Showing posts with label ದಯಮಾಡೆ ದಯಮಾಡೆ ಹಯಮುಖನಿಗೆ gurupranesha vittala DAYAMAADE DAYAMAADE HAYAMUKHANIGE. Show all posts
Showing posts with label ದಯಮಾಡೆ ದಯಮಾಡೆ ಹಯಮುಖನಿಗೆ gurupranesha vittala DAYAMAADE DAYAMAADE HAYAMUKHANIGE. Show all posts

Friday, 27 December 2019

ದಯಮಾಡೆ ದಯಮಾಡೆ ಹಯಮುಖನಿಗೆ ankita gurupranesha vittala DAYAMAADE DAYAMAADE HAYAMUKHANIGE


Audio by Mrs. Nandini Sripad

ಶ್ರೀ ಲಕ್ಷ್ಮೀದೇವಿ ಸ್ತೋತ್ರ  ಶ್ರೀ ಗುರುಪ್ರಾಣೇಶವಿಠಲ ದಾಸರ ಕೃತಿ 

 ರಾಗ ಆನಂದಭೈರವಿ      ಖಂಡಛಾಪುತಾಳ 

ದಯಮಾಡೆ ದಯಮಾಡೆ ॥ ಪ ॥
ಹಯಮುಖನಿಗೆ ಅತಿ ಪ್ರಿಯ ಕಮಲಾಲಯೆ ॥ ಅ ಪ ॥

ಹೊಲಬುಗಾಣೆ ಭವ ಜಲಧಿಯೊಳಗೆ ತ್ವರ ।
ಸಲಹು ನಿನ್ನ ಕರಜಲಜದಿ ಪಿಡಿದು ॥ 1 ॥

ನಳಿನ ಭವಾದ್ಯರ ಸಲಹುವಿ ಈಪ್ಸಿತ ।
ಫಲವಿತ್ತು ಕರುಣದಲಿ ಮಹಲಕುಮಿ ॥ 2 ॥

ಕ್ಷೋಣಿ ಭಣಗು ನಾನೋರ್ವನು ನಿನ್ನಯ ।
ಧ್ಯಾನವೆ ಪಾಲಿಸು ಮಾಣದೆ ಜವದಿಂ ॥ 3 ॥

ಶರಣು ಪೊಕ್ಕವರ ಜರಿದರೆ ನಿನ್ನಯ ।
ಬಿರುದಿಗೆ ಬಾಹದೆ ಕೊರತಿಯು ಜಾನಕಿ ॥ 4 ॥

ಜ್ಞಾನಗಮ್ಯ ಗುರುಪ್ರಾಣೇಶವಿಠಲನ ।
ಮಾನಿನಿ ಎನ್ನಯ ಹೀನತೆ ಎಣಿಸದೆ ॥ 5 ॥
********