Showing posts with label ಕಾಳಿಂಗನಾ ಮೆಟ್ಟೆ ನಾಟ್ಯವ ಆಡಿದ ಕಂಜನಾಭ ಕೃಷ್ಣನು shree krishna KAALINGANA METTI NAATYAVA AADIDA KANJANAABHA KRISHNANU. Show all posts
Showing posts with label ಕಾಳಿಂಗನಾ ಮೆಟ್ಟೆ ನಾಟ್ಯವ ಆಡಿದ ಕಂಜನಾಭ ಕೃಷ್ಣನು shree krishna KAALINGANA METTI NAATYAVA AADIDA KANJANAABHA KRISHNANU. Show all posts

Tuesday 21 September 2021

ಕಾಳಿಂಗನಾ ಮೆಟ್ಟೆ ನಾಟ್ಯವ ಆಡಿದ ಕಂಜನಾಭ ಕೃಷ್ಣನು ankita shree krishna KAALINGANA METTI NAATYAVA AADIDA KANJANAABHA KRISHNANU


 ರಾಗ ಹಂಸಾನಂದಿ   ಆದಿತಾಳ 

Audio by Mrs. Nandini Sripad

ಶ್ರೀ ವ್ಯಾಸರಾಯರ ಕೃತಿ 

ಕಾಳಿಂಗನ ಮೆಟ್ಟಿ ನಾಟ್ಯವ ಆಡಿದ ಕಂಜನಾಭ ಕೃಷ್ಣನು ॥ ಪ ॥
ಕಾಳಿಂಗನ ಮೆಟ್ಟಿ ಆಡಿದ ಭರದಲ್ಲಿ ।
ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ ।
ತರಳತನದಲ್ಲಿ ಯಮುನೆಯ ಮಡುವಲ್ಲಿ ಆಡುತ್ತ ಪಾಡುತ್ತ ॥ ಅ ಪ ॥

ಕಾಲಲಿ ಗೆಜ್ಜೆ ಘಲುಘಲು ಘಲುಕೆಂದು ।
ಫಾಲದಿ ತಿಲಕವು ಹೊಳೆ ಹೊಳೆ ಹೊಳೆಯುತ್ತ ।
ಕರ್ಣಕುಂಡಲವು ಥಳು ಥಳು ಥಳುಕೆಂದು ॥
ಲಲಿತ ಮಣಿಮಯೋಜ್ವಲಿತ ಪದಕಹಾರ ।
ಜ್ವಲಿತಕಾಂತಿ ಬೆಳಗುತ ದಿಕ್ಕುಗಳಲ್ಲಿ ॥ 1 ॥

ಸುರರು ದುಂದುಭಿಯ ಢಣಢಣ ಢಣರೆಂದು ।
ಮೊರೆಯೆ ತಾಳಗಳು ಝಣಝಣ ಝಣರೆಂದು ।
ಹರಬ್ರಹ್ಮ ಸುರರು ತತ್ತೈ ತತ್ತೈ ಯೆನಲು ॥
ನಾರದ ತುಂಬುರು ಸಿದ್ಧರು ವಿದ್ಯಾ - ।
ಧರರು ಅಂಬರದಲ್ಲಿ ಆಡುತ ಪಾಡಲು ॥ 2 ॥

ಯೋಗಿಗಳೆಲ್ಲ ಜಯ ಜಯ ಜಯವೆನ್ನೆ ।
ಭೋಗಿಗಳೆಲ್ಲ ಭಯ ಭಯ ಭಯವೆನ್ನೆ ।
ನಾಗಕನ್ಯೆಯರು ಅಭಯ ಅಭಯವೆನ್ನೆ ॥
ಜಗದೀಶ ಶ್ರೀಕೃಷ್ಣ ಜನನಿಯ ಕಂಡೋಡಿ ।

ಧಿಗಿಧಿಗಿನೇ ಬಂದು ಬಿಗಿದಪ್ಪುತ ॥ 3 ॥
***

Kalingana metti natyavadida kanjanaba krushnanu | pa |

Kalingana metti adida Baradalli srivatsa uradalli koralalli vanamale
Taralatanadalli yamuneya maduvinalli adutta padutta | a.pa |

Kalali gejje Gulu Gulukenne
Galadi tilakavu holehole holeyutta
Alita manimaya lalita padakahara
Alita kanti belaguta dikkugalali | 1 |

Suraru dundubiya dhanadhana dhanarendu
Moreya talagalu junajuna junarendu
Harabrahma suraru tathai tathai enalu | narada tumbara siddharu vidya
Dhararu ambaradali Adutta padalu | 2 |

Yogigalella jaya jaya jayavenne
Bogigalella Baya Baya Bayavenne
Nagakanyeyaru abaya abayavenne | nagasayana sirikrushna jananiya kandu
Begane bigidappi muddanu torida | 3 |
***


