Showing posts with label ಕಾಯೋ ಕೃಷ್ಣಭವತೋಯದಿ ಮುಳುಗಿ pranesha vittala. Show all posts
Showing posts with label ಕಾಯೋ ಕೃಷ್ಣಭವತೋಯದಿ ಮುಳುಗಿ pranesha vittala. Show all posts

Monday, 11 November 2019

ಕಾಯೋ ಕೃಷ್ಣಭವತೋಯದಿ ಮುಳುಗಿ ankita pranesha vittala

by ಪ್ರಾಣೇಶದಾಸರು
ಕಾಯೋ ಕೃಷ್ಣಭವತೋಯದಿ ಮುಳುಗಿ ಉ- |ಪಾಯವ ಕಾಣದೆ ಬಾಯ ಬಿಡುವೆನೋ ಕಾಯೋ ಕಾಯೋ ಪ

ಭಾಗವತರ ಪ್ರಿಯ ನಾಗಭೂಷಣಸಖ|ನೀಗಿಭಯವಕರಬೇಗನೆ ಪಿಡಿಯೊ 1

ಇಂದಿರೆಯರಸ ಮುಕುಂದ ಯಶೋದೆಯ |ನಂದನ ಕರುಣಿಸೊ ಇಂದೀವರಾಕ್ಷ2

ಸಿಂಧುಶಯನ ಪೊರೆಯೆಂದು ಕರೆಯಕರಿ|ಬಂದು ಸಲಹಿದೆಯೋಮಂದದಯಾಳು3

ಕುರುಪ ಪಿಡಿಯಲುದ್ಧರಿಸಿದೆ ತರುಣಿಯ |ನರಕಹ ನಿನಗೆ ನಾ ಪರಕೀಯನಲ್ಲೋ 4

ಜಾನಕೀವಲ್ಲಭನೀನೇ ಮರೆದುಬಿಡೆ |ಕಾಣೆನೊ ಒಬ್ಬರ ನಾನವನಿಯೊಳು5

ಭಕುತರಿಗೋಸುಗ ಹತ್ತವತಾರವ |ಅರ್ತಿಂದಲಿ ಕೊಂಡುತ್ತಮ ಶ್ಲೋಕ6

ದ್ವೇಷಿಗಳೆನ್ನನು ಘಾಸಿಸದಂದದಿ |ಪೋಷಿಸುವುದು ಪ್ರಾಣೇಶ ವಿಠ್ಠಲನೇ 7
*******