ಎಂಥಾ ಮಗನೇ ನಿಮ್ಮ ಗೋಪೆಮ್ಮಾ ||ಪ||
ಸವಿಸುಖ ಬಲ್ಲಿವ ನವನೀತ ಚೋರಾ
ಎವಿ ಹಾಕುತ ಬಾಹ ಪರನಾರೀ ಜಾರಾ ||೧||
ಎಳೆವನು ಹಾದಿಯೊಳಗ ಸೆರಗಾ
ಸುಳುಹು ಕಂಡಾರೆಂದರ ತಾ ತಿರಗಾ ||೨||
ಹಿಡಿದೇನಂದರ ಕೈಯೊಳು ಸಿಲುಕಾ
ಮಾಡಿ ಮಾಡರಿಧಾಂಗ ಇವ ಬಲು ಠಕ್ಕಾ ||೩||
ಹೇಳಬೇಕಿನ್ನಾರಿಗೆ ಈ ದೂರಾ
ತಿಳಿದುಕೊಳ್ಳಮ್ಮಾ ಮಗನ ವಿಚಾರಾ ||೪||
ಬಿಡ ಇವನೆಂದೂ ಪಿಡಿದವರ ಕೈಯ್ಯಾ
ಬಿಡದೆ ಸಲಹುತಿಹ ಮೂಢ ಮಹಿಪತಿಯಾ ||೫||
***
ಪಹಾಡಿ (ಮಿಶ್ರ) ರಾಗ ಕೇರವಾ ತಾಳ (raga tala may differ in audio)