Showing posts with label ಶ್ರೀನಿವಾಸ ಕರುಣದಿ ಕಾಯೊ ಶ್ರೀನಿಧೆ ದಯದಿ gopalakrishna vittala. Show all posts
Showing posts with label ಶ್ರೀನಿವಾಸ ಕರುಣದಿ ಕಾಯೊ ಶ್ರೀನಿಧೆ ದಯದಿ gopalakrishna vittala. Show all posts

Monday, 2 August 2021

ಶ್ರೀನಿವಾಸ ಕರುಣದಿ ಕಾಯೊ ಶ್ರೀನಿಧೆ ದಯದಿ ankita gopalakrishna vittala

ಶ್ರೀನಿವಾಸ ಕರುಣದಿ ಕಾಯೊ ಶ್ರೀನಿಧೆ ದಯದಿ

ಬಾನು ಪ್ರಕಾಶ ಶ್ರೀಹರಿಯೆ ಪ.


ಈ ನರಜನ್ಮದಲಿ ಬಂದು

ಬೇನೆ ಬಿಟ್ಟು ಸಂಸಾರದಿ

ಕಾನನದಿ ಕಣ್ಣು ಮುಚ್ಚಿ

ನೀನೆ ಎನ್ನ ಬಳಲಿಸುವರೆ ಅ.ಪ.


ಎಷ್ಟು ವಿಧದಿ ಕರೆದರೂ ನಿನಗೆ | ಈಗಿನ್ನು ದಯ

ಪುಟ್ಟದ್ಹೋಹಿತಲ್ಲೊ ದೇವನೆ

ಬೆಟ್ಟದೊಡೆಯ ನಿನ್ನ ನಂಬಿ

ಕಷ್ಟ ಬಿಡಿಸು ಎಂದು ಬಾಯಿ

ಬಿಟ್ಟು ಕೂಗಿದರೂ ಕರುಣ

ಪುಟ್ಟಲಿಲ್ಲೊ ಸೃಷ್ಟಿಗೊಡೆಯ 1

ಯಾಕೆ ಎನ್ನ ಈ ಪರಿಯಿಂದ | ಜರೆದು ತೊರೆಯುತ್ತ

ನೂಕುವುದು ನ್ಯಾಯವೇ ಶ್ರೀಶ

ವಾಕುಲಾಲಿಸೆನ್ನನೀಗ

ಸಾಕಿದರೆ ನಿನ್ನ ಭಕ್ತರೊಡನೆ

ಬೇಕೆಂದು ನಿನ್ನ ಪದ ಸ್ಮರಣೆಯ

ಏಕಮನದಿ ಧ್ಯಾನಿಸುವೆನೊ 2

ನಡೆನುಡಿಗಳ ತಪ್ಪನೆಣಿಸಿದರೆ | ಶ್ರೀನಿಧಿಯೆ ಎನ್ನ

ಪೊಡವಿಯೊಳಗೆ ಪೊರೆವರಿನ್ಯಾರೊ

ಬಿಡು ಬಿಡು ಈ ಬಿಂಕವೆಲ್ಲ

ಕೊಡು ನಿನ್ನ ಪದ ಸರ್ವಕಾಲ

ದೃಢ ಭಕ್ತಿ ವೈರಾಗ್ಯ ಎನಗೆ

ಕೊಡು ಗೋಪಾಲಕೃಷ್ಣವಿಠ್ಠಲ 3

****