Showing posts with label ಆನಂದಾದ್ರಿ ವಾಸ ವಿಠಲ ಪೊರೆ ಇವನಾ gurugovinda vittala. Show all posts
Showing posts with label ಆನಂದಾದ್ರಿ ವಾಸ ವಿಠಲ ಪೊರೆ ಇವನಾ gurugovinda vittala. Show all posts

Saturday, 28 December 2019

ಆನಂದಾದ್ರಿ ವಾಸ ವಿಠಲ ಪೊರೆ ಇವನಾ ankita gurugovinda vittala

by ಗುರುಗೋವಿಂದವಿಠಲರು
ಆನಂದಾದ್ರಿ ವಾಸ | ವಿಠಲ ಪೊರೆ ಇವನಾ ಪ

ಮಾನಮೇಯ e್ಞÁನ | ಸಾನುಕೂಲಿಸಿ ಇವಗೆನೀನಾಗಿ ಪೊರೆಯೊ ಹರಿ | ಕೋನೇರಿವಾಸಾ ಅ.ಪ.

ಚಿತ್ರ ಚಾರಿತ್ರ | ಶುಭಗಾತ್ರನೇ ಶತಪತ್ರನೇತ್ರಕರವಾದ ದ್ವಂದ್ವ | ಸೂತ್ರಾಂತರಾತ್ಮ |ಮಿತ್ರನಾನುಗ್ರಹಕೆ | ಪಾತ್ರನ ಸಲಹೊ ಮಾಕಳತ್ರನೇ ನಿನ್ನ ಸುಪ | ವಿತ್ರ ಪದ ನಮಿಪೇ 1

ಕರುಣವೆಂತುಟೊ ನಿನಗೆ | ಶರಣಜನ ವತ್ಸಲನೇಕರೆದೊಯ್ದು ಸ್ವಪ್ನದಲಿ | ಹರ ಗಿರಿಜೆ ತೋರೀ |ಮರಳಿ ಬ್ರಹ್ಮನ ಲೋಕ | ದರುಶನಾನಂದದಲಿಕರೆದೊಯ್ದು ಕರುಣಾಳು | ಸುರಸೇವ್ಯ ಬದರಿಗೆ 2

ದಶಮತಿಗೆ ಬೋಧಿಸುವ | ವ್ಯಾಸದರ್ಶನ ಭಾವಿದಶಮತಿಯ ಸಹವಿರುವ | ವ್ಯಾಸ ಭಕ್ತನ್ನಾ |ಹಸನಾಗಿ ತೋರಿ ನೀ | ವಸುಮತಿಗೆ ಕರೆತಂದುಬೆಸಸಿದೆಯಾ ಫಲದೈವ | ದರ್ಶನಕೆ ಇವನಾ 3

ಬದ್ಧನಾದರು ಇಹದಿ | ಶುದ್ಧ ಸಂಸ್ಕøತನಿಹನುಮಧ್ವಮತ ದಾಸತ್ವ | ಶ್ರದ್ಧೆಯುಳ್ಳವನೇಬುದ್ಧಿಯಲಿ ಎನಗೆ ಉ | ದ್ಬುದ್ಭವನೆ ಮಾಡ್ದ ಪರಿತಿದ್ದಿ ಅಂಕಿತವಿತ್ತು | ಬುದ್ಧಿ ಪೇಳಿಹೆನೋ 4

ಸಂಚಿತ ಕರ್ಮ | ತೀವ್ರದಲಿ ದಹಿಸೇಗೋವುಗಳ ಪಾಲ ಗುರು | ಗೋವಿಂದ ವಿಠ್ಠಲನೆಭಾವದಲಿ ಬಿನ್ನವಿಪೆ | ನೀ ವೊಲಿದು ಸಲಿಸೋ 5
*******