥ ಉತ್ತುಮನೆನಿಸುವ ಧ್ರುವನೊಬ್ಬ ಸಾಕ್ಷಿಸತ್ಯ ಅಜಮಿಳನೊಬ್ಬ ಸಾಕ್ಷಿನಮ್ಮ ಮಿತ್ರಿ ದ್ರೌಪತಾದೇವಿ ಅತ್ಯಂತ ಸಾಕ್ಷಿ 4

ಪಂಡಿತಬಲಿಯೊಬ್ಬ ಸಾಕ್ಷಿಜಲದಿ ಕಂಡ ಅಕ್ರೂರ ಅವನೊಬ್ಬ ಸಾಕ್ಷಿಪುಂಡರೀಕನೊಬ್ಬ ಸಾಕ್ಷಿರಮಿಗಂಡ ಭಕ್ತರ ಕಾದು ಕೊಂಡಿಹ ನಿಜ 5
*******