ಶ್ರೀ ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ
ದೃಷ್ಟಿದೋಷವು ತಗುಲಿತು ಎನ್ನ ಕಂದನಿಗೆ
ದೃಷ್ಟಿಗೋಚರನಲ್ಲದಾ ದೇವ ರಕ್ಷಿಸಲಿ॥
ಸೇರು ಬೆಣ್ಣೆಯ ತಿಂದ ದೂರು ಕೇಳಿದನಿಂದು
ಚಾರುಮುಖಿಯರ ನೋಟ ಕ್ರೂರವೆಂದರಿ ಕಂದ
ಈರೇಳು ಭುವನಗಳ ತಿಂದು ತೇಗುವ ದೇವ
ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ॥
ಎಂದು ಕಾಣೆವು ಇಂಥಾ ಸುಂದರನ ನಾವೆಂದು
ಮಂದಗಮನೆಯರ ನುಡಿ ಅಂದವಾಯಿತೆ ಕಂದ
ಸಂದೇಹವಿಲ್ಲವರ ಶೃಂಗಾರಕೀಫಲವು
ಸೌಂದರ್ಯಜಲಧಿ ಮುನುಮಥನ ಮನುಮಥನೇ ಗತಿ॥
ನೀರು ಮಂತ್ರಿಸಿದಾಯ್ತು ಬೂದಿ ಮಂತ್ರಿಸಿದಾಯ್ತು
ನಾರಸಿಂಹಾದಿ ವರಮಂತ್ರಗಳ ಜಪವಾಯ್ತು
ಭಾರಿ ಪುಸಿಯಾಯ್ತು ಜನನಿಯು ಹರಿಸಿದೀತನಲಿ
ಮೀರಿಹನು ಯಂತ್ರಮಂತ್ರಾರ್ಥವೆಲ್ಲಾ ಪ್ರಸನ್ನ ॥
***
dr̥ṣṭidoṣavu tagulitu enna kaṁdanige
dr̥ṣṭigōcharanalladā dēva rakṣisali॥
sēru beṇṇeya tiṁda dūru kēḷadanindu
chārumukhiyara nōṭa krūravendari kaṁda
īrāḷu bhuvanagaḷa tiṁdu tēguva dēva
ārōgyabhāgyavanu ninage karuṇisali॥
eṁdu kāṇevu iṁthā suṁdaranu nāveṁdu
maṁdagamaneyara nuḍi aṁdavāyite kaṁda
saṁdēhavillavara śr̥ṅgārakīphalavu
sauṁdaryajaladhi manmathana manmathanē gati॥
nīru maṁtrisidāytu būdi maṁtrisidāytu
nārasiṁhādi varamantragaḷa japavāytu
bhāri pusiyāytu janiyu harisidītanali
mīrihanu yantramantrārthavella prasanna ॥
***
Pronunciation Guide
Pronounce 'ś' like the 'sh' in "shoe" and 'ṇ' and 'ḷ' with the tongue retroflexed against the roof of the mouth.
Long vowels (marked with a macron like ā, ī, ū) should be held for twice the duration of short vowels.
The retroflex 'ṭ' and 'ḍ' require curling the tongue tip back to touch the hard palate.
Read 'c' as 'ch' (as in "church") and double consonants (like 'tt' or 'll') with a slight emphasis.
Sanskrit/Kannada aspirates like 'bh' and 'dh' are pronounced with an audible puff of breath following the consonant.
***
Summary (Kannada)
ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರ ಈ ವಾತ್ಸಲ್ಯಭರಿತ ಕೃತಿಯಲ್ಲಿ ಜನಸಮ್ಮೋದಿನಿ ರಾಗ ಹಾಗೂ ಖಂಡಛಾಪು ತಾಳದಲ್ಲಿ ಯಶೋದೆ ಅಥವಾ ದೇವಕಿಯ ಭಾವದಲ್ಲಿ ಬಾಲಕೃಷ್ಣನಿಗೆ ದೃಷ್ಟಿದೋಷ ತಗುಲಿದೆ ಎಂದು ತಾಯಿಯು ಪರಿತಪಿಸುವ ದೃಶ್ಯವನ್ನು ಮನೋಹರ3ವಾಗಿ ವರ್ಣಿಸಲಾಗಿದೆ. "ಕಣ್ಣಿಗೆ ಕಾಣದ ಪರಮಾತ್ಮನೇ ನನ್ನ ಕಂದನನ್ನು ರಕ್ಷಿಸಲಿ" ಎಂದು ಪ್ರಾರ್ಥಿಸುತ್ತಾ, ಗೋಪಿಕೆಯರ ನೋಟ ಹಾಗೂ ಹೊಗಳುವ ನುಡಿಗಳಿಂದ ಕಂದನಿಗೆ ದೃಷ್ಟಿಯಾಗಿದೆ ಎಂದು ತಾಯಿ ಭಾವಿಸುತ್ತಾಳೆ. ನೀರು ಮಂತ್ರಿಸುವುದು, ಬೂದಿ ಹಾಕುವುದು, ನರಸಿಂಹಾದಿ ಮಂತ್ರಗಳನ್ನು ಜಪಿಸುವುದು ಏನೆಲ್ಲಾ ಮಾಡಿದರೂ ಈ ಲೀಲಾಚ್ಯುತನ ಮಾಯೆಯನ್ನು ಮೀರಿ ನಿಲ್ಲಲು ಸಾಧ್ಯವಿಲ್ಲ; ಕಡೆಗೆ ಆ ಪ್ರಸನ್ನವೆಂಕಟೇಶನೇ ಆ ಕಂದನಿಗೆ ಗತಿಯೆಂದು ಭಕ್ತಿಪೂರ್ವಕವಾಗಿ ಸ್ತುತಿಸಲಾಗಿದೆ.
Padyada Artha (Kannada Stanza and Meaning)
ಪಲ್ಲವಿ
ದೃಷ್ಟಿದೋಷವು ತಗುಲಿತು ಎನ್ನ ಕಂದನಿಗೆ
ದೃಷ್ಟಿಗೋಚರನಲ್ಲದಾ ದೇವ ರಕ್ಷಿಸಲಿ॥
ಅರ್ಥ: ನನ್ನ ಮುದ್ದಿನ ಕಂದನಿಗೆ ಯಾರದ್ದೋ ದೃಷ್ಟಿ (ಬೆಣ್ಣೆ ದೃಷ್ಟಿ/ಕಣ್ಣು) ತಗುಲಿದೆ; ಚರ್ಮಚಕ್ಷುಗಳಿಗೆ ಸಂಪೂರ್ಣವಾಗಿ ಗೋಚರನಲ್ಲದ ಆ ಪರಮಾತ್ಮನೇ ನನ್ನ ಮಗುವನ್ನು ರಕ್ಷಿಸಲಿ.
ಚರಣ ೧
ಸೇರು ಬೆಣ್ಣೆಯ ತಿಂದ ದೂರು ಕೇಳಿದನಿಂದು
ಚಾರುಮುಖಿಯರ ನೋಟ ಕ್ರೂರವೆಂದರಿ ಕಂದ
ಈರೇಳು ಭುವನಗಳ ತಿಂದು ತೇಗುವ ದೇವ
ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ॥
ರ್ಥ: ಇಂದು ಸೇರು ಗಟ್ಟಲೆ ಬೆಣ್ಣೆ ತಿಂದನೆಂಬ ದೂರು ಕೇಳಿಬಂತು; ಆ ಸುಂದರ ವದನೆಯರ (ಗೋಪಿಕೆಯರ) ತೀಕ್ಷ್ಣವಾದ ದೃಷ್ಟಿಯೇ ನಿನ್ನನ್ನು ಬಾಧಿಸಿದೆ ಕಂದಾ! ಹದಿನಾಲ್ಕು ಲೋಕಗಳನ್ನೇ ಉದರದಲ್ಲಿಟ್ಟುಕೊಂಡು ತಿಂದು ತೇಗುವ ಆ ಪ್ರಭುವು ನಿನಗೆ ಸಂಪೂರ್ಣ ಆರೋಗ್ಯಭಾಗ್ಯವನ್ನು ಕರುಣಿಸಲಿ.
ಚರಣ ೨
ಎಂದು ಕಾಣೆವು ಇಂಥಾ ಸುಂದರನ ನಾವೆಂದು
ಮಂದಗಮನೆಯರ ನುಡಿ ಅಂದವಾಯಿತೆ ಕಂದ
ಸಂದೇಹವಿಲ್ಲವರ ಶೃಂಗಾರಕೀಫಲವು
ಸೌಂದರ್ಯಜಲಧಿ ಮುನುಮಥನ ಮನುಮಥನೇ ಗತಿ॥
ರ್ಥ: "ನಾವು ಎಂದೆಂದಿಗೂ ಇಂತಹ ಸುಂದರ ಮಗುವನ್ನು ಕಂಡೇ ಇಲ್ಲ" ಎಂದು ಗೋಪಿಕೆಯರು ಆಡಿದ ಮಾತುಗಳೇ ಕಂದನಿಗೆ ಕಣ್ಣುಗುಟ್ಟುವಂತೆ (ಅಂದವಾಗುವಂತೆ) ಮಾಡಿತು. ಅದರಲ್ಲಿ ಯಾವುದೇ ಸಂದೇಹವಿಲ್ಲ; ಸೌಂದರ್ಯದ ಸಮುದ್ರನಾದ, ಮನ್ಮಥನಿಗೂ ಮನ್ಮಥನಾದ ಆ ದೇವನೇ ನಮಗೆ ಗತಿ.
ಚರಣ ೩
ನೀರು ಮಂತ್ರಿಸಿದಾಯ್ತು ಬೂದಿ ಮಂತ್ರಿಸಿದಾಯ್ತು
ನಾರಸಿಂಹಾದಿ ವರಮಂತ್ರಗಳ ಜಪವಾಯ್ತು
ಭಾರಿ ಪುಸಿಯಾಯ್ತು ಜನನಿಯು ಹರಿಸಿದೀತನಲಿ
ಮೀರಿಹನು ಯಂತ್ರಮಂತ್ರಾರ್ಥವೆಲ್ಲಾ ಪ್ರಸನ್ನ ॥
ರ್ಥ: ಮಗುವಿಗಾಗಿ ನೀರು ಮಂತ್ರಿಸಿಯಾಯಿತು, ಬೂದಿ ಹಾಕಿಯಾಯಿತು, ನರಸಿಂಹಾದಿ ಶ್ರೇಷ್ಠ ಮಂತ್ರಗಳ ಜಪವನ್ನೂ ಮಾಡಿಯಾಯಿತು; ಆದರೆ ಈತನ ಲೀಲೆ ಮುಂದೆ ಇವೆಲ್ಲವೂ ನುಶಿ (ಪುಸಿ)ಯಾಗಿಹೋದವು! ಈ ಸಕಲ ಯಂತ್ರ-ಮಂತ್ರಗಳ ಅರ್ಥವನ್ನೂ ಮೀರಿ ನಿಂತಿರುವ ಆ ಪ್ರಸನ್ನಮೂರ್ತಿಯೇ ರಕ್ಷಕ.
***
Summary (English)
In this deeply affectionate and maternal composition set in Raga Janasammodini and Khanda Chapu Tala, Sri Vidyaprasanna Teertha Swamiji depicts a tender scene where Mother Yashoda worries that little Krishna has been affected by the evil eye (drishti). Lamenting that the admiring gazes and praises of the cowherd maidens have cast a spell on her radiant child, the mother tries various traditional remedies—mantra-infused water and ashes—only to realize that her divine child transcends all mundane mantras and is ultimately protected by Lord Prasannavenkatesha Himself.
Meaning (English Transliterated Stanza and Meaning)
Pallavi
Dr̥ṣṭidoṣavu tagulitu enna kaṁdanie
dr̥ṣṭigōcharanalladā dēva rakṣisali॥
Meaning: An evil eye (drishti) has cast its shadow upon my darling child; may the invisible, supreme Lord protect him!
Stanza 1
Sēru beṇṇeya tiṁda dūru kēḷadanindu
chārumukhiyara nōṭa krūravendari kaṁda
īrāḷu bhuvanagaḷa tiṁdu tēguva dēva
ārōgyabhāgyavanu ninage karuṇisali॥
Meaning: Today came the complaint that he ate a seer of butter; O child, realize that the piercing gazes of the fair-faced maidens were harsh! May the Lord who consumes and burps out the fourteen worlds bestow the fortune of good health upon you.
Stanza 2
Eṁdu kāṇevu iṁthā suṁdaranu nāveṁdu
maṁdagamaneyara nuḍi aṁdavāyite kaṁda
saṁdēhavillavara śr̥ṅgārakīphalavu
sauṁdaryajaladhi manmathana manmathanē gati॥
Meaning: The women walked gracefully and praised, "We have never seen such a handsome boy," and those words became an evil eye for you, my child! Without a doubt, the fruit of their gaze is profound; the ocean of beauty, the very Kamadeva of Kamadeva (Lord Hari), is our ultimate refuge.
Stanza 3
Nīru maṁtri-sidāytu būdi maṁtrisidāytu
nārasiṁhādi varamantragaḷa japavāytu
bhāri pusiyāytu janiyu harisidītanali
mīrihanu yantramantrārthavella prasanna ॥
Meaning: Water was charmed with mantras, sacred ash was applied, and powerful mantras like Narasimha Stotram were chanted; yet all these remedies proved minor compared to this divine child's play! The Lord Prasannavenkatesha stands far beyond the scope of all mundane yantras and mantras.
***
ಶ್ರೀ ವಿದ್ಯಾಪ್ರಸನ್ನತೀರ್ಥ ಗುರುರಾಜರ ಸುಂದರ ರಚನೆ
ದೃಷ್ಟಿದೋಷವು ತಗಲಿತೆನ್ನ ಕಂದನಿಗೆ
ದೃಷ್ಟಿಗೋಚರನಲ್ಲದಾ ದೇವ ರಕ್ಷಿಸಲಿ॥
ಸೇರು ಬೆಣ್ಣೆಯ ತಿಂದ ದೂರು ಕೇಳಿದನಿಂದು
ಚಾರುಮುಖಿಯರ ನೋಟ ಕ್ರೂರವೆಂದರಿ ಕಂದ
ಈರೇಳು ಭುವನಗಳ ತಿಂದು ತೇಗುವ ದೇವ
ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ॥
ಎಂದು ಕಾಣೆವು ಇಂಥಾ ಸುಂದರನ ನಾವೆಂದು
ಮಂದಗಮನೆಯರ ನುಡಿ ಅಂದವಾಯಿತೆ ಕಂದ
ಸಂದೇಹವಿಲ್ಲವರ ಶೃಂಗಾರಕೀಫಲವು
ಸೌಂದರ್ಯಜಲಧಿ ಮುನುಮಥನ ಮನುಮಥನೇ ಗತಿ॥
ನೀರು ಮಂತ್ರಿಸಿದಾಯ್ತು ಬೂದಿ ಮಂತ್ರಿಸಿದಾಯ್ತು
ನಾರಸಿಂಹಾದಿ ವರಮಂತ್ರಗಳ ಜಪವಾಯ್ತು
ಭಾರಿ ಪುಸಿಯಾಯ್ತು ಜನನಿಯು ಹರಿಸಿದೀತನಲಿ
ಮೀರಿಹನು ಯಂತ್ರಮಂತ್ರಾರ್ಥವೆಲ್ಲಾ ಪ್ರಸನ್ನ ॥
***
Meaning
ದೃಷ್ಟಿ ಬೀಳೋದು ಅಂದರೆ ಅದು ಬೇರೆಯವರ ನೋಟದ ದೃಷ್ಟಿಯಿಂದ ಸೃಷ್ಟಿಯಾಗುವ ಒಂದು ಛಾಯೆಯ ಕಾಣದ ರೂಪ.. ಯಾರ ಮೇಲೆ ಬಿದ್ದಿರುತ್ತೋ ಅವರ ಸುತ್ತುವರೆದು ಇದ್ದು, ಸುಸ್ತು, ಕಣ್ಣು ಉರಿ,ಊಟ ತಿಂಡಿ ಸೇರದಂತಿರುವುದು, ಅತೀಯಾದ ಆಕಳಿಕೆ, ನಿದ್ರೆ, ಚಿಕ್ಕ ಮಕ್ಕಳಿಗಾದರೆ ಹಟ ಹೀಗೆ ನಾನಾ ರೂಪದಲ್ಲಿ ಪರಿಣಾಮ ಬೀರುತ್ತದೆ. ಕೆಲವು ಜನರ ದೃಷ್ಟಿ ಕ್ರೂರವಾಗಿದ್ದು ಬೇಗ ಪರಿಣಾಮ ಬೀರುತ್ತದೆ. ಇಂತಹ ದೃಷ್ಟಿಯ ಬಗ್ಗೆ ಕೆಲವರಿಗೆ ನಂಬಿಕೆ ಇಲ್ಲ.. ಅವೆಲ್ಲಾ ಮೂಢನಂಬಿಕೆ ಅಂತ ಹೇಳುತ್ತಾರೆ. ಆದರೆ ಇದು ಪ್ರಾಚೀನ ಕಾಲದಿಂದಲೂ ನಂಬಿಕೊಂಡು ಬಂದಿರುವ ಸಂಪ್ರದಾಯ. ಸಾಮಾನ್ಯವಾಗಿ ಮಕ್ಕಳಿಗೆ ಬೇಗ ದೃಷ್ಟಿಯ ಪರಿಣಾಮವಾಗ್ತದೆ. ಹಾಗಾಗದಂತೆ ಶುದ್ಧವಾಗಿ ತಯಾರಿಸಿದ ಕಾಡಿಗೆ ಪ್ರತಿನಿತ್ಯ ಹಚ್ಚುತ್ತಾರೆ. ಸ್ತ್ರೀಯರೂ ಕೂಡ ಪರಪುರುಷರ ದೃಷ್ಟಿ ತಮ್ಮ ಮೇಲೆ ಬಿದ್ದು ಕೆಟ್ಟ ಪರಿಣಾಮ ಆಗದಿರಲೆಂದು ಕಣ್ಣಿಗೆ ಕಾಡಿಗೆ ಹಚ್ಚುವುದು ಪದ್ಧತಿ . ಮಕ್ಕಳಿಗೆ ಕಾಡಿಗೆ ಹಚ್ಚುವುದರ ಜೊತೆ, ಗೋಧೂಳಿಯನ್ನು ಹಚ್ಚುವುದು, ಶಾಸ್ತ್ರೀಯವಾಗಿ ಕುಸ್ತಿ ಆಡುವ ಜಾಗದ ಮಣ್ಣನ್ನು ( ಮಟ್ಟಿ ಮಣ್ಣು) ಹಣೆಗೆ ಹಚ್ಚುವುದು, ಹತ್ತಿಯ ಗೊಂಬೆ ಮಾಡಿ ಅಥವಾ ಕಡ್ಡಿಯಿಂದ ನಿವಾಳಿಸಿ, ಸುಟ್ಟು ಅದನ್ನು ಹಣೆಗೆ ಹಚ್ಚುವುದು, ಸಕ್ಕರೆ ಅಭಿಮಂತ್ರಿಸಿ ತಿನ್ನಿಸುವುದು, ಓಕಳಿ ನೀರಿನಿಂದ ದೃಷ್ಟಿ ತೆಗೆಯುವುದು ಹೀಗೆ ನಾನಾ ರೀತಿಯಲ್ಲಿ ದೃಷ್ಟಿಯ ಪರಿಣಾಮ ಕಮ್ಮಿ ಆಗಲು ಹಿರಿಯರು ಹಾಕಿದ ಪದ್ಧತಿ. ಕೃಷ್ಣ ಪರಮಾತ್ಮನಿಗೂ ಯಶೋಧೆ ದೇವಿಯು ಹೀಗೆ ಹಲವಾರು ರೀತಿಯಲ್ಲಿ ದೃಷ್ಟಿ ತೆಗೆದ ವಿಚಾರಗಳನ್ನು ಹರಿದಾಸರು ತುಂಬಾ ಅದ್ಭುತವಾಗಿ ವಿವರಿಸಿದ್ದಾರೆ. ಪ್ರಸ್ತುತ ಈ ಕೃತಿಯಲ್ಲಿ ಶ್ರೀಮೂಲಗೋಪಾಲನ ಆರಾಧಕರಾದ ಶ್ರೀವಿದ್ಯಾಪ್ರಸನ್ನತೀರ್ಥರೂ ಕೂಡ ಕೃಷ್ಣನಿಗೆ ದೃಷ್ಟಿ ತೆಗೆದ ವಿವಾರವನ್ನು ತಿಳಿಸಿದ್ದಾರೆ. ತನ್ನ ಕಂದನಿಗೆ ದೃಷ್ಟಿ ತಗಲಬಾರದೆಂದು ದೃಷ್ಟಿಗೆ ಅಗೋಚರನಾದ ಅಪ್ರಾಕೃತನಾದ ಕೃಷ್ಣಾಭಿನ್ನನಾದ ಸ್ವಾಮಿಯನ್ನು ಪ್ರಾರ್ಥಿಸುತ್ತಾಳೆ. ದೃಷ್ಟಿಗೆ ಅಗೋಚರನಾದ ಸ್ವಾಮಿ ಇಂದು ಗೋಚರನಾಗಿ ಯಶೋದೆಗೆ ಅಪ್ರಾಕೃತ, ಆನಂದಮಯ ಶರೀರವುಳ್ಳವನಾದ ಸ್ವಾಮಿ ಇಂದು ಪ್ರಾಕೃತ ದೇಹವನ್ನು ಧರಿಸಿಕೊಂಡವನಂತೆ ಕಾಣುತ್ತಿದ್ದಾನೆ. ಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ ಅಂತ ಯಶೋದೆಯ ಸುಕೃತವನ್ನು ಶ್ರೀವಾದಿರಾಜರು ವರ್ಣಿಸುತ್ತಾರೆ.
ಈ ಹಾಡು ನಮ್ಮ ಮಕ್ಕಳನ್ನು ಕುರಿತು ಅನುಸಂಧಾನ ಮಾಡಿ ಹೇಳಿದರೂ ಅವರಿಗೂ ತಗಲುವ ದೃಷ್ಟಿ ಕಮ್ಮಿ ಆಗುತ್ತದೆ.
ಮಕ್ಕಳು ತಾವು ಏನು ಮಾಡಿದರೂ ಅದು ನೋಡಲಿಕ್ಕೆ ಛಂದ. ಕಿಲ ಕಿಲ ನಗು, ಆ ನೋಟ,ಆ ಆಟ, ಕೈ ಮಾಡುವ ರೀತಿ, ಪುಟ್ಟ ಪುಟ್ಟ ಹೆಜ್ಜೆ, ಚೇಷ್ಟೆ ಕೊನೆಗೆ ಅಳುವುದೂ ಕೂಡ ಚಂದ.. ಮಕ್ಕಳ ಊಟ ಸಾಮಾನ್ಯವಾಗಿ ಯಾರಿಗೂ ಕಾಣದಂತೆ ಮಾಡಿಸುವುದು ತಾಯಿಯ ಧರ್ಮ..ತುಂಬಾ ಸಲ ಮಕ್ಕಳಿಗೆ ದೃಷ್ಟಿ ಆಗೋದೇ ಆಹಾರದ ವಿಷಯದಲ್ಲಿ.. ಸಣ್ಣ ವಯಸ್ಸಿಗೆ ಇಷ್ಟೊಂದು ಹಾಲು ಕುಡೀತದೆ,ಊಟ ಮಾಡುತ್ತದೆ ಈ ಮಗು ಅಂತ ಅನ್ಕೊಂಡ್ರೂ ಸಾಕು, ಆ ಮಗು ಆಹಾರ ತಗೋಳದೇ ಬಿಟ್ಟು ಬಿಡ್ತದೆ..
ನಮ್ಮ ಸ್ವಾಮಿಯೂ ಕೂಡ ಕೃಷ್ಣರೂಪದಿಂದ ಅನೇಕ ಗೋಪಿಕಾ ಸ್ತ್ರೀಯರ ಮನೆಗಳಲ್ಲಿ, ಅವರ ತಪಸ್ಸಿನ ಫಲದಂತೆ ಅವರ ಭಕ್ತಿಯನ್ನು ಹಾಲು, ಬೆಣ್ಣೆ, ತುಪ್ಪ, ಮೊಸರು, ಖಜ್ಜಾಯ, ಹಣ್ಣುಗಳ ರೂಪದಲ್ಲಿ ಸ್ವೀಕರಿಸುತ್ತಿದ್ದ. ಜನರೆಲ್ಲಾ ಅಷ್ಟು ತಿಂದ ಇಷ್ಟು ತಿಂದ ಅಂತಿದ್ರು. ಯಶೋದೆ ಮಗನಿಗೆ ದೃಷ್ಟಿ ಆಗಬಾರದೆಂದು ಪ್ರಳಯಕಾಲದಲ್ಲಿ ಹದಿನಾಲ್ಕು ಲೋಕಗಳನ್ನೇ ತಿಂದು ತೇಗುವ ದೇವರು ನನ್ನ ಕೂಸನ್ನು ಕಾಪಾಡಲಿ ಅಂತ ಪ್ರಾರ್ಥಿಸುತ್ತಾಳೆ. ಅದ್ಭುತವಾದ ಪ್ರಾರ್ಥನೆ.. ಇಲ್ಲಿ ಅಷ್ಟು ಹಾಲು ಕುಡೀತಿದ್ದ ಕೃಷ್ಣನೂ ಹದಿನಾಲ್ಕು ಲೋಕಗಳನ್ನು ತಿಂದು ತೇಗುವ ದೇವನೂ ಒಂದೇ ಆಗಿದ್ದಾನೆ ಅನ್ನುವ ಚಿಂತನೆ ಒಂದು ಕಡೆಯಾದರೆ, ಅಷ್ಟೆಲ್ಲಾ ತಿಂದು ತೇಗುವ ಸ್ವಾಮಿ ನಮ್ಮೆಲ್ಲರ ಬಿಂಬರೂಪದಲ್ಲಿರುತ್ತಾನಾದ್ದರಿಂದ ಈ ರೀತಿಯ ಚಿಂತನೆ ಮಾಡಿದರೆ, ಕೆಟ್ಟ ದೃಷ್ಟಿಯಿಂದ ತಿಂದ ಆಹಾರ ಅಜೀರ್ಣವಾಗದೇ ಸುಲಭವಾಗಿ ಜೀರ್ಣವಾಗಿ, ಆರೋಗ್ಯದಿಂದ ಇರುತ್ತವೆ. ಈರೇಳು ಭುವನಗಳ ತಿಂದು ತೇಗುವ ದೇವ ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ
ಎರಡನೆ ನುಡಿಯಲ್ಲಿ ನೋಟದ ದೃಷ್ಟಿಯ ದೋಷದ ಬಗ್ಗೆ ತಿಳಿಸಿ, ಸುಂದರಕೆ ಬಲು ಸುಂದರನಂತಿರುವ ಸ್ವಾಮಿಯ ಸೌಂದರ್ಯಕ್ಕೆ ಮಾರುಹೋಗದವರು ಯಾರಿದ್ದಾರೆ! ಇವಗೆ ಅನ್ಯ ಕನ್ಯೆ ಏಕೆಂದು ಬೆರಗಾಗಿ ಅಂತ ಸ್ವಾಮಿಯ ಮೋಹಿನಿ ರೂಪವನ್ನು ನೋಡಿ ಅಮ್ಮನವರು ಮಾಡಿದ ಚಿಂತನೆಯನ್ನು ದಾಸರು ತಿಳಿಸಿದ್ದಾರೆ. ಇಂತಹ ಮಗುವಿನ ಸೌಂದರ್ಯ ಗೋಪಿಕೆಯರ ನೋಟದ ದೃಷ್ಟಿ ಬೀಳಬಾರದೆಂದು ಮನ್ಮಥನಿಗೂ ಮನ್ಮಥನಾದ ರೂಪವನ್ನು ಚಿಂತನೆ ಮಾಡುವುದನ್ನು ತಿಳಿಸುತ್ತಾರೆ ಪ್ರಸನ್ನ ತೀರ್ಥರು. ಎಂದು ಕಾಣೆವು ಇಂಥ ಸುಂದರನ ನಾವೆಂದು, ಮಂದಗಮನೆಯರ ನುಡಿ ಅಂದವಾಯಿತೇ ಕಂದ, ಸಂದೇಹವಿಲ್ಲವರ ಶೃಂಗಾರ ಕೀ ಫಲವು,ಸೌಂದರ್ಯ ಜಲದೀ ಮನುಮಥನ ಮನುಮಥನೇ ಗತಿ ಅಂತ ಚಿಂತನೆ ಮಾಡುತ್ತಾರೆ.ನಮ್ಮ ಮಕ್ಕಳ ಅಂದದ ದೃಷ್ಟಿ ಆಗುವುದು ಸರ್ವೇ ಸಾಮಾನ್ಯ. ಆಗ ಮನೆಯಲ್ಲಿ ಮೇಲೆ ತಿಳಿಸಿದ ಪರಿಹಾರದ ಜೊತೆ, ಕೂಸಿನಲ್ಲಿರುವ ಮನುಮಥನಿಗೂ ಮನುಮಥನಾದ ಸ್ವಾಮಿಯ ರೂಪ ಪ್ರತಿಬಿಂಬದಂತಿದ್ದು, ದೃಷ್ಟಿ ದೋಷಕ್ಕೆ ಒಳಗಾಗದ ರೂಪ ಅಂತ ಚಿಂತನೆ ಮಾಡಿದರೆ ನಮ್ಮ ಮಕ್ಕಳಿಗೂ ತಗಲುವ ದೃಷ್ಟಿ ದೋಷದ ಪರಿಹಾರ ಆಗುತ್ತದೆ.
ಮುಂದಿನ ನುಡಿಯಲ್ಲಿ, ನೀರು, ಬೂದಿ ಹಲವಾರು ರೀತಿಯಲ್ಲಿ ದೃಷ್ಟಿ ತೆಗೆಯುವುದನ್ನು ತಿಳಿಸಿ, ಸ್ವಾಮಿಗೆ ಈವ್ಯಾವೂ ರೀತಿಗಳೂ ಕೆಲಸ ಮಾಡಲಿಲ್ಲ, ಯಾಕೆಂದರೆ ಅವನಿಗೆ ಇವ್ಯಾವುದರ ಪರಿಣಾಮ ಆಗುವುದಿಲ್ಲ ಯಾಕಂದರೆ ಅವನು ಮೀರಿಹನು ಯಂತ್ರ ಮಂತ್ರಾರ್ಥವೆಲ್ಲಾ ಪ್ರಸನ್ನ ಅಂತ ತಿಳಿಸ್ತಾರೆ ಶ್ರೀಪ್ರಸನ್ನ ತೀರ್ಥರು. ಪ್ರಕರ್ಷಣವಾದ ಸುಖವನ್ನು ಅನಾದಿ ಕಾಲದಿಂದ ಅನಂತ ಕಾಲದವರೆಗೂ ತನ್ನಲ್ಲಿ ತಾನೇ ಪಡುವ ಸ್ವರಮಣನಾದ್ದರಿಂದ ಅವನು ಪ್ರಸನ್ನ ಅನ್ನುವ ಪದ ಪ್ರಯೋಗ.
ಇನ್ನೂ ನಮ್ಮ ಮಕ್ಕಳಿಗೆ ಅನ್ವಯವಾಗುವಂತೆ, ಏಷ್ಟೇ ನಾನಾ ರೀತಿಯ ಪದ್ಧತಿಗಳನ್ನು ಅನುಸರಿಸಿದರೂ ಬಿಂಬರೂಪದ ಸ್ವಾಮಿ , ಎಲ್ಲವನ್ನೂ ಮೀರಿದ್ದಾನೆ ಅಂತ ಚಿಂತನೆ ಮಾಡಿದರೆ ನಮ್ಮ ಮಗುವಿಗೂ ಯಾವುದೇ ದೃಷ್ಟಿಯ ದೋಷ ತಗಲುವುದಿಲ್ಲ ಅನ್ನುವ ಯಥಾರ್ಥವನ್ನು , ಬಿಂಬ ಪ್ರತಿಬಿಂಬದ ಸುಂದರ ಚಿಂತನೆಯ ಮುಖಾಂತರ ಶ್ರೀಪ್ರಸನ್ನ ತೀರ್ಥರು ತಿಳಿಸಿದ್ದಾರೆ.
ಇಂತಹ ಅದ್ಭುತವಾದ ತತ್ವಗಳನ್ನು, ಪ್ರಮೇಯಗಳನ್ನು ಸುಲಭವಾಗಿ ಮನದಟ್ಟಾಗುವಂತೆ ಸರಳ ಸಾಹಿತ್ಯಗಳ ಮೂಲಕ ತಿಳಿಸಿ ಮಹದುಪಕರಿಸಿದ ಶ್ರೀವಿದ್ಯಾಪ್ರಸನ್ನ ತೀರ್ಥರು, ಅವರ ಅಂತರ್ಯಾಮಿ ಸಕಲ ಗುರುಗಳು, ವಾಯುದೇವರು ಮತ್ತು ಭಗವಂತ ನಮ್ಮೆಲ್ಲರನ್ನೂ ಅನುಗ್ರಹಿಸಲಿ ಅಂತ ಭಕ್ತಿಯಿಂದ ಪ್ರಾರ್ಥಿಸೋಣ.
ಕೃಪೆ : ಶ್ರೀ. ಪ್ರಭಂಜನಾಚಾರ್ಯ, ಬಳ್ಳಾರಿ.
smt. padma sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***
