ಗಾನಕೆ ಅತಿಸುಲಭ ನಾಮವು
ರಾಮ್ ರಾಮ್ ಜೈಜೈರಾಮ್
ರಾಮ್ ರಾಮ್ ಶ್ರೀರಾಮ್ ಶ್ರೀರಾಮ್
ದೀನಜನಕೆ ಬಲು ಸಾನುರಾಗನಾದ
ಜಾನಕಿನಾಥನ ದಿವ್ಯ ನಾಮವು
ತಾಳ ತಂಬೂರಿ ಮೃದಂಗಗಳಿಂದಲಿ
ಕೇಳುವರಿಗೆ ಅದು ಮೌಳಿಯ ನಾಮವು
ಘೋರಕಲುಷಗಳ ಪಾರುಗಾಣಿಸಿ
ಮನಕೋರಿಕೆಗಳನೀವ ತಾರಕ ನಾಮವು
ತಾಪಸ ಸತಿಯಳ ಶಾಪವ ಬಿಡಿಸಿದ
ಭೋಪದಾಷರಥಿಯ ದಿವ್ಯ ನಾಮವು
ಲಂಕೆಯ ಪೊಕ್ಕು ನಿಷಾಚರರನೆ ಕೊಂದು
ಪಂಕಜಾಕ್ಷಿಯ ಆತಂಕ ಕಳೆದ ನಾಮ
ಎನ್ನವರೆಲ್ಲರು ಬನ್ನಿರಿ ಎನ್ನುತ
ತನ್ನೊಡನೊಯ್ದ ಪ್ರಸನ್ನ ರಾಮನ ನಾಮ
****