..
ಬಲ್ಲಹ ಮುಟ್ಟದಿರೆನ್ನನುಪ.
ಬಲ್ಲಹ ಮುಟ್ಟದಿರೆನ್ನ ಬಗೆಯ ಮೋಹನ್ನ ರನ್ನಮಲ್ಲಿಗೆಗೋಲಮದಭಂಗ ಮಧುರೇಶ ಲಿಂಗ ಅ.ಪ.
ಕನ್ನೆವೆಣ್ಣ ಕಂಡಮ್ಯಾಲೆ ಕದಡಿತು ನಿನ್ನ ಲೀಲೆನನ್ನ ಕೂಡಿನ್ನ್ಯಾತರ ಲಲ್ಲೆ ನಗೆಯ ಬಲ್ಲೆಇನ್ನು ನಾನ್ಯಾತಕೆ ಬೇಕು ಇಷ್ಟರ ಬಗೆಯೆ ಸಾಕುಮುನ್ನಿನ ಗುಣ ನಿನ್ನಲ್ಲಿಲ್ಲ ಮುದ್ದ್ದಿಸಸÀಲ್ಲ 1
ಮಂಡೆಯೊಳಗೆ ಪೆಣ್ಣ ಮಡುಗುವರೆ ಮುಕ್ಕಣ್ಣಲೆಂಡತನವ್ಯಾತಕೆನ್ನೊಳು ಲೇಸೆ ಕೇಳುಕಂಡು ನಾ ತಾಳುವಳಲ್ಲ ಕಪಟ ಎಳ್ಳಿನಷ್ಟಿಲ್ಲಉಂಡಮ್ಯಾಲಿನ್ಯಾತಕೊ ಹಟ ಉಣ್ಣೆನೊ ಬೇಟ 2
ಯತಿಕುಲಕಲ್ಪಭೂಜ ಎಸೆವ ಶ್ರೀ ರವಿತೇಜಸತತ ಶ್ರೀ ಹಯವದ[ನ]ನ್ನ ಸಖ ಮೋಹನ್ನಗತಿ ನೀನೆ ದೇವೋತ್ತುಂಗ ಗಂಭೀರ ನವಮೋಹನಾಂಗಮತಿಯಿತ್ತು ಕೂಡೊ ಎನ್ನ ಮಧುರೇಶ[ರ]ನ್ನ 3
***