Audio by Mrs. Nandini Sripad
ಶ್ರೀ ಲಕ್ಷ್ಮೀದೇವಿ ಸ್ತೋತ್ರ ಶ್ರೀ ಗುರುಪ್ರಾಣೇಶವಿಠಲ ದಾಸರ ಕೃತಿ
ರಾಗ ಆನಂದಭೈರವಿ ಖಂಡಛಾಪುತಾಳ
ದಯಮಾಡೆ ದಯಮಾಡೆ ॥ ಪ ॥
ಹಯಮುಖನಿಗೆ ಅತಿ ಪ್ರಿಯ ಕಮಲಾಲಯೆ ॥ ಅ ಪ ॥
ಹೊಲಬುಗಾಣೆ ಭವ ಜಲಧಿಯೊಳಗೆ ತ್ವರ ।
ಸಲಹು ನಿನ್ನ ಕರಜಲಜದಿ ಪಿಡಿದು ॥ 1 ॥
ನಳಿನ ಭವಾದ್ಯರ ಸಲಹುವಿ ಈಪ್ಸಿತ ।
ಫಲವಿತ್ತು ಕರುಣದಲಿ ಮಹಲಕುಮಿ ॥ 2 ॥
ಕ್ಷೋಣಿ ಭಣಗು ನಾನೋರ್ವನು ನಿನ್ನಯ ।
ಧ್ಯಾನವೆ ಪಾಲಿಸು ಮಾಣದೆ ಜವದಿಂ ॥ 3 ॥
ಶರಣು ಪೊಕ್ಕವರ ಜರಿದರೆ ನಿನ್ನಯ ।
ಬಿರುದಿಗೆ ಬಾಹದೆ ಕೊರತಿಯು ಜಾನಕಿ ॥ 4 ॥
ಜ್ಞಾನಗಮ್ಯ ಗುರುಪ್ರಾಣೇಶವಿಠಲನ ।
ಮಾನಿನಿ ಎನ್ನಯ ಹೀನತೆ ಎಣಿಸದೆ ॥ 5 ॥
********
No comments:
Post a Comment