Showing posts with label ಸತ್ರಾಜಿತ ಕುಮಾರಿ ಗೃಹಕೆ ಪಕ್ಷಿವಾಹನ ತನ್ನ ಅಚ್ಛದ ಸತಿಯ bheemesha krishna. Show all posts
Showing posts with label ಸತ್ರಾಜಿತ ಕುಮಾರಿ ಗೃಹಕೆ ಪಕ್ಷಿವಾಹನ ತನ್ನ ಅಚ್ಛದ ಸತಿಯ bheemesha krishna. Show all posts

Wednesday 1 September 2021

ಸತ್ರಾಜಿತ ಕುಮಾರಿ ಗೃಹಕೆ ಪಕ್ಷಿವಾಹನ ತನ್ನ ಅಚ್ಛದ ಸತಿಯ ankita bheemesha krishna

 ..

ಸತ್ರಾಜಿತ ಕುಮಾರಿ ಗೃಹಕೆ

ಪಕ್ಷಿವಾಹನ ತನ್ನ

ಅಚ್ಛದ ಸತಿಯ ಕಾರಣನೆಲ್ಲೂ ಭಾಮೆ

ಇಚ್ಛೆಯಿಂದಲಿ ಬಂದನಿಲ್ಲೆ 1


ಮಚ್ಛಲೋಚನೆ ನಗುತ

ಅಚ್ಚಮುತ್ತಿನ ದ್ವಾರ್ಯ

ಮುಚ್ಚುಕದವ ತೆಗೆಯದೆ ಭಾಮೆ

ಅಚ್ಚುತನ ಕೂಡ ವಿನಯದಿ 2


ಮದಗಜಗಮನೆ ಕೇಳೆ

ಗಜವರದನು ನಾನೆ

ಕದವ ತೆಗೆಯೆ ಕಮಲಾಕ್ಷಿ ಭಾಮೆ

ಮುದದಿ ನೋಡೆನ್ನ ನಿರೀಕ್ಷೆ 3


ಗಜವರದನೆ ಗಜವ

ವಧೆ ಮಾಡಿದವನು

ನಿನ್ನ ನೆಲೆಯ ಬಲ್ಲವರು ನಾವಲ್ಲ ಕೃಷ್ಣ

ಕದವ ತೆಗೆಯೋರ್ಯಾರಿಲ್ಲ4


ಉದಕÀದೊಳು ಮುಣುಗಿ ಬ್ಯಾಗ

ಮದಕದಿಂದ್ಹಯನ ಕೊಂದು

ತವಕದಿ ವೇದವ ತಂದೆ ನಾನು ಭಾಮೆ

ಥಳಥಳಿಸುವ ಮತ್ಸ್ಯ ನಾನೆ 5


ಹೊಳೆವೊ ಮತ್ಸ್ಯನಾದರೆ

ಶರಧಿ ಹುಡುಕುತ ಹೋಗೊ

ನಿನಗಾವಾಸಸ್ಥಾನಯಿದಲ್ಲ ಕೃಷ್ಣ

ಜಲವೆನ್ನ ಮನೆಯೊಳಗಿಲ್ಲ 6


ಅಂಬುಧಿ ಮಥಿಸಿ ಅಮೃತ

ತಂದು ಸುರರಿಗಿಟ್ಟು

ಮಂದರವ ಬೆನ್ನಲಿ ತಾಳಿದೆನೆ ಭಾಮೆ

ಸುಂದರ ಕೂರ್ಮನು ನಾನೆ 7


ಸುರರಸುರರ ಯುದ್ಧ ಬಿಟ್ಟು

ಮೋಹಿನ್ಯಾಗಲ್ಲಿ

ನಡೆ ನಾ ಸ್ತ್ರೀರೂಪ ನೋಡೋಳಲ್ಲ ಕೃಷ್ಣ

ಛಲದಿಂದ್ವಂಚಿಸು ಹೋಗವರನೆಲ್ಲ 8


ಮಣ್ಣು ಕೆದರುತಲ್ಹೋಗ್ಹಿ-

ರಣ್ಯಾಕ್ಷನ್ನ ಸೀಳಿ

ಮನ್ನಿಸ್ಯವನಿಯ ತಂದೆ ನಾನೆ ಭಾಮೆ

ಚೆನ್ನಿಗ ವರಾಹ ನಾ ಬಂದೀನೆ 9


ವರಾಹ ನೀನಾದರೆ

ಗರಿಗಂಹರವ ಸೇರೊ

ಮನೆಗೆ ಬರುವೋದುಚಿತಲ್ಲ ಕೃಷ್ಣ

ಮೆಲುವ ಬೇರೆನ್ನ ಮನೆಯೊಳಿಲ್ಲ 10


ತರಳ ಕರೆಯಲು ಕಂಬ

ಒಡೆದಸುರನ ಒಡಲ

ಕಡು ಕೋಪವನ್ನು ತಾಳಿದನೆ ಭಾಮೆ

