Showing posts with label ಮರುತ ದೇವರ ಹೊಂದಿರೋ pranesha vittala. Show all posts
Showing posts with label ಮರುತ ದೇವರ ಹೊಂದಿರೋ pranesha vittala. Show all posts

Friday, 15 November 2019

ಮರುತ ದೇವರ ಹೊಂದಿರೋ ankita pranesha vittala

by ಪ್ರಾಣೇಶದಾಸರು
ಮರುತ ದೇವರ ಹೊಂದಿರೋ ಮೂಜಗದ |ಗುರುಮರುತ ದೇವರ ಹೊಂದಿರೋ ಪ

ಮರುತ ದೇವರ ಹೊಂದಿದವರ ಪಾಪವು ಪೋಗಿ |ಹರಿಮಂದಿರವನೈದುವದಕೆ ಸಂದೇಹವಿಲ್ಲ ||ಅ. ಪ||

ದಶರಥ ಸುತನಂಗನೆಯ ಕದ್ದೊಯ್ದಿರಲಾಗಿ |ದಶಕವಾನರಸ್ತೋಮರವಿಜನಾಜ್ಞಾ ||ದೇಶದಿಂದೆಲ್ಲರಾಶೆ ಭಯದಲಡಗಿ ರಕ್ಷಿಸೋ |ಶ್ವಸನಾ ಯೆನಲು ಪೋಗಿ ಶೀಘ ್ರವಾರ್ತೆಯ 1

ಕುರುಜನುಪಟಳಕೆ ಪಾರ್ಥಾರಳಲಿವನ|ಚರಿಸಲುತವಕಬೀಳದೆ ಪ್ರಾಂತಕ್ಕೆ ||ದುರುಳರ ಸದೆದು ಭೂಭಾರವ ಕಳೆದು ಸಹೋದ- |ರರ ಪ್ರೀತಿಪಡಿಸಿ ಕೃಷ್ಣನ ದಯೆ ಪಡೆದ 2

ಗುಣಪೂರ್ಣಅನಘಶ್ರೀ ಪ್ರಾಣೇಶ ವಿಠಲನ ನಿ- |ರ್ಗುಣನೆಂದು ಅಸುರರು ದುರ್ಮತ ಸ್ಥಾಪಿಸೆ ||ಘನಶಾಸ್ತ್ರ ವಿರಚಿಸಿ ಐಕ್ಯವ ಬಿಡಿಸಿ ಸ |ಜ್ಜನರ ಪೊರೆವ ಶ್ರೀ ಆನಂದ ಮುನಿಪರೆಂಬ 3
*******