ವಿಜಯದಾಸ
.ಅಪ್ಪನ ನೋಡಿರೊ
ವರಗಳ ತಪ್ಪದೆ ಬೇಡಿರೋ
ಸರ್ಪನ ಮೇಲೆ ಉಪ್ಪವಡಿಸಿ
ಮುಪ್ಪು ಇಲ್ಲದೆ ಭಕ್ತರನ ಪೊರೆವಾ ||ಪ||
ಇಂದ್ರ ನೀಲಿದ ರತನೋ ಕಾಂತಿ
ಚಂದ್ರಬಿಂಬ ವದನೋ
ಚಂದ್ರಿಕೆಯ ಪೋಲಿಪ ಮುಖವೊ
ಬಲುವಾ ನಂದಗಡಲ ಸುಖವೊ
ಮುಂದಿನ ಬೆಳಸುವ ಮಿಂಚೋ
ತೂಗುವ ಸುಳಿಗುರುಳ ಚುಂಚೊ
ಒಂದೊಂದೊ ದಕ್ಕನಂತಾದ ಸುಂದರದವತಾರ ಮಂದರಧರನೋ ||೧||
ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು
ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ
ಎರಳಿಯ ಗಂಗಳೋ ನೊಸುಲಲಿ
ತಿಲಕಾಂಬರದ ಬಿದಿಗೆ ತಿಂಗಳೊ
ಪರಿಪರಿ ನಗೆ ಸಾವಿರ ಮಿಹಿರನಂತೆ
ಕಿರಣವ ಮಿಗೆ ಮಕರ ಕುಂಡಲವೊ ||೨||`
ಬಿಲ್ಲು ಬಾಗಿದ ಪುಬ್ಬೊ ಮುಡಿಯಲಿ ಕುಸುಮ ವನದ ಹಬ್ಬೊ
ಗಲ್ಲದ ಚಿಬವೊ ಕಮಠದ ಬೆನ್ನೊ ಹೋಲಿಕೆ ಬಲು ಚನ್ನೊ
ಪಲ್ಲು ಪಂಕ್ತಿಗೆ ಹಾಕಿದ ಕರಿಯು ಅಧರಾಮೃತದ ಸುರಿಯು
ಅಲ್ಲಲ್ಲಿಗೆ ಕಿರಿಬೆವರಿಡೆ ನಿಲ್ಲದೆ ವೀಳ್ಯದ ಜೊಲ್ಲಿನ ಧಾರೆಯು ||೩||
ಬಾಳಿದಿಂಡಿನ ತೋಳು ಕಟ್ಟಿದ ತಾಯಿತಗಳೇಳು
ಕೀಲು ಕಡಗ ಝಣವೊ ದ್ವಾರೆ ಘಟ್ಟಿ ಕಂಕಣವೋ
ನೀಲದುಂಗುರ ಹರಳೊ
ಮುಂಗೈ ಸರಪಳಿಯ ಬೆರಳೊ
ಏಳು ಗೂಳಿಯ ನಯತೋಳಿಲಿ ಬಿಗಿದ
ಬಾಲಲೋಲ ಗೋಪಾಲನೊ ||೪||
ಪನ್ನಲಗ ಮುರಿಗ್ಯೂ ರಕ್ಷಿಯ ಮಣಿಯು ಥೋರ ದಾಸರಿಗೆ
ಚಿನ್ನದ ಸರವೊ ರೇಶಮಿಗೊಂಡೆ ಕೌಸ್ತುಭ ಶೃಂಗಾರವೊ
ರನ್ನದ ಮಾಲೆ ತುಲಸಿ ಪದಕ ಹಾಕಿದ ಎಣ್ಣಿನುಲೊ
ಅಣ್ಣಣ್ಣ ಹೊನ್ನಿನ ಗುಬ್ಬಿ ಎನುತ ಗೋಪಿ ಮನ್ನಿಸುತಲಿ ||೫||
ಹುಲಿಯುಗುರೂ ಮುತ್ತಿನ ಮಾಲಿಕಿಯ ಪೂಸಿದ ಗಂಧಗರೊ
ವೀಳೆಯ ರುಣನೊ ಅಂಗೈಯ ಗೆರೆಯು ವಿಸವ ಲಕ್ಷಣನೊ
ಪೊಳೆವ ಪವಳವೊ ಪೋಣಿಸಿಯಿದ್ದ ವೈಜಯಂತಿ ಸುಳ್ಳುವೊ
ನಲಿನಲಿದು ವಲಿದಾದೆನುತ ಒಲಿಸಿದಳೊ ಮಗನ ಯಶೋದೆ ||೬||
ಕಂಬು ಕೊರಳೊ ಮೂರೇಖಿಯು ಅಂಗೈಯಿವರಿಗೆ ಮರುಳೊ
ತುಂಬಿ ಸೂಸುವ ಹೊಳೆಯು ಜಠರದ ನಾಭಿ ತ್ರಿವಳಿಯು
ಅಂಬಿನ ತೆರೆಯು ಯೆನಲು ಮಿನುಗುವ ಬಿಸಿಲಿನ ಘನ ಹರಿಯು
ಭೊಂ ಭೊಂ ಭೊಮೆಂದು ಕೊಂಬಿನ ಊದು
ಎಂಬೊ ನುಡಿಯಲಿ ರಂಬಿಸಿ ಕೃಷ್ಣನ ||೭||
ಕಮಲದ ಮಗ್ಗ್ಯೊ ಉಂಗುರ ನಡುವಿದು ಅಲಂಕಾರದ ಸುಗ್ಗ್ಯೊ