ವರಲಕ್ಷ್ಮೀನರಸಿಂಹ ನಾನೆ 11


ಕರುಳಾಧಾರಕ ಕೇಳೊ

ಕರಾಳವದನಕ್ಕಂಜುವೆನು

ಕಡುಕೋಪ ಎನ್ನೊಳು ತರವಲ್ಲ ಕೃಷ್ಣ

ತರಳರಂಜುವರು ಲಕ್ಷ್ಮೀನಲ್ಲ 12


ಅಂಜೋದ್ಯಾತಕೆ ಚಿಕ್ಕ

ಕÀಂದ ವಟುವು ಚೆಲ್ವ

ಸುಂದರ ವಾಮನನು ನೋಡೆ ಭಾಮೆ

ಬಂದೆನ್ನ ಗುಣವ ಕೊಂಡಾಡೆ 13


ಕಪಟ ರೂಪದಿ ದಾನ

ತ್ರಿಪಾದ ಭೂಮಿ ಬೇಡಿದ

ವಿಪರೀತ ಮಾಯವ ಕಂಡವಳಲ್ಲ ಕೃಷ್ಣ

ಅಪರ್ಮಿತ ಗುಣ ಬಲಿ ಬಲ್ಲ 14


ಸರಸಿಜಮುಖಿ ಕೇಳೆ

ನಿರುತ ಜಪತಪಾಚರಿಸಿ

ಪರಶುರಾಮನು ನಾ ಬಂದೆನೆ ಭಾಮೆ

ಶರಥ ಮಾಡದಿರೆನ್ನೊಳು ನೀನೆ 15


ನಿರುತ ನಿಷ್ಠೆಯ ಬಲ್ಲೆ

ಗುರುತು ಮಾತೆಯ ಕೊಂದೆ

ಸರಸವಾಡುವೋಳು ನಾನಲ್ಲ ಕೃಷ್ಣ

ಶರಥÀ ಕ್ಷತ್ರಿಯರಲ್ಲಿದು ಹೋಗೆಲ್ಲ 16


ಎರಡೈದು ಶಿರಗಳ

ಕಡಿದು ಜಾನಕಿದೇವಿ

ಒಡಗೊಂಡಯೋಧ್ಯವನಾಳಿದೆನೆ ಭಾಮೆ

ಪೊಡವಿಗೊಡೆಯ ರಾಮ ನಾನೆ 17


ಅಡವಿ ಅರಣ್ಯ ತಿರುಗಿ

ಮಡದಿಗಪನಿಂದ್ಯವ ಕಟ್ಟಿ

ಅಡವಿಗಟ್ಟ್ಯಂತಃಕರಣವಿಲ್ಲ ಕೃಷ್ಣ

ಬಿಡು ನಿನ್ನ ಸುಳ್ಳು ವಚನವಿದೆಲ್ಲ 18


ಯದುವಂಶದೊಳು ಜನಿಸಿ

ವಧೆಮಾಡಿ ದೈತ್ಯರ

ನಿರ್ಭಯದಿಂದ ಬೆಳೆದೆನೆ ಭಾಮೆ

ಮಧು ಮುರಾಂತಕÀ ಕೃಷ್ಣ ನಾನೆ 19


ಕಲಹ ಮಾಡುತ ಕಾಲ-

ಯಮನಿಂದಲೋಡಿ ಬಂದು

ನಿರ್ಭಯದಿಂದ ಬೆಳೆಯಲು ನಿಂದೆಲ್ಲ ಕೃಷ್ಣ

ಮಲಗಿದ ಮುಚುಕುಂದ ಬಲ್ಲ 20


ನಿಗಮ ನಿಂದ್ಯವ ಮಾಡಿ

ಬಗೆಯಿಂದ ತ್ರಿಪುರರ

ಚೆದುರೆಯರನು ಒಲಿಸಿದೆನೆ ಭಾಮೆ

ಸುಗುಣ ಶರೀರ ಬೌದ್ಧ ನಾನೆ 21


ತ್ರಿಪುರ ಸತಿಯರನೆಲ್ಲ

ವಶಮಾಡಿದಂಥ ಶೂರ

ವಸನರಹಿತಾಗಿ ತಿರುಗೋದÀಲ್ಲ ಕೃಷ್ಣ

ಶಶಿಮುಖಿಯರು ನಗುವರೆಲ್ಲ 22


ಚೆಲುವ ತುರುಗನೇರಿ

ಹೊಳೆವೋ ಕತ್ತಿಯ ಶೂರ

ಖಳರ ಮರ್ದನ ಮಾಡುವೆನೆ ಭಾಮೆ

ಥಳಥಳಿಸುವ ಕಲ್ಕ್ಯ ನಾನೆ23


ಕಲಿಯ ಸಂಹಾರ ಕೇಳೊ

ನಿನ್ನ ಕತ್ತಿಗಂಜುವರ್ಯಾರೊ

ಕಟಿಪಿಟ್ಯೆನ್ನೊಳು ತರವಲ್ಲ ಕೃಷ್ಣ

ಕಲಿಗಳೆನ್ನರಮನೆಯೊಳಿಲ್ಲ 24

ಜಾಂಬವಂತನ್ನ ಗೆದ್ದು ತಂದೆ (sorry, incomplete?)

***