Showing posts with label ಬಾ ಬಾ ಬಾ ಬಾ ಭಕ್ತಾಧಾರ ಬಾ ಬಾರೊ ಶ್ರೀಧರ lakshmikanta. Show all posts
Showing posts with label ಬಾ ಬಾ ಬಾ ಬಾ ಭಕ್ತಾಧಾರ ಬಾ ಬಾರೊ ಶ್ರೀಧರ lakshmikanta. Show all posts

Sunday, 1 August 2021

ಬಾ ಬಾ ಬಾ ಬಾ ಭಕ್ತಾಧಾರ ಬಾ ಬಾರೊ ಶ್ರೀಧರ ankita lakshmikanta

 ..


kruti by ಲಕ್ಷ್ಮೀನಾರಯಣರಾಯರು Lakshminarayanaru 


ಬಾ ಬಾ ಬಾ ಬಾ ಭಕ್ತಾಧಾರ ಬಾ ಬಾರೊ ಶ್ರೀಧರ ಪ


ಬಾ ಬಾ ಬಾರೆಂದು ಬೇಡಲು ಪ್ರಹ್ಲಾದ

ಕೋರಿದ ಕಂಬದಿ ತೋರಿ ಬಂದೆ ಹರಿ ಅ.ಪ.


ಎಲ್ಲಿಹ ನಿನ್ನ ಹರಿಯ ತೋರೊ ಕೊಲ್ಲುವೆನೆನಲಾ

ಖುಲ್ಲ ದೈತ್ಯನ ಉದರವ ಸೀಳಿ ಕರುಳನು ಚೆಲ್ಲಿ

ಎಲ್ಲೆಲ್ಲಿ ನೋಡಲು ನೀನಿಲ್ಲದಿಲ್ಲವೆಂಬ

ಸೊಲ್ಲು ನಿಜಕೆ ತಂದ ಬಲ್ಲಿದ ಹರಿಯೆ 1


ಸರ್ವಾಧಾರನೆ ಸರ್ವೋತ್ತಮನೆ ಸರ್ವಕಾರಣನೆ

ಸರ್ವೇಶ ಬಂಧು ನೀ ಸಲಹೆಂದು ಕರಿಮೊರೆಯಿಡಲಂದು

ಸರ್ವತ್ರಿದಶರು ಬೆದರುತ ನೋಡಲು

ಸರ್ವಮೂಲ ನೀನೊರ್ವನೆ ಬಂದೈ 2


ಪಾಪಿ ದುಶ್ಯಾಸನ ಸಭೆಯೊಳಗಂದು ನಿರಪರಾಧಿನಿ

ದ್ರೌಪದಿಯನ್ನು ಹಿಡಿದೆಳತಂದು ಹಿಂಸಿಸುತಿರಲಂದು

ಹೇ ಪರಮಾತ್ಮನೆ ನೀ ಪಾಲಿಸು ಎನೆ

ಆಪತ್ತಿಗೊದಗಿದ ಭೂಪ ಶ್ರೀಕಾಂತನೆ 3

***