Showing posts with label ಪರಮ ಪಾವನಳು ಪರಮಾತ್ಮನ ಗುಣ ankita madhwesha krishna harapanahalli bheemavva stutih. Show all posts
Showing posts with label ಪರಮ ಪಾವನಳು ಪರಮಾತ್ಮನ ಗುಣ ankita madhwesha krishna harapanahalli bheemavva stutih. Show all posts

Saturday 1 May 2021

ಪರಮ ಪಾವನಳು ಪರಮಾತ್ಮನ ಗುಣ ankita madhwesha krishna harapanahalli bheemavva stutih

ಹರಪನಹಳ್ಳಿ  ಭೀಮವ್ವನವರ stutih

ಗುರುವು ನಾರದರಿಂದ ಅನುಗ್ರಹ ಪಡೆದಿಹ ಹರದಿ ಭೀಮವ್ವನ ನೆನೆಯೋಣ


ಪರಮ ಪಾವನಳು ಪರಮಾತ್ಮನ ಗುಣ 

ಪರಿ ಪರಿಯಲಿ ಹೊಗಳಿದ||ಪಲ್ಲ||


ಸ್ತುತಿ ಮಣಿ ಮಾಲಿಕೆ, 

ಮುಯ್ಯದ ಹಾಡು ರತಿಕಲ್ಯಾಣ ಸುಭದ್ರ ಕಲ್ಯಾಣ

ಶಕುಂತಳನ  ಹಾಡು ದಾನವ್ರತದ ಹಾಡು ನಳ ಚರಿತ್ರೆ 

108 ನಾರಾಯಣ

ಸಂಕ್ಷೇಪ ರಾಮಾಯಣ ಜಲಕ್ರೀಡಿ ಪಾರಿಜಾತ ಉಧ್ಧವಗೀತ

ಸಮುದ್ರ ಮಥನದ ಹಾಡು ಸೀರೆ   ಸೆಳೆದಹಾಡು ಶ್ರಿನಿವಾಸ 

ಕಲ್ಯಾಣ ಮೊದಲಾದ||೧||


ತೀರ್ಥಯಾತ್ರೆಗೆ ಪೋಗಿ ಗಂಗಾಸ್ನಾನವ ಮಾಡಿ, 

ಸರಸ್ವತಿ ನದಿಯನ್ನ ಧ್ಯಾನಿಸಲು

ಸರಸ್ವತಿ ನದಿಯು ಗುಪ್ತಗಾಮಿನಿ ಕೆಂಪು ಸೀರೆಯು ಹಾಸಿದಂತೆ

ತರಂಗಗಳು ಬರಲು, ನಾವೆಗಳು ಹೋಗುತ್ತಿರಲು ಮತ್ತೆ

ಸ್ನೇಹಿತಳಾದ ಬೃಂದಾವನಿಗೆ ಕೂಡ  ದರುಶನ ಕೋರಲು||೨||


ಪಾತ್ರರ ಸಂಗಡ ಯಾತ್ರೆ ಮಾಡಬೇಕೆನ್ನುತ ಜಗನ್ನಾಥದಾಸರು 

ತಿಳಿಸಿ ದಂತೆ

ಭೀಮವ್ವನ ಜೊತೆ ಯಾತ್ರೆ ಮಾಡಿ ಬೃಂದಾವನಿಗೆ ಕೂಡ 

ದರುಶನವಾಯಿತೆಂದು

ಶ್ರಧ್ಧೆಯಿಂದಲಿ ಬಂದು ಶುಧ್ಧಮನದಿ ಶುಧ್ಧಾತ:ಕ್ಕರಣದಿ ಬೇಡಲು

ಮಧ್ವೇಶಕೃಷ್ಣನು ಒಲಿಯುವನು ನಮ್ಮನ ಉಧ್ಧಾರ ಮಾಡುವನು||೩||

*******