Showing posts with label ಪಾವನನವ ಪಾವನನವ ಪಾವನನವ ಜಗಕೆ purandara vittala. Show all posts
Showing posts with label ಪಾವನನವ ಪಾವನನವ ಪಾವನನವ ಜಗಕೆ purandara vittala. Show all posts

Thursday, 28 January 2021

ಪಾವನನವ ಪಾವನನವ ಪಾವನನವ ಜಗಕೆ purandara vittala

 ರಾಗ - : ತಾಳ -


ಪಾವನನವ ಪಾವನನವ ಪಾವನನವ ಜಗಕೆ l

ದೇವ ಶ್ರೀಹರಿಯ ಪಾದವು ಸೋಕಿದರೆ ll ಪ ll 


ಹರಿಯ ನೆನೆಯೆ ನಾಲಗೆ ಪಾವನ, ಸಿರಿ

ಮುದ್ರೆಯು ಭುಜಕೆ ಪಾವನ l

ಉರದಿ ನಾಭಿಗೆ ನಾಮವನಿಡೆ ಪಾವನವೊ ll

ಕೊರಳೊಳು ಶ್ರೀ ತುಳಸೀಮಣಿ ನಳಿನಾಕ್ಷವು ಇರೆ ಪಾವನ l

ಪರಮ ವೈಷ್ಣವರಿಗೆರಗಿದ ಶಿರ ಪಾವನವೊ ll ೧ ll


ತುಳಸಿ ಹಿಡಿಯೆ ಕೈ ಪಾವನ, ದಲವನಿಡೆ ಕಿವಿ ಪಾವನ l

ಸ್ಥಳದ ಮೃತ್ತಿಕೆ ಇಡಲು ಆ ಪಣೆ  ಪಾವನವೊ ll

ಬಳಲದೆ ವೃಂದಾವನವನು ಬಳಸಿ ಬಂದವ ಪಾವನನು l

ತುಳಸಿತೀರ್ಥವ ಕೊಂಡಾತನು ಪಾವನನಯ್ಯ ll 2 ll 


ಏಕಾದಶಿಯ ವ್ರತ ಪಾವನ ಎಲ್ಲ ತೊರೆದವ ಪಾವನ l 

ನಾಕು ಜಾವದಿ ಜಾಗರವಿರೆ ಪಾವನವೊ ll

ಕಾಕು ನುಡಿಯದೆ ಕಾಮಿತಪ್ರದನೆಂಬ ಶ್ರೀಕಾಂತನ ಪಾದವ l

ಏಕಾಂತದಿ ನೆನೆವನು ಪಾವನನೊ ll ೩ ll 


ಕೃತಿರಮಣನ ಕಥೆಯನೊಪ್ಪಿ ಕೇಳಿದ ಕಿವಿ ಪಾವನ l

ಶತವೃಂದಾರಕರ ತಲೆಯ ನೆಲೆ ಪಾವನವೊ ll

ಮತಿ ಬೇಡಿದ ಅಜ ಪಾವನ ಯತಿ ಪಾವನ ವೈಷ್ಣವರ l

ಮತವಿಡಿದೋದಿದ ರಾಮನ ಕಥೆ ಪಾವನವೊ ll ೪ ll


ಸಾಮವೇದ ಪಾವನವು - ಭೂಮಿಪತಿ ನೀ ಪಾವನ l

ನಾಮಧಾರಿಯು ಪಾವನ ನಾರಾಯಣನ ll

ತಾಮಸವಿಲ್ಲದೆ ಹರಿ ಸರ್ವೋತ್ತಮನೆಂಬ l

ಸೀಮೆಯು ಪಾವನ ಪುರಂದರವಿಟ್ಠಲನ ll ೫ ll

***