Showing posts with label ಗುರುರಾಯರ ತೂಗೋ ಬಾಗೋ ಪರಿಪರಿಯ ರತ್ನಗಳ ಪೆಚ್ಚೇಮುತ್ತುಗಳ ಹಚ್ಚೆ shyamasundara. Show all posts
Showing posts with label ಗುರುರಾಯರ ತೂಗೋ ಬಾಗೋ ಪರಿಪರಿಯ ರತ್ನಗಳ ಪೆಚ್ಚೇಮುತ್ತುಗಳ ಹಚ್ಚೆ shyamasundara. Show all posts

Wednesday, 1 September 2021

ಗುರುರಾಯರ ತೂಗೋ ಬಾಗೋ ಪರಿಪರಿಯ ರತ್ನಗಳ ಪೆಚ್ಚೇಮುತ್ತುಗಳ ಹಚ್ಚೆ ankita shyamasundara

 ..

ಗುರುರಾಯರ ತೂಗೋ ಬಾಗೋ

ಪರಿಪರಿಯ ರತ್ನಗಳ ಪೆಚ್ಚೇಮುತ್ತುಗಳ ಹಚ್ಚೆ

ತೊಟ್ಟಿಲು ಕಟ್ಟೇವ | ಮೆಟ್ಟಲು ಮಾಡೇದ

ಮಟ್ಟಲು ಮಾಡೇದ

ತರತರದ ಹೂಗಳು ಸುತ್ತ | ತರ ತರದ ಹೂಗಳು ಸುತ್ತ

ಸುವಾಸನೆ ಮತ್ತ | ತುಂಬ ಇಡಗಿತ್ತ

ಪರಿಮಳಾರ್ಯರ ಬಳಿ ಸಾಗೇದ 1


ವರಮಧ್ವಶಾಸ್ತ್ರ ವಿಸ್ತರಿಸಿ | ವರಮಧ್ವಶಾಸ್ತ್ರ ವಿಸ್ತರಿಸಿ

ಜರಿದ ಮಾಯ್ಗಳಾಗ ಮೆರೆದ ಭೂಮಿಯೊಳಗ

ಮೆರದ ಭೂಮಿಯೊಳಗ |

ತರತಮ ಸ್ಥಾಪಿಸುತ್ತ | ತರತಮ ಸ್ಥಾಪಿಸುತ್ತ

ಮರುತ ನಿದ್ಧಾಂತ ತ್ವರಿತ ಗುಣವಂತ

ಭರದಿ ಗುರು ಚರಣಕೆ ಬಾಗೋ2


ನಮಿಸುತಲಿ ಸಾಗೋನೀ ಬೇಗ | ನಮಿಸುತಲಿ

ಸಾಗೋನೀ ಬೇಗ |

ಕರವ ಮುಗಿ ಹೋಗಿ | ವರವ ಬೇಡೀಗ

ವರವ ಬೇಡೀಗ ವರವ ಬೇಡೀಗ

ನಾಮಾಮೃತವ ಸವಿಯುತ್ತ | ನಾಮಾಮೃತವ ಸವಿಯುತ್ತ

ಕುಣಿಯೋ ಮತ್ತೆ | ಮಣಿಯ ಬಾಗುತ್ತ

ಬಾಗುತ್ತ | ಮೆಣಿಯೆ ಬಾಗುತ್ತ

ಶಾಮಸುಂದರನ ಪ್ರಿಯಗೀಗ 3

***