ಬಾರೋ ನಮ್ಮನಿಯೊಳಗೆ ಭಾರತಿಪತಿ ಪ
ಬಾರೋ ನಮ್ಮನಿಗೀಗ ನೀರಜಾಕ್ಷನು ನಿನ್ನಸೇರಿದ ಜನರೊಳು ಭಾಳ ಬಹಳೇ ಪ್ರೀತಿಯ ಮಾಳ್ಪ ಅ.ಪ.
ಹರಿಯ ಮಂಟಪದೊಳು ಸರಸಿಜಾಕ್ಷನ ಮುಂದೆಇರಿಸಿ ನಿನ್ನನು ನಿತ್ಯಾ ಸ್ಮರಿಸಿ ಪೂಜಿಪೆ ಸ್ವಾಮಿ 1
ನಿನ್ನ ಸೇರಿದ ಕಪಿಯನ್ನು ಪೊರೆದ ಹರಿನಿನ್ನ ಸೇರದ ವಾಲಿಯನ್ನು ಘಾತಿಸಿದಾ 2
ನಂತ ತೀರ್ಥರೆ ದಯದಿಂದ ನಮ್ಮೊಳು ಭವ-ಬಂಧನ ಬಿಡಿಸೆಂದು ಇಂದಿರೇಶಗೆ ಪೇಳು 3
****