..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಕರುಣಿಸು ಜಯೇಶವಿಠಲ
ವರ ಅಂಕಿತವಿದನು ಇತ್ತೆ ಪ
ತರಳ ನಿನ್ನವನೆಂದು ಗುರುವಾತ ಸ್ಥಿತನಾಗಿ
ಭರದಿ ಪಾಲಿಸಿದೆ ಇವನ ಹರಿ ನೀನಿದ್ದೆಡೆಗೆ ಕರೆಸಿ ಅ.ಪ
ಇರಿಸು ವರ್ಣಾಶ್ರಮ ವರಧರ್ಮ ಕರ್ಮಗಳಲಿ
ಮರೆಸಿ ಕಾಮ್ಯಕರ್ಮಗಳೆಲ್ಲವನು
ಸ್ಮರಿಸದಂತೆ ಮಾಡು ಪರಸತಿಯರೊಲುಮೆ
ಮರೆಯದಂತಿರಲಿ ಪರತತ್ವವನು 1
ಅತಿಥಿ ಅಭ್ಯಾಗತರ ಪೂಜೆ ಸತಿ ಸುತ ಪರಿವಾರದಿ
ಕೃತಕೃತ್ಯನಾಗಿ ಮಾಡಿಸಿ
ಪತಿತರ ಸಹವಾಸ ಹಿತವೆಂದರುಪದೆ ಸ-
ದ್ಗತಿಯೀವ ಮಾರ್ಗ ತಿಳಿಸಿ 2
ನಿರುತ ತತ್ವ ನಿಶ್ಚಯದಲ್ಲಿ ಜ್ಞಾನ ಗುರುಹಿರಿಯರಲ್ಲಿ ಭಕ್ತಿ
ದುರ್ವಿಷಯದಲಿ ವಿರಕ್ತಿನಿತ್ತು
ವರ ವಿಜಯ ರಾಮಚಂದ್ರವಿಠಲ ಸುರರೊಡೆಯ
ಬರೆದು ನಾಮಾಮೃತವ ನುಡಿಸಿ 3
***
while ankita pradhana
(ಜಯೇಶವಿಠಲರಿಗೆ ಅಂಕಿತ ನೀಡಿದ ಸಂದರ್ಭ)
ಸರಸಾಕಾರ ದುರಿತ ವಿ ದೂರ
ಕರುಣಾಕರ ಸುಂದರ ಗಂಭೀರ 1
ದೀನೋದ್ಧಾರ ವಿರ್ಪಿವಿಹಾರ
ದಾನವಹರ ಸುರಕಾವ್ಯ ವಿಚಾರ 2
ಸೀತಾನಾಥ ವಾನರಯೂಥ
ವಾರಾತ್ಮಜ ನುತ ಶ್ರೀ ಲಕ್ಷ್ಮೀಕಾಂತ 3
***