Showing posts with label ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮ lakshmikanta. Show all posts
Showing posts with label ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮ lakshmikanta. Show all posts

Sunday, 1 August 2021

ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮ ankita lakshmikanta

..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಹಿಮಾಚಲೇಂದ್ರನ ಕುಮಾರಿ ಶಂಕರಿ

ಉಮಾಂಬೆ ಬಾರಮ್ಮ ಪ


ಕುಮಾರ ಶಕ್ರಾದಿ ಸಮಸ್ತ ಸುರಗಣ

ಸಮರ್ಚಿತಾಂಘ್ರಿಯೆ ನಮೋನಮೋ ಎಂಬೆ ಅ.ಪ.


ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ರಾಣಿ

ಹೃದ್ಧ್ಯೋಮದಲಿ ಪೊಳೆದು

ವಿದ್ಯಾ ಬುದ್ಧಿಯನಿತ್ತು ಶುದ್ಧಾತ್ಮನನು ಮಾಡಿ

ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ 1


ಘೋರ ಭವಾಬ್ಧಿಯ ತಾರಿಪ ಸುಲಭದ

ದಾರಿಯ ತೋರೆನುತ

ಮುರಾರಿಯನು ಬೇಡಿ ಶ್ರೀ ರಾಮ ನಾಮದ

ಸಾರಾಮೃತದ ರುಚಿ ಬೀರಿದೆ ಜಗದೊಳು 2


ಲಕ್ಷಾಘ ಧ್ವಂಸಿನಿ ದಾಕ್ಷಾಯಿಣೀ ಗಣಾ

ಧಕ್ಷನ ವರ ಜನನಿ

ಲಕ್ಷ್ಮೀಕಾಂತನ ಅಪರೋಕ್ಷದಿ ಕಾಂಬುವ

ಸೂಕ್ಷ್ಮವನೊರೆದೆನ್ನ ರಕ್ಷಿಸು ಅಮ್ಮಯ್ಯ 3

***