ಸಲಹೊ ನಿನ್ನವನೀತನೆಂದೆಲ್ಲ
ಕಾಲ ಹೃತ್ಕಮಲದಲ್ಲಿ ನಿಲ್ಲೋ ಪ
ಸೊಲ್ಲುಸೊಲ್ಲಿಗೆ ಶ್ರೀ ವೇಣುಗೋಪಾಲನೆಂದೆಲ್ಲ
ಕಾಲದಿ ನುಡಿಸೊ ನಲಿಸೊಅ.ಪ
ಕರಣತ್ರಯಗಳಿಂದ ಮಾಡಿದ ಕಾರ್ಯವು
ಕರುಣಾಕರ ನಿನ್ನದೊ ಕರಣನಿಯಾಮಕ ನೀನಲ್ಲದಿಲ್ಲವೊ
ಕರುಣಿಸೋ ಸತತ ಶ್ರೀಹರಿಗುರುಭಕುತಿಯ 1
ಪಂಚಭೇದ ತಾರತಮ್ಯ ತಿಳಿದು e್ಞÁನ
ಪಂಚಕಗಳಿಂದಲಿ ಪಂಚಾತ್ಮಕ ವಿ-
ರಿಂಚಿ ಪವನರೊಳು ನಿರ್ವಂಚನೆ ಭಕುತಿಯಾ
ಕಿಂಚಿತ್ತಾದರು ಕೆಡದೆ 2
ಮಾ ಕಳತ್ರನೆ ನಿನ್ನ ಅ-
ನೇಕ ಮಹಿಮನೆಂದು ಏಕಮನಸಿನಿಂದ- ಅ
ನೇಕ ಕಾಲವು ಪಾಡಿ ದಾಸನೆಂದೆನಿಸಿ
ಸ್ವೀಕರಿಸುವುದು ಈಗ ಶ್ರೀ ವೇಂಕಟೇಶನೆ 3
****