ಶ್ರೀ ವ್ಯಾಸರಾಯರ ಕೃತಿ 

 ರಾಗ ಹಂಸಾನಂದಿ      ಆದಿತಾಳ 

ಕಾಳಿಂಗನ ಮೆಟ್ಟಿ ನಾಟ್ಯವ ಆಡಿದ ಕಂಜನಾಭ ಕೃಷ್ಣನು ॥ ಪ ॥
ಕಾಳಿಂಗನ ಮೆಟ್ಟಿ ಆಡಿದ ಭರದಲ್ಲಿ ।
ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ ।
ತರಳತನದಲ್ಲಿ ಯಮುನೆಯ ಮಡುವಲ್ಲಿ ಆಡುತ್ತ ಪಾಡುತ್ತ ॥ ಅ ಪ ॥

ಕಾಲಲಿ ಗೆಜ್ಜೆ ಘಲುಘಲು ಘಲುಕೆಂದು ।
ಫಾಲದಿ ತಿಲಕವು ಹೊಳೆ ಹೊಳೆ ಹೊಳೆಯುತ್ತ ।
ಕರ್ಣಕುಂಡಲವು ಥಳು ಥಳು ಥಳುಕೆಂದು ॥
ಲಲಿತ ಮಣಿಮಯೋಜ್ವಲಿತ ಪದಕಹಾರ ।
ಜ್ವಲಿತಕಾಂತಿ ಬೆಳಗುತ ದಿಕ್ಕುಗಳಲ್ಲಿ ॥ 1 ॥

ಸುರರು ದುಂದುಭಿಯ ಢಣಢಣ ಢಣರೆಂದು ।
ಮೊರೆಯೆ ತಾಳಗಳು ಝಣಝಣ ಝಣರೆಂದು ।
ಹರಬ್ರಹ್ಮ ಸುರರು ತತ್ತೈ ತತ್ತೈ ಯೆನಲು ॥
ನಾರದ ತುಂಬುರು ಸಿದ್ಧರು ವಿದ್ಯಾ - ।
ಧರರು ಅಂಬರದಲ್ಲಿ ಆಡುತ ಪಾಡಲು ॥ 2 ॥

ಯೋಗಿಗಳೆಲ್ಲ ಜಯ ಜಯ ಜಯವೆನ್ನೆ ।
ಭೋಗಿಗಳೆಲ್ಲ ಭಯ ಭಯ ಭಯವೆನ್ನೆ ।
ನಾಗಕನ್ಯೆಯರು ಅಭಯ ಅಭಯವೆನ್ನೆ ॥
ಜಗದೀಶ ಶ್ರೀಕೃಷ್ಣ ಜನನಿಯ ಕಂಡೋಡಿ ।
ಧಿಗಿಧಿಗಿನೇ ಬಂದು ಬಿಗಿದಪ್ಪುತ ॥ 3 ॥
***********


ಕಾಳಿಂಗನಾ ಮೆಟ್ಟೆ ನಾಟ್ಯವ 
ಆಡಿದ ಕಂಜನಾಭ ಕೃಷ್ಣನು || ಪ. ||

ಕಾಳಿಂಗನಾ ಮೆಟ್ಟಿ ಆಡಿದ ಭರದಲ್ಲಿ 
ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ 
ತರಳತನದಲ್ಲಿ ಯಮುನೆಯ 
ಮಡುವಲ್ಲಿ ಆಡುತ್ತ ಪಾಡುತ್ತ ||  ಅ. ಪ. ||

ಕಾಲಲಿ ಗೆಜ್ಜೆ ಘಲುಘಲು ಘಲುಕೆನ್ನೆ |
ಫಾಲದಿ ತಿಲಕವು ಹೊಳೆ ಹೊಳೆಯುತ್ತ||  
ಲಲಿತ ಮಣಿಮಯೋ ಜ್ವಲಿತ ಪದಕ ಹಾರ 
ಜ್ವಲಿತ ಕಾಂತಿ ಬೆಳಗುತ ದಿಕ್ಕುಗಳಲ್ಲಿ || 1 ||

ಸುರರು ದುಂದುಭಿಯ ಢಣಢಣ ಢಣರೆಂದು| 
ಮೊರೆಯೆ ತಾಳಗಳು ಝಣಝಣ ಝಣಾರೆಂದು|| 
ಹರಬ್ರಹ್ಮ ಸುರರು ತಥ್ಥೈತಥ್ಥೈಯೆನ್ನಲು| 
ನಾರದ ತುಂಬುರ ಸಿದ್ಧರು ವಿದ್ಯಾ-ಧರರು 
ಅಂಬರದಲ್ಲಿ ಆಡುತ್ತ ಪಾಡಲು || 2 ||

ಯೋಗಿಗಳೆಲ್ಲ ಜಯ ಜಯ ಜಯವೆನ್ನೆ 
ಭೋಗಿಗಳೆಲ್ಲ ಭಯಭಯ ಭಯವೆನ್ನೆ 
ನಾಗ ಕನ್ಯೆಯರು ಅಭಯ ಅಭಯವೆನ್ನೆ 
ಜಗದೀಶ ಸಿರಿ ಕೃಷ್ಣ ಜನನಿಯ ಕಂಡು 
ಧಿಗಿ ಧಿಗಿನೆ ಬಂದು ಬಿಗಿ ಬಿಗಿದಪ್ಪಿದ || 3 ||
*******