ಪಾವನಿ ನಿರಂಜನಿ ಪಾವನಿ ಪ
ಆದಿನಾರಾಯಣಿ ಸಾಧುಜನವಂದಿನಿ ಸದಾನಂದರೂಪಿಣಿ ಸದ್ಗತಿ ಸುಖದಾಯಿಣಿ 1
ಲಕ್ಷುಮಿ ರೂಪಿಣಿ ಸಾಕ್ಷಾತ್ಕಾರಿಣಿ ರಕ್ಷರಕ್ಷಾತ್ಮಿಣಿ ಅಕ್ಷಯಪದದಾಯಿಣಿ 2
ಅನಾಥರಕ್ಷಿಣಿ ದೀನೋದ್ದಾರಿನೀ ಅನಂತಾನಂತಗುಣಿ ಮುನಿಜನ ಭೂಷಣಿ 3
ದಾರಿದ್ರ್ಯಭಂಜನಿ ದುರಿತವಿಧ್ವಂಸಿನಿ ಪರಮಸಂಜೀವಿನಿ ಸುರಮುನಿರಂಜನಿ 4
ಸ್ವಾಮಿ ಶ್ರೀ ಗುರುವಿಣೆ ಬ್ರಹ್ಮಾನಂದ ರೂಪಿಣಿ ಮಹಿಪತಿಕುಲಸ್ವಾಮಿಣಿ ನೀನೆ ಪರಮಪಾವನಿ 5
***