Showing posts with label ದಯದೋರೋ ದೇವ ಗುರುರಾಜನೆ vittalesha. Show all posts
Showing posts with label ದಯದೋರೋ ದೇವ ಗುರುರಾಜನೆ vittalesha. Show all posts

Monday, 6 September 2021

ದಯದೋರೋ ದೇವ ಗುರುರಾಜನೆ ankita vittalesha

 ankita ವಿಠಲೇಶ  

ರಾಗ: ಕಾಪಿ ತಾಳ: ಕವ್ವಾಲಿ 


ದಯ ದೋರೋ ದೇವ ಗುರುರಾಜನೆ

ಭಯವಾದುದೆನಗೆ ಭವ ಸಾಗದಾಗಿ


ಮೋಹಜಾಲದಲ್ಲಿ ಮಂದ ಬುದ್ಧಿಯಾಗಿ

ದೇಹ ಕೊರಗಿತಯ್ಯಾ ರಾಘವೇಂದ್ರ ರಾಯಾ 1

ಅನ್ನ ವಸ್ತ್ರಕಾಗಿ ಅನ್ಯ ದಾಸನಾಗಿ

ಬನ್ನಬಟ್ಟೆನಯ್ಯಾ ಘನ್ನ ವ್ಯಾಸರಾಯಾ 2

ಹಟವೇಕೆ ಜೀಯಾ ದಿಟ ಯೋಗಕಾಯಾ

ವಿಠಲೇಶ ಪ್ರೀಯಾ ಪ್ರಹ್ಲಾದರಾಯಾ 3

***