ಸುರನರ ವರಗುರು | ಸುರನರ ಪ.
ಸುರನರ ವರಗುರು ನಿನ್ನಾ | ದಿವ್ಯ
ಚರಣಕ್ಕೆ ಎರಗುವೆ ನಿನ್ನಾ | ಆಹ
ಕರುಣದಿಂದೀಕ್ಷಿಸಿ ವರಮತಿ ಪಾಲಿಸಿ
ಹರಿಯ ಶ್ರೀ ಚರಣಕ್ಕೆ ಎರಗಿಸು ಮನವನೂ ಅ.ಪ.
ಹಣ್ಣೆಂದು ನುಂಗೆ ಪೋದುದಕೇ | ಓದಿ
ತಣ್ಣಗೆ ಮಾಡಿದ ಮನಕೇ | ಹರಿ
ಯನ್ನು ಓಲೈಸಲು ಮರಕೇ | ಅಡರಿ
ಹೆಣ್ಣನ್ನೆ ತೊರೆದನು ವ್ರತಕೇ | ಆಹ
ಸಣ್ಣ ರೂಪದಿ ಪುರವನ್ನು ಶೋಧಿಸಿ | ಮುಡಿ
ಹೊನ್ನು ಸಲ್ಲಿಸಿ ವಾರ್ತೆಯನ್ನು ಪೇಳಿದ ಧೀರ 1
ರಕ್ಕಸಿಯೊಳು ಪ್ರೇಮದಾಟಾ | ದನುಜ
ಗಿಕ್ಕಿದ ಕೂಳಿಗಾರಾಟ | ಅಣ್ಣ
ತಕ್ಕೊಂಡ ಎಡೆಯಲ್ಲಿ ಊಟ | ಬಲು
ಸೊಕ್ಕಿದರೊಡನೆ ಕಾದಾಟ | ಆಹ
ಮಕ್ಕಳ ಕೊಯ್ದವ ನಿಕ್ಕಿದಸ್ತ್ರಕೆ ತಲೆ
ಇಕ್ಕದೆ ಪುರವಾಳ್ದ ರಕ್ಕಸಾಂತಕ ದೂತ 2
ಗುರುವಿಗೆ ವರೆದು ತತ್ವಾರ್ಥ | ಮತ್ತೆ
ಧರೆಯಲ್ಲಿ ಚರಿಸಿದ ವ್ಯಾಪ್ತಾ | ಮುನಿ
ವರರೊಳು ಬಲು ಶ್ರೇಷ್ಠನೀತಾ | ಪೇಳ್ದ
ಪರಿಶುದ್ಧ ವೇದ ಭಾವಾರ್ಥ | ಆಹ
ಸುರರುಷಿ ಪೂಜಿಪ ಹರಿಗಿರಿಯಲಿ ಸತ್ಯ
ವರಸೂನು ಚರಣದಿ ಗುರುಭಕ್ತಿರತ ವ್ರತ 3
ದುಡಿದು ಸ್ವಾಮಿಗೆ ಪ್ರತಿಫಲವಾ | ಬೇಡ
ದಡಿಸೇವೆ ಕೈ ಕೊಂಡ ವ್ರತವಾ | ಗಿರಿ
ವಡೆದನು ಕೈ ಜಾರೆ ಶತವಾ ಮಾಡಿ
ಪಡೆದನು ಗೋಪಿ ಚಂದನವಾ | ಆಹ
ಕಡಲ ತೀರದಿ ತನ್ನ ವಡೆಯನ್ನ ನಿಲ್ಲಿಸಿ
ಅಡರಿದ ಹಿಮಗಿರಿ ದೃಢಕಾಯ ಹರಿಪ್ರೀಯ 4
ಎಷ್ಟು ವರ್ಣಿಸಲಳವಿವನಾ | ಮಹ
ಗುಟ್ಟು ಮಂತ್ರವ ಸಾಧನವನಾ | ಮೂರು
ಬಟ್ಟೆ ಮಾಡುವ ನಂಬಿದವನಾ | e್ಞÁನ
ಕೊಟ್ಟು ಕಾಯುವ ಕರುಣಿ ಮಾನ್ಯಾ | ಆಹ
ದಿಟ್ಟ ಗೋಪಾಲಕೃಷ್ಣವಿಠ್ಠಲ ಬ್ರಹ್ಮನ
ಪಟ್ಟ ಕಟ್ಟುವನೆಂದು ಘಟ್ಟಿ ಮನದಲಿಪ್ಪ 5
****