Showing posts with label ನಿನ್ನ ದಯದಿಂದಲೇ ಎನ್ನ ಜೀವನವು ಘನ್ನ ಗೋಪಾಲ ವಿಠ್ಠಲ ದಾಸರಾಯ prasannashreenivasa. Show all posts
Showing posts with label ನಿನ್ನ ದಯದಿಂದಲೇ ಎನ್ನ ಜೀವನವು ಘನ್ನ ಗೋಪಾಲ ವಿಠ್ಠಲ ದಾಸರಾಯ prasannashreenivasa. Show all posts

Thursday, 5 August 2021

ನಿನ್ನ ದಯದಿಂದಲೇ ಎನ್ನ ಜೀವನವು ಘನ್ನ ಗೋಪಾಲ ವಿಠ್ಠಲ ದಾಸರಾಯ ankita prasannashreenivasa

 ..


kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಗೋಪಾಲದಾಸರು


ನಿನ್ನ ದಯದಿಂದಲೇ ಎನ್ನ ಜೀವನವು

ಘನ್ನ ಗೋಪಾಲ ವಿಠ್ಠಲ ದಾಸರಾಯ ಪ


ತುಂಗೆ ಕೃಷ್ಣೆ ಮಧ್ಯರಂಗ ಕ್ಷೇತ್ರದಿ ಮುದದಿ

ತುಂಗ ವಿಜಯಾರ್ಯರ ಪದಂಗಳಿಗೆ ಎರಗಿ

ಗಂಗೆಪಿತ ಮಾತಂಗ ವರದನಾಮನ ಅಂತ

ರಂಗದಿ ನೋಡಿ ಗುಣಗಳನು ಪಾಡಿದೆಯೊ 1

ಅನುಜರಿಗು ಅಚಲ ಮಾತೆಗು ಶರಣು ಸುಜನರಿಗು

ಮೌನಿ ಪಂಡಿತರಿಗೂ ಎನ್ನಂಥ ಪಾಮರಗು

ಜ್ಞಾನ ಸುತತ್ವ ಸನ್ಮಾರ್ಗ ಬೋಧಿಸಿ ಜಗ

ನ್ನಾಥನ ಮನಸಿನ ಅನುಭವಕೆ ತಂದೆ 2

ಬೇಸರದಿ ನಾ ಸೀತಾಪತಿಪಲ್ಲಿಯಲಿ ಮಲಗೆ

ಏಸು ಕರುಣವೊ ದಾಸರಾಜ ನೀ ಬಂದು

ವ್ಯಾಸಮುನಿಮಠ ಗುರುಪೂಜೆಗೆ ಕರೆದೊಯ್ದು

ದಶಪ್ರಮತಿ ಭಾಷ್ಯಪಠನಾರ್ಚನೆಯ ತೋರಿಸಿದೆ 3

ಗೋ ಎನಲು ಗರುಡವಾಹನ ಪೀಡೆ ಪರಿಹರಿಪ

ಪಾ ಎನಲು ಪರಮಪೂರುಷ ಪಾಲಿಸುವ

ಲ ಎನಲು ಲಕ್ಷ್ಮೀಶ ನಿಖಿಳೇಷ್ಟಗಳನೀವ

ಅನವರತ ಗೋಪಾಲದಾಸರಿಗೆ ಶರಣು 4

ಆನಂದಮುನಿಹೃಸ್ಥ ವನಜಸಂಭವಪಿತ ಪ್ರ

ಸನ್ನ ಶ್ರೀನಿವಾಸ ಜಗನ್ನಾಥ ನಿನ್ನ

ನಿನ್ನವರ ಪಾದ ಸಂಸ್ಮರಿಸುವ ಸುಜನರನು

ಅನವರತ ಪಾಲಿಸುವ ಸಂದೇಹವಿಲ್ಲ 5

***