Showing posts with label ಕರಿಗಿರೀಶ ನಿನ್ನ ಬೇಡುವೆನೀಗ ಪರಿಪಾಲಿಸೊ ಸತತ gopalakrishna vittala. Show all posts
Showing posts with label ಕರಿಗಿರೀಶ ನಿನ್ನ ಬೇಡುವೆನೀಗ ಪರಿಪಾಲಿಸೊ ಸತತ gopalakrishna vittala. Show all posts

Sunday, 1 August 2021

ಕರಿಗಿರೀಶ ನಿನ್ನ ಬೇಡುವೆನೀಗ ಪರಿಪಾಲಿಸೊ ಸತತ ankita gopalakrishna vittala

ಕರಿಗಿರೀಶ ನಿನ್ನ ಬೇಡುವೆನೀಗ

ಪರಿಪಾಲಿಸೊ ಸತತ ಪ.


ನರಹರಿ ಭಕ್ತರ ಪೊರೆಯುವೆ ನೀನೆಂ-

ದರುಹಿದರೆನಗೆ ಶ್ರೀ ಗುರುಗಳು ಇಂದು ಅ.ಪ.

ನಾರಸಿಂಹ ನಿನ್ನ ಸಾರಿ ಭಜಿಸುವೆನು

ತೋರೊ ನಿನ್ನ ಪದವ

ಬಾರಿಬಾರಿಗೆ ಸ್ತುತಿಸಲು ಬಾಲನು

ಘೋರ ದೈತ್ಯನ ಸೀಳಿ ಪೊರೆದೆಯೊ 1

ಶೇಷಾಂತರ್ಗತ ನಾರಸಿಂಹ ವಿ-

ಶೇಷ ಮಹಿಮೆ ತೋರೊ

ಶೇಷಶಯನ ಮಹರುದ್ರಾಂತರ್ಗತ

ಪೋಷಿಸೊ ಭಕ್ತರ ಶಾಂತರೂಪದಿ 2

ಲೀಲೆಯಿಂದ ಶ್ರೀ ಲಕುಮಿ ಹಿತದಿ

ವ್ಯಾಳಶಯನನಾಗಿ

ಪಾಲಿಸಬೇಕೆನ್ನನು ಸತತದಿ ಗೋ-

ಪಾಲಕೃಷ್ಣವಿಠ್ಠಲ ನೀ ದಯದಿ 3

****