ಅಮಮ ಧೊರೆಯು ನಾದದ ಘಂಟ್ಯೊಮಣಿಶಿಂಗನ ಮರಿಯು
ಸಮಸಮವಾತೊಡೆ ಬಾಳಿಯ ಸ್ತಂಭೊಜಾನು ಕನ್ನಡಿ ಕ್ರಮವೊ
ಧಿಮಿ ಧಿಮಿ ಎಂದು ರಂಗನ ಕುಣಿಯೆಂದು ನಿಮನಿಮಗೆಲ್ಲ ||೮||
ಕಾಲಲಿಯಿಟ್ಯ ಗೆಜ್ಜ್ಯೋ ಅಂದಿಗೆ ತಪ್ಪು ತಪ್ಪು ಹೆಜ್ಜ್ಯೊ
ನೀಳದ ದಂತೊ ಜಂಘ ಸರಪಳಿಯ ಗಗ್ಗರಿಯ ಯಿಂತೊ
ಸಾಲಾಂಗುಲಿಯು ವೀರ ಮುದ್ರಿಕೆ ನಖ ಕೇದಿಗೆ ಮುಳೆಯು
ಲಾಲಿ ಲಾಲಿ ಕಂದ ಎನುತಲಿ ಶ್ರೀ ಲಕುಮಿ ಲೋಲನ ಎಬ್ಬಿಸಿ ||೯||
ನೆರೆದವರಿಗೆ ತರುಳರನೆಲ್ಲಾ ಕರೆದು ಸುತ್ತಲು ನಿಲಿಸಿ
ಹರಿಹರಿ ಎಂದು ಹರದಾಡುತಲಿ ಪರಿಪರಿಯಿಂದ ಮಾತನು
ಅಪ್ಪನೆ ಸರಿಯಾಗಿ ಕುಣಿಯೆಂದು
ಪರಮ ಸಂಭ್ರಮದಿಂದ ಕರೆಕರೆದು ವಿಜಯವಿಠ್ಠಲನ
ತರಕಿಸಿ ಸಂತತ ಉಡಿಯಲಿ ಎತ್ತಿ ||೧೦||
***
Appana nodiro
varagala tappade bediro
sarpana mele uppavadisi
muppu illade bhaktarana poreva ||pa||
Indra nilida ratano kanti chandrabimba vadano
chandrikeya polipa mukhavo
baluva nandagadala sukhavo
mundina belasuva mincho
tuguva suligurula chuncho
ondondo dakkanantada
sundaradavatara mandaradharano ||1||
Aralida sampige teneyu nasa koneyalli maniyu
tarula haravo mundaleyalli aralele vaiyaravo
eraliya gangalo nosulali
tilakambarada bidige tingalo
paripari nage savira mihiranante
kiranava mige makara kundalavo ||2||`
Billu bagida pubbo mudiyali kusuma vanada habbo
gallada chibavo kamathada benno holike
balu canno
pallu panktige hakida kariyu
adharamrutada suriyu
allallige kiribevaride
nillade vilyada jollina dhareyu ||3||
Balidindina tolu kattida tayitagalelu
kilu kadaga jhanavo
dvare ghatti kankanavo
niladungura haralo
mungai sarapaliya beralo
