Showing posts with label ದಾರ ಕಂದನಮ್ಮ ಕೇರಿಗೆ ಬಂದು ಗಾರುಮಾಡುವ ನೋಡಲಾರೆ bheemesha krishna. Show all posts
Showing posts with label ದಾರ ಕಂದನಮ್ಮ ಕೇರಿಗೆ ಬಂದು ಗಾರುಮಾಡುವ ನೋಡಲಾರೆ bheemesha krishna. Show all posts

Wednesday 1 September 2021

ದಾರ ಕಂದನಮ್ಮ ಕೇರಿಗೆ ಬಂದು ಗಾರುಮಾಡುವ ನೋಡಲಾರೆ ankita bheemesha krishna

 ..


ದಾರ ಕಂದನಮ್ಮ ಕೇರಿಗೆ ಬಂದು

ಗಾರುಮಾಡುವ ನೋಡಲಾರೆ ಗೋಪ್ಯಮ್ಮ

ಈರೇಳು ಲೋಕದೊಡೆಯನೊ ದಾರಮ್ಮ ಪ


ಪಿಡಿದಿದ್ದ ಕೊಳಲೂದುವ ಬಾಯಲಿ ಬೆಣ್ಣೆ

ಕಡಗೋಲ ಪಿಡಿದಿದ್ದ ಬೆಡಗು ನೋಡಮ್ಮ

ಬಿಡಿಮುತ್ತಿನ ಉಡಿದಾರವು ಉಡಿಗಂಟೆ

ಮುಡಿದ ಮಲ್ಲಿಗೆ ಕುಸುಮಗಳು ನೋಡಮ್ಮ

ಕುಡಿಹುಬ್ಬು ಕಡೆಗಣ್ಣನೋಟದ ಚೆಲುವ ತಾ

ಹುಡುಗರಂತಾಡುವ ತುಡುಗ ತಾನಮ್ಮ 1


ಪೊಕ್ಕಳ ಕಮಲ ನಕ್ಷತ್ರದ ಪತಿಯಂತೆ

ಇಪ್ಪೊ ವಜ್ರದ ಪದಕಗಳ ನೋಡಮ್ಮ

ಅರ್ಕನಂತಿರಲತಿ ಕೋಮಲಪಾದಕೆ

ಶುಕ್ಲಗೆ ಮಿಗಿಲಾದ ಗುರು ಕೇಳಮ್ಮ

ಕತ್ತಲೊಳಗೆ ಕಳ್ಳತನದಿಂದೋಡಾಡುತ

ಕಟ್ಟಿದ ಪಂಜಿನಂತ್ಹೊಳೆವೊ ಕೇಳಮ್ಮ 2


ಕಟ್ಟಿದ ನೆಲವಿನೊಳ್ ಮಕ್ಕಳ ಮಲಗಿಸಿ

ಎಷ್ಟು ಘಾತಕÀ ತಾ ಕೈಬಿಟ್ಟ ನೋಡಮ್ಮ

ತೊಟ್ಟಿಲೊಳಗೆ ಕೆನೆಮೊಸರಿನ ಚಟ್ಟಿಗೆ

ಇಟ್ಟು ತೂಗುತ ಮೆಲ್ಲುವನು ಕೇಳಮ್ಮ

ಕಟ್ಟಿದ್ದಾಕಳ ಕಣ್ಣಿ ಬಿಚ್ಚಿ ಮೊಲೆಗೆ ಬಾಯ್ಹಚ್ಚಿ

ಕ್ಷೀರವ ಸುರಿದುಂಬುವನಮ್ಮ 3


ತೋಳ ಬಾಪುರಿ ವಂಕಿ ತೋಡ್ಯ ಬಿಂದಲಿ ಚಕ್ರ-

ಪಾಣಿಯಲ್ಲೊ ್ಹಳೆವೊ ಮುದ್ರಿಕೆಯ ನೋಡಮ್ಮ

ಆಣಿ ಮುತ್ತಿನ ಸರ ಅರಳೆಲೆ ಪದಕವು

ಕಾಲ ಕಿಂಕಿಣಿ ನಾದಗಳ ಕೇಳಮ್ಮ

ತೋರ ಮುತ್ತುಗಳೋಣಿಯಲುದುರುತ ಒ-

ಯ್ಯಾರದೊಲಪಿನ ಚೆದುರ್ಯಾರು ಪೇಳಮ್ಮ4


ಮನ್ಮಥನಿಗೆ ಮಿಗಿಲಾದ ಸ್ವರೂಪಲಾವಣ್ಯನೆ

ನೀಲದ ವರ್ಣ ಕೇಳಮ್ಮ

ಹುಣ್ಣಿಮೆ ಚಂದ್ರಮನ್ನ ಸೋಲಿಸೋಮುಖ

ಇನ್ನು ಇವನÀ ಸೌಂದರ್ಯ ನೋಡಮ್ಮ

ಹೆಣ್ಣು ಮಕ್ಕಳ ಸೆರಗನ್ನು ಕೈಯ್ಯಲಿ ಸುತ್ತಿ

ಬೆನ್ನು ಬೆನ್ಹತ್ತಿ ತಾ ತಿರುಗುವನಮ್ಮ 5


ಚೀನಿ ಅಂಗಿಯ ಮ್ಯಾಲೆ ಚಿತ್ರದ ನಡುಕಟ್ಟಿ ಜಾರ

ಜರದ ಛಾದರವ ನೋಡಮ್ಮ

ಸೋಗೆ ನವಿಲು ಗಿಳಿ ಕೋಗಿಲೆ ಸ್ವರದಂತೆ

ವೇಣು ಕೊಳಲ ಗಾಯನವ ಕೇಳಮ್ಮ

ಮೇಘಮಂಡಲ ತಲೆತಾಕುವ ಹರಿಯದೆ ತಾ

ಜಿಗಿದಾಡೋನಂಗಳದಿ ಕೇಳಮ್ಮ 6


ಎಷ್ಟು ಹೇಳಿದರೀ ಮಾತು ಮನಕೆ ನಿಜ

ಹುಟ್ಟವಲ್ಲದೇನೀಗ ಬಾರೆ ಗೋಪಮ್ಮ

ಬಿಟ್ಟು ಕೆಲಸ ಭೀಮೇಶಕೃಷ್ಣಗೆ ಬುದ್ಧಿ

ಎಷ್ಟು ಹೇಳುವಿ ಮುಂದ್ಹೇಳಲೇಕಮ್ಮ

ಸಿಟ್ಟು ಮಾಡುವರೇನೆ ಸಿರಿಪತಿ ಆಟ ನಿನ್ನ

ದೃಷ್ಟಿಂದ ನೋಡೆ ನಿಜಹುಟ್ಟುವುದಮ್ಮ7

***