Showing posts with label ತಂದೆಯೆ ನೀನೆನಗಹುದೈ ಬಂಧುರ ದುರಿತಾರಿ ನಿನ್ನ ಬಾಲನು mahadevapuravasa. Show all posts
Showing posts with label ತಂದೆಯೆ ನೀನೆನಗಹುದೈ ಬಂಧುರ ದುರಿತಾರಿ ನಿನ್ನ ಬಾಲನು mahadevapuravasa. Show all posts

Thursday 5 August 2021

ತಂದೆಯೆ ನೀನೆನಗಹುದೈ ಬಂಧುರ ದುರಿತಾರಿ ನಿನ್ನ ಬಾಲನು ankita mahadevapuravasa

    ..

ತಂದೆಯೆ ನೀನೆನಗಹುದೈ

ಬಂಧುರ ದುರಿತಾರಿ ನಿನ್ನ ಬಾಲನು ನಾನಾ

ನಂದದಿ ಪೇಳ್ವೆನು ಕರುಣಾ

ಸಿಂಧುವೆ ಪೊರೆಯೆನ್ನನಿಂದು ಶ್ರೀಮದ್ಗುರುವೇ ಕಂದ 1

ಸನ್ನುತಗುರುವರ ನಿಮ್ಮಯ

ಚನ್ನಡಿದಾವರೆಯ ನಂಬಿ ಸಲೆ ಸೇವಿಸುವಂ

ಗಿನ್ನಿತರ ಕ್ಷೇತ್ರಭ್ರಮೆ

ಯೆನ್ನುವುದೇನುಂಟು ನೋಡಲಿಳೆಯೊಳಗನಿಶಂ 2

ತಂದೆಯಹುದು ನೀನೆ ಶ್ರೀಗುರು ತಂದೆಯಹುದು ನೀನೆ ಪ

ಅಂದದಿ ಸಂಸೃತಿಸಂಗವ ಜಾರಿಸಿ

ಬಂಧುರ ತತ್ವವನರುಹಿದ ಪರಮನೆ ಅ.ಪ

ಎಷ್ಟುಕರುಣಿ ಎನ್ನ ಪಾಪವಸುಟ್ಟು ಭ್ರಾಂತಿವಿಷಯ

ಕೃಷ್ಣನಪಾದವಮುಟ್ಟಿ ಯಜಿಸಿ ಮನ

ನೆಟ್ಟುಯೋಗದಲಿ ವಿಮಲನಮಾಡಿದ 1

ನಾಮ ರೂಪ ಮರೆಸಿ ಸೋಹಂ-ಭಾವಮುದ್ರೆ ಧರಿಸಿ

ತಾಮಸ ಬುದ್ಧಿಯ-ತರಿದೀಡಾಡಿಸಿ

ನೇಮದಿ ಜಗದೊಳು-ಚರಿಸೆಂದರಸಿದ 2

ಭೇದವಾದ ತೊರಸಿ ಚಿತ್ಕಳೆ-ನಾದಕವಚ ತೊಡಿಸಿ

ಸಾಧಿಸಿ ವಿರತಿಯ-ವರವೈರಾಗ್ಯವ

ಬೋಧಿಸುತಲಿ ತನ್ನಂತೆಯೆಮಾಡಿದ 3

ಚರಮ ಶ್ಲೋಕವನ್ನು ಅಷ್ಟಾಕ್ಷರಯುಗಮಂತ್ರವನ್ನು

ತಿರುಮಂತ್ರಾರ್ಥವ ತೀರ್ಥಪ್ರಸಾದವ

ತರಳನಿಗಿಯುತ ಮರವೆಯ ನೂಕಿದ 4

ಬಂದ ಕಷ್ಟಗಳನು ಬೇಗದಿಭಂಗಮಾಡಿ ತಾನು

ಬಂದು ಹೃದಯ ವರಮಂದಿರದೊಳುತಾ

ನಿಂದು ಮೋಕ್ಷವನು ಸಂಧಿಸಿ ಸಲಹಿದ 5

ಶರಣು ಪೊಕ್ಕ ನರನ ಸಂತತಕರವ ಪಿಡಿದು ಮುನ್ನ

ವರಮಹದೇವನ ಪುರ ಶ್ರೀರಂಗನೆ

ಹರುಷದೊಳೆನ್ನನು ಪರದೊಳ್ಬೆರಸಿದ 6

***