elu guliya nayatolili bigida
balalola gopalano ||4||
Pannalaga murigyu rakshiya maniyu
thora dasarige
chinnada saravo reshamigonde kaustubha shrungaravo
rannada male tulasi padaka hakida enninulo
annanna honnina gubbi enuta gopi mannisutali ||5||
Huliyuguru muttinamalikiyu pusidagandhagaro
vileyarunano angaiya gereyu vishava lakshanano
poleva pavalavo ponisiyidda vaijayanti sulluvo
nalinalinalidu validadenuta
olisidalo magana yashode ||6||
Kambu koralo murekhiyu angaiyivarige marulo
tumbi susuva holeyu jatharada nabhi trivaliyu
ambina tereyu yenalu minuguva
bisalina ghana hariyu
bhom bhom bhomendu kombina udu
embo nudiyali rambisi krishnana ||7||
Kamalada maggyo ungura naduvidu alankarada suggyo
amama dhoreyu nadada ghantyo
manisingana mariyu
samasamavatode baliya stambho
janu kannadi kramavo
dhimi dhimi endu rangana kuniyendu nimanimagella ||8||
Kalaliyitya gejjyo andige tappu tappu hejjyo
nilada danto jangha sarapaliya gaggariya yinto
salanguliyu vira mudrike nakha kedige muleyu
lali lali kanda enutali sri lakumi lolana ebbisi ||9||
Neredavarige tarularanella karedu suttalu nilisi
harihari endu haradadutali
paripariyinda matanu appane sariyagi kuniyendu
parama sambhramadinda karekaredu vijayavittalana
tarakisi santata udiyali etti ||10||
***
ಅಪ್ಪನ ನೋಡಿರೊ ವರಗಳ
ತಪ್ಪದೆ ಬೇಡಿರೋ
ಸರ್ಪನಮೇಲೆ ಉಪ್ಪವಡಿಸಿ
ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಪ
ತಪ್ಪದೆ ಬೇಡಿರೋ
ಸರ್ಪನಮೇಲೆ ಉಪ್ಪವಡಿಸಿ
ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಪ
ಬಲುವಾ ನಂದಗಡಲ ಸುಖವೊ
ತೂಗುವ ಸುಳಿಗುರುಳ ಚುಂಚೊ
ಸುಂದರದವತಾರ ಮಂದರಧರನೋ 1
ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು
ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ
ತಿಲಕಾಂಬರದ ಬಿದಿಗೆ ತಿಂಗಳೊ
ಮಕರ ಕುಂಡಲವೊ 2
ಕುಸುಮ ವನದ ಹಬ್ಬೊ
ಗಲ್ಲದ ಚಿಬವೊ ಕಮಠದ ಬೆನ್ನೊ ಹೋಲಿಕೆ
ಅಧರಾಮೃತದ ಸುರಿಯು ಅಲ್ಲಲ್ಲಿಗೆ ಕಿರಿಬೆವರಿಡೆ
ನಿಲ್ಲದೆ ವೀಳ್ಯದ ಜೊಲ್ಲಿನ ಧಾರೆಯು 3
ಬಾಳಿದಿಂಡಿನ ತೋಳು ಕಟ್ಟಿದ ತಾಯಿತಗಳೇಳು
ಕೀಲು ಕಡಗ ಝಣವೊ ದ್ವಾರೆ ಘಟ್ಟಿ ಕಂಕಣವೋ
ನೀಲದುಂಗುರ ಹರಳೊ ಮುಂಗೈ ಸರಪಳಿಯ ಬೆರಳೊ
ಬಾಲಲೋಲ ಗೋಪಾಲನೊ 4
ಪನ್ನಲಗ ಮುರಿಗ್ಯೂರಕ್ಷಿಯ ಮಣಿಯು ಥೋರ ದಾಸರಿಗೆ
ಕೌಸ್ತುಭ ಶೃಂಗಾರವೊ
ರನ್ನದ ಮಾಲೆ ತುಲಸಿ ಪದಕ ಹಾಕಿದ ಎಣ್ಣಿನುಲೊ
ಗೋಪಿ ಮನ್ನಿಸುತಲಿ 5
ಹುಲಿಯುಗುರೂಮುತ್ತಿನಮಾಲಿಕಿಯುಪೂಸಿದಗಂಧಗರೊ
ವೀಳೆಯರುಣನೊ ಅಂಗೈಯ ಗೆರೆಯು ವಿಸವ ಲಕ್ಷಣನೊ
ವೈಜಯಂತಿ ಸುಳ್ಳುವೊ
ಒಲಿಸಿದಳೊ ಮಗನ ಯಶೋದೆ 6
ಕಂಬು ಕೊರಳೊ ಮೂರೇಖಿಯು ಅಂಗೈಯಿವರಿಗೆ ಮರುಳೊ
ತುಂಬಿ ಸೂಸುವ ಹೊಳೆಯು ಜಠರದ ನಾಭಿ ತ್ರಿವಳಿಯು
ಬಿಸಲಿನ ಘನ ಹರಿಯು
ಭೊಂ ಭೊಂ ಭೊಮೆಂದು ಕೊಂಬಿನ ಊದು
ಎಂಬೊ ನುಡಿಯಲಿ ರಂಬಿಸಿ ಕೃಷ್ಣನ 7
ಕಮಲದ ಮಗ್ಗ್ಯೊ ಉಂಗುರ ನಡುವಿದು ಅಲಂಕಾರದ ಸುಗ್ಗ್ಯೊ
ಅಮಮ ಧೊರೆಯು ನಾದದ ಘಂಟ್ಯೊ
ಮಣಿಶಿಂಗನ ಮರಿಯು
ಜಾನು ಕನ್ನಡಿ ಕ್ರಮವೊ
ಧಿಮಿ ಧಿಮಿ ಎಂದು ರಂಗನ ಕುಣಿಯೆಂದು ನಿಮನಿಮಗೆಲ್ಲ 8
ಕಾಲಲಿಯಿಟ್ಯ ಗೆಜ್ಜ್ಯೋ ಅಂದಿಗೆ ತಪ್ಪು ತಪ್ಪು ಹೆಜ್ಜ್ಯೊ
ನೀಳದ ದಂತೊ ಜಂಘ ಸರಪಳಿಯ ಗಗ್ಗರಿಯ ಯಿಂತೊ
ನಖ ಕೇದಿಗೆ ಮುಳೆಯು
ಲಾಲಿ ಲಾಲಿ ಕಂದ ಎನುತಲಿ ಶ್ರೀ ಲಕುಮಿ ಲೋಲನ ಎಬ್ಬಿಸಿ 9
ನೆರೆದವರಿಗೆ ತರುಳರನೆಲ್ಲಾ ಕರೆದು ಸುತ್ತಲು ನಿಲಿಸಿ
ಹರಿಹರಿ ಎಂದು ಹರದಾಡುತಲಿ
ಪರಮ ಸಂಭ್ರಮದಿಂದ ಕರೆಕರೆದು ವಿಜಯವಿಠ್ಠಲನ
ತರಕಿಸಿ ಸಂತತ ಉಡಿಯಲಿ ಎತ್ತಿ 10
*********