Showing posts with label ಬಂದೆಯಾ ಪರಿಣಾಮದಿ ನಿನ್ನ ಬಂಧು purandara vittala. Show all posts
Showing posts with label ಬಂದೆಯಾ ಪರಿಣಾಮದಿ ನಿನ್ನ ಬಂಧು purandara vittala. Show all posts

Friday, 6 December 2019

ಬಂದೆಯಾ ಪರಿಣಾಮದಿ ನಿನ್ನ ಬಂಧು purandara vittala

ಪುರಂದರದಾಸರು
ರಾಗ ಕೇದಾರಗೌಳ. ಝಂಪೆ ತಾಳ)

ಬಂದೆಯಾ ಪರಿಣಾಮಕೆ ನಿನ್ನ
ಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗಕೆ ||ಪ||

ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳ
ಬೀಳುಗೆಡಹಿ ಪಂಚ ಭೂತಂಗಳ
ಪಾಳುಮಾಡಿ ಪಂಚೇಂದ್ರಿಯಂಗಳ
ಕೋಳಕ್ಕೆ ತಗಲ್ಹಾಕಿ ಕೊನಬುಗಾರನಾಗಿ

ಸಂಚಿತ ಆಗಮ ಪ್ರಾರಬ್ಧಗಳನೆಲ್ಲ
ಸಂಚುಮಾಡಿ ಸಂಕೋಲ ಹಾಕಿ
ಮಿಂಚುವ ಧನ ಪುತ್ರದಾರೇಕ್ಷಣಗಳು
ವಂಚಿಪ ಕವಲುದಾರಿಯ ಬಿಟ್ಟು ಮಾರ್ಗದಿ

ಅಷ್ಟ ಮದಂಗಳ ನಷ್ಟವನ್ನೆ ಮಾಡಿ
ಅಷ್ಟೈಶ್ವರ್ಯವ ಕಟ್ಟು ಮಾಡಿ
ಅಷ್ಟ ಭೋಗಂಗಳ ಕುಟ್ಟಿ ಕೆಡಹಿ ಬಾಹ
ನಷ್ಟ ತುಷ್ಟಿಗಳೆಳ್ಳಿನಷ್ಟು ಲಕ್ಷಿಸದೆ

ಕಾಮವ ಖಂಡಿಸಿ ಕ್ರೋಧವ ದಂಡಿಸಿ
ನಾಮ ರೂಪ ಕ್ರಿಯೆಗಳ ನಿಂದಿಸಿ
ತಾಮಸ ಬುದ್ಧಿಯ ತಗ್ಗಿಸಿ ಕರ್ಮ ನಿ-
ರ್ನಾಮ ಮಾಡಿ ಮದ ಮತ್ಸರಗಳ ಸುಟ್ಟು

ಹೊಳೆವ ಪ್ರಪಂಚದ ಬಲೆಯ ಹರಿದು ನೀಚ
ಕಲಿಯ ತಂತ್ರಗಳನು ಧಿಕ್ಕರಿಸಿ
(ಹೊಳೆವ ಪ್ರಪಂಚದ ಬಳಗದ ಬಳ್ಳಿಯ
ಬಲೆಗಳೊಳಗೆ ಸಿಲುಕದೆ ಹರಿದು )
ಒಲಿದು ಮುಕ್ತಿಯನೀವ ಪುರಂದರವಿಠಲನ್ನ
ಒಲುಮೆಯಾದುದರಿಂದ ನಾನು ನೀನೆನ್ನದೆ
***

pallavi

bandeyA pariNAmage ninna bandhu baLagavanella biTTu sanmArgake

caraNam 1

stHula sUkSma kAraNa dEhangaLa bILukeDahi panca bhUtangaLa
pALumADi pancEndriyangaLa kOLakke tagalhAki konalugAranAgi

caraNam 2

sancita Agama prArabdhagaLanella sancumADi sankOla hAki
mincuva dhana putradArESaNagaLu vancipa kavaludAriya biTTu mArgadi

caraNam 3

aSTa madangaLa naSTavanne mADi aSTaishvaryava kaTTu mADi
aSTa bhOgangaLa kuTTi keDahi bAha naSTa duSTagaLeLLinaSTu lakSisade

caraNam 4

kAmava gaNDisi krOdhava daNDisi nAma rUpa kriyegaLa nindisi
tAmasa buddhiya taggisi karma nirnAma mADi mada matsaragaLa suTTu

caraNam 5

hoLeva prapancada baleya haridu nIca kaliya tantragaLanu dhikkarisi
olidu muktiyanIva purandara viTTalanna olumeyAdudarinda nAnu nInannade
***

ಬಂದೆಯಾ ಪರಿಣಾಮದಿ ನಿನ್ನ ಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗದಿ ಪ

ಸಂಚೀತ ಪ್ರಾರಬ್ಧ ಕರ್ಮಂಗಳನೆಲ್ಲಕಿಂಚಿತು ಮಾಡಿ ಸಂಕೋಲೆಯ ಹಾಕಿ ||ಮಿಂಚುವ ಧನ - ಪುತ್ರ ದಾರೇಷಣಂಗಳವಂಚಿಸಿ ಕವಲು ದಾರಿಯ ಬಿಟ್ಟು ಮಾರ್ಗದಿ 1

ಕಾಮವ ಖಂಡಿಸಿ ದ್ರೋಹವ ದಂಡಿಸಿನಾಮರೂಪ ಕರ್ಮಂಗಳ ನಿಂದಿಸಿ ||ತಾಮಸಕರ್ಮನಡತೆಯ ತಗ್ಗಿಸಿ ನಿರ್ನಾಮ ಮಾಡಿ ಮದ-ಮತ್ಸರಂಗಳನೀಗಿ2

ಅಷ್ಟಭೋಗಂಗಳ ನಷ್ಟಂಗಳ ಮಾಡಿಅಷ್ಟೈಶ್ಚರ್ಯವ ಮಟ್ಟು ಮಾಡಿ ||ಅಷ್ಟ ಪ್ರಕೃತಿಗಳ ಕುಟ್ಟಿ ಕೆಡಕಿ ಬಹಳನಷ್ಟತುಷ್ಟಿಗಳಲ್ಲಿ ದೃಷ್ಟಿಯೇನಿಲ್ಲದೆ 3

ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳನೆಲ್ಲಬೀಳುಗೆಡಹಿ ಪಂಚಭೂತಂಗಳ ||ಪಾಳು ಮಾಡಿ ಪಂಚ ಪಂಚ ಇಂದ್ರಿಯಗಳಕೋಳಕೆ ತಗುಲಿಸಿ ಕೊನಬುಗಾರನಾಗಿ 4

ಹೊಳೆವ ಪ್ರಪಂಚದ ಬಲೆಯ ಬೀಸಿ ಸಂಗ-ಡಲೆ ಸಾಗಿ ಬರುತಿಹ ದಾರಿಯೊಳು ||ಒಲಿದು ಮುಕ್ತಿಯನೀವ ಪುರಂದರವಿಠಲನುಬಲವನಿತ್ತುದರಿಂದೆ ನಾನು ನೀನೆನ್ನದೆ 5
***********