..
kruti by ಲಕ್ಷ್ಮೀನಾರಯಣರಾಯರು Lakshminarayanaru
ಗೋಪಾಲಕುಲ ಬಾಲ ಗೋವಿಂದ ಗುಣಶೀಲ
ನೀ ಪಾಲಿಸೆನ್ನನು ದೇವ ಪ
ಶರನಿಧಿ ಸಂಚಾರ ವರ ಮಂದರೋದ್ಧರ
ಪರಮಾತ್ಮ ಭೂಧರ ದೇವ 1
ನರಭಕ್ತ ಭಯಹಾರ ಸುರಕಾರ್ಯಕೃತ ಧೀರ
ಧರಣೇಸುರೇಶ್ವರ ದೇವ 2
ಸಕಲಾರ್ತಿಹರ ಶÀೂರ ಕುರುತೇಷ್ಟದಾತಾರ
ವಿಕಟಾರ್ತ ಶ್ರೀಕರ ದೇವ 3
ಕಲಿದೋಷ ಪರಿಹಾರ ಸಲೆ ಧರ್ಮವಿಸ್ತಾರ
ಜಲಧೀಶ ಮಂದಿರ ದೇವ 4
ಶ್ರೀಕಾಂತ ಶ್ರೀಮಂತ ಶ್ರೀಕೃಷ್ಣ ಜಯವಂತ
ನೀ ಪಾಲಿಸೆನ್ನನು ದೇವ 5
***