..
kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru)
ನೋಡಿರಯ್ಯ ಶ್ರೀರಾಮನ ಮೂರ್ತಿಯ
ಪಾಡಿರೊ ಮಹಿಮೆಯನು ಪ
ಅಗಣಿತ ಮಹಿಮನು ತ್ರಿಗುಣ ವರ್ಜಿತನು
ಸುಗುಣೇಂದ್ರತೀರ್ಥರಿಂದ ಬಗೆಬಗೆ ಪೂಜೆಗೊಂಬ 1
ಸಂಜೀವವನು ತಂದ ಅಂಜನಸುತನಯ್ಯ
ನಂಜನಗೂಡೊಳಿಪ್ಪ ಕಂಜಾಕ್ಷಕರುಣಿಯ 2
ವಾರಿಜ ಭವಪಿತ ಮಾರುತ ಗತಿಪ್ರಿಯ
ವಾರಿಧಿಬಂಧಕ ಶ್ರೀರಮಾಧವನನ್ನು ಮಂಗಳ ಪುರದೊಳು
ಮಂಗಳವಾರದಿ ಮಂಗಳದಿ ಮೆರೆದನಂಗನಪಿತನನ್ನು 3
ವರ ರಾಘವೇಂದ್ರರ ಕರುಣಾಗ್ರೇಸರ ಶ್ರೀವತ್ಸಾಂಕಿತನಾದ
ಅರವಿದೂರನನ್ನು 4
***