(version 1)
ದಯಾನಿಧೇ ಶ್ರೀ ರಾಘವೇಂದ್ರ ಗುರುವೇ
ಕಾಮಿತ ಸುರತರುವೇ || PA ||
ದಯಾಕರನೆ ಭವ – ಭಯಾ ಹರಿಸಿ ತವ
ಜಯಾಕರ ಪಾದ – ಪಯೋಜ ಯುಗ ತೋರೋ || A PA ||
ಧರಾತಳದಿ ಸುರ – ತರೂ ಸುರಭಿವರ
ತೆರಾದಿ ಕಾಮಿತ – ಕರಾದು ಮೆರೆಯೋ || 1 ||
ಗಡಾನೆ ತವ ಪದ – ಜಡಾಜ ಭಜಿಸುವ
ಧೃಡಾವೆ ಕೊಡೊ ಎ – ನ್ನೊಡೇಯ ನೀನೇ || 2 ||
ಎಷ್ಟೂ ಪೇಳಲಿ ಎನ್ನ – ಕಷ್ಟರಾಶಿಗಳ್ಯತಿ –
ಶ್ರೇಷ್ಠಾನೆ ಕಳಿಯೊ ಉ – ತ್ಕ್ರಷ್ಠಾ ಮಹಿಮ ಗುರೋ || 3 ||
ಮೋಕ್ಷಾದ ಎನ್ನನು – ವೀಕ್ಷಿಸಿ ಈಗಲೆ
ಸುಕ್ಷೇಮ ನೀಡುತ್ತಾ – ಪೇಕ್ಷಾಪೂರ್ತಿಸೊ ಗುರೋ || 4 ||
ದಾತಾನೆ ಎನ್ನಯ – ಮಾತಾನು ಲಾಲಿಸೊ
ನೀತಾ ಗುರು ಜಗ -ನ್ನಾಥಾ ವಿಠಲ ಪ್ರಿಯ || 5 ||
***
(version 1)
dayānidhē śrī rāghavēndra guruvē kāmita surataruvē || PA ||
dayākarane bhava – bhayā harisi tava jayākara pāda – payōja yuga tōrō || A PA ||
dharātaḷadi sura – tarū surabhivara terādi kāmita – karādu mereyō || 1 ||
gaḍāne tava pada – jaḍāja bhajisuva dhr̥ḍāve koḍo e – nnoḍēya nīnē || 2 ||
eṣṭū pēḷali enna – kaṣṭarāśigaḷyati – śrēṣṭhāne kaḷiyo u – tkraṣṭhā mahima gurō || 3 ||
mōkṣāda ennanu – vīkṣisi īgale sukṣēma nīḍuttā – pēkṣāpūrtiso gurō || 4 ||
dātāne ennaya – mātānu lāliso nītā guru jaga -nnāthā viṭhala priya || 5 ||
Plain English (version 1)
dayanidhe sri raghavendra guruve kamita surataruve || PA ||
dayakarane bhava – bhaya harisi tava jayakara pada – payoja yuga toro || A PA ||
dharataladi sura – taru surabhivara teradi kamita – karadu mereyo || 1 ||
gadane tava pada – jadaja bhajisuva dhrdave kodo e – nnodeya nine || 2 ||
estu pelali enna – kastarasigalyati – sresthane kaliyo u – tkrastha mahima guro || 3 ||
moksada ennanu – viksisi igale suksema nidutta – peksapurtiso guro || 4 ||
datane ennaya – matanu laliso nita guru jaga -nnatha vithala priya || 5 ||
***
(version 2)
ದಯಾನಿಧೆ ಶ್ರೀ ರಾಘವೇಂದ್ರ ಗುರುವೆ
ಕಾಮಿತ ಸುರತರುವೆ || PA ||
ಧರಾತಳದಿ ಸುರತರೂವರೋಪಮ
ತ್ವರಾದಿ ಎನ್ನನು ಪೊರೇಯೊ ಗುರುವರ || 1 ||
ಗಡಾನೆ ತವ ಪದ ಜಡಾಜ ಯುಗಲದಿ
ಧಢಾ ಮನವ ಕೊಡೊ ಒಡೇಯ ಗುರುವರ || 2 ||
ಎಷ್ಟೋ ಪೇಳಲೆನ್ನ ಕಷ್ಟಾ ರಾಸಿಗಳನ್ನು
ಸುಟ್ಟುಬಿಡೊ ಸರ್ವೋತ್ಕೃಷ್ಟಾ – ಮಹಿಮ ಗುರು || 3 ||
ಮೋಕ್ಷಾದಾಯಕ ಎನ್ನ ವೀಕ್ಷಿಸಿ ಮನೋಗತಾ –
ಪೇಕ್ಷಾವ ಪೂರೈಸೊ ತ್ಯಕ್ಷಾದಿಸುರ ಪ್ರೀತ || 4 ||
ದಾತಾನೆ ನೀ ಎನ್ನ ಮಾತೂ ಲಾಲಿಸೆ ನಿತ್ಯ
ನೀತಾ – ಗುರು ಜಗನ್ನಾಥ ವಿಠಲ ಪ್ರಿಯ || 5 ||
***
(version 2)
Dayānidhe śrī rāghavēndra guruve kāmita surataruve || PA ||
dharātaḷadi suratarūvarōpama tvarādi ennanu porēyo guruvara || 1 ||
gaḍāne tava pada jaḍāja yugaladi dhaḍhā manava koḍo oḍēya guruvara || 2 ||
eṣṭō pēḷalenna kaṣṭā rāsigaḷannu suṭṭubiḍo sarvōtkr̥ṣṭā – mahima guru || 3 ||
mōkṣādāyaka enna vīkṣisi manōgatā – pēkṣāva pūraiso tyakṣādisura prīta || 4 ||
dātāne nī enna mātū lālise nitya nītā – guru jagannātha viṭhala priya || 5 ||
Plain English (version 2)
Dayanidhe sri raghavendra guruve kamita surataruve || PA ||
dharataladi surataruvaropama tvaradi ennanu poreyo guruvara || 1 ||
gadane tava pada jadaja yugaladi dhadha manava kodo odeya guruvara || 2 ||
esto pelalenna kasta rasigalannu suttubido sarvotkrsta – mahima guru || 3 ||
moksadayaka enna viksisi manogata – peksava puraiso tyaksadisura prita || 4 ||
datane ni enna matu lalise nitya nita – guru jagannatha vithala priya || 5 ||
***
..
ದಯಾನಿಧೆ ಶ್ರೀ ರಾಘವೇಂದ್ರ ಗುರುವೆ
ಕಾಮಿತ ಸುರತರುವೆ ಪ
ಧರಾತಳದಿ ಸುರತರೂವರೋಪಮ
ತ್ವರಾದಿ ಎನ್ನನು ಪೊರೇಯೊ ಗುರುವರ 1
ಗಡಾನೆ ತವ ಪದ ಜಡಾಜ ಯುಗಲದಿ
ಧಢಾ ಮನವ ಕೊಡೊ ಒಡೇಯ ಗುರುವರ 2
ಎಷ್ಟೊ ಪೇಳಲೆನ್ನ ಕಷ್ಟಾ ರಾಸಿಗಳನ್ನು
ಸುಟ್ಟುಬಿಡೊ ಸರ್ವೋತ್ಕøಷ್ಟಾ - ಮಹಿಮ ಗುರು 3
ಮೋಕ್ಷಾದಾಯಕ ಎನ್ನ ವೀಕ್ಷೀಸಿ ಮನೋಗತಾ -
ಪೇಕ್ಷಾವ ಪೂರೈಸೆÀೂ ತ್ರ್ಯಕ್ಷಾದಿಸುರ ಪ್ರೀತ 4
ದಾತಾನೆ ನೀ ಎನ್ನ ಮಾತೂ ಲಾಲಿಸೊ ನಿತ್ಯ
ನೀತಾ - ಗುರು ಜಗನ್ನಾಥ ವಿಠಲ ಪ್ರಿಯ 5
***
ದಯಾನಿಧೇ ಶ್ರೀ ರಾಘವೇಂದ್ರ ಗುರುವೇ
ಕಾಮಿತ ಸುರತರುವೇ ಪ
ದಯಾಕರನೆ ಭವ - ಭಯಾ ಹರಿಸಿ ತವ
ಜಯಾಕರ ಪಾದ - ಪಯೋಜ ಯುಗ ತೋರೋ ಅ.ಪ
ಧರಾತಳದಿ ಸುರ - ತರೂ ಸುರಭಿವರ
ತೆರಾದಿ ಕಾಮಿತ - ಕರಾದು ಮೆರೆಯೋ 1
ಗಡಾನೆ ತವ ಪದ - ಜಡಾಜ ಭಜಿಸುವ
ಧೃಡಾವೆ ಕೊಡೊ ಎ - ನ್ನೊಡೇಯ ನೀನೇ 2
ಎಷ್ಟೂ ಪೇಳಲಿ ಎನ್ನ - ಕಷ್ಟರಾಶಿಗಳ್ಯತಿ -
ಶ್ರೇಷ್ಠಾನೆ ಕಳಿಯೊ ಉ - ತ್ಕ್ರಷ್ಠಾ ಮಹಿಮ ಗುರೋ 3
ಮೋಕ್ಷಾದ ಎನ್ನನು - ವೀಕ್ಷಿಸಿ ಈಗಲೆ
ಸುಕ್ಷೇಮ ನೀಡುತ್ತಾ - ಪೇಕ್ಷಾಪೂರ್ತಿಸೊ ಗುರೋ 4
ದಾತಾನೆ ಎನ್ನಯ - ಮಾತಾನು ಲಾಲಿಸೊ
ನೀತಾ ಗುರು ಜಗ -ನ್ನಾಥಾ ವಿಠಲ ಪ್ರಿಯ 5
***