Showing posts with label ವ್ಯಾಕುಲವೇನೋ ಮನವೆ vijaya vittala suladi ಚಿಂತಾ ಪರಿಹಾರ ಸುಳಾದಿ VYAAKULAVENO MANAVE CHINTA PARIHARA SULADI. Show all posts
Showing posts with label ವ್ಯಾಕುಲವೇನೋ ಮನವೆ vijaya vittala suladi ಚಿಂತಾ ಪರಿಹಾರ ಸುಳಾದಿ VYAAKