Showing posts with label ಸಖಿ ಕೇಳೇ ಇನ್ನು ಹರುಷದ ಮಾತಾ ಸಕಲ ಜನರಿಗೆ ಆನಂದ ವೀವಾ gurumahipati. Show all posts
Showing posts with label ಸಖಿ ಕೇಳೇ ಇನ್ನು ಹರುಷದ ಮಾತಾ ಸಕಲ ಜನರಿಗೆ ಆನಂದ ವೀವಾ gurumahipati. Show all posts

Wednesday, 1 September 2021

ಸಖಿ ಕೇಳೇ ಇನ್ನು ಹರುಷದ ಮಾತಾ ಸಕಲ ಜನರಿಗೆ ಆನಂದ ವೀವಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸಖಿ ಕೇಳೇ ಇನ್ನು ಹರುಷದ ಮಾತಾ| ಸಕಲ ಜನರಿಗೆ ಆನಂದ ವೀವಾ| ಪ 

ಇಂತೆಂದು ಹರಿಯು ನಾನಾಪರಿ ವಿರಹದ| ಸಂತಾಪ ಮಾತವ ನುಡಿಯಲು ಕೇಳಿ| ಅಂತರಂಗದ ಕೋಪವಬಿಟ್ಟು ಎದ್ದು|ಅ| ನಂತನ ಬಿಗಿದಪ್ಪಿದಳು ಅಂಬುಜಾಕ್ಷಿ 1 
ಲಲಿತಾಂಗಿ ಆಲಿಂಗನವ ನೀಯೇ ಹರಿಗಾಗಾ| ಒಲಿದು ಉಕ್ಕೇರಿತು ಆನಂದ ಉದಧಿ| ಸತಿ ಮಾತಾಡುವ ದೇವ ಶ್ರೀ| ಲಲನೇಯಾ ಸದ್ಬುವನೆಯಾ ಪೂರಿಸಿದನು 2 
ಈ ಪರಿಯಾಡಿದ ಶ್ರೀ ಹರಿ ಚರಿತೆಯಾ| ನಾ ಪೇಳಿದುದು ಭಾವ ಭಕುತಿಯಲಿಂದಾ| ಆ ಪದಿಂದಲಿ ಕೊಂಡಾಡುವ ಮನುಜನ| ತಾ ಪಾಲಿಸುವಾ ಮಹಿಪತಿ ಸುತ ಪ್ರೀಯಾ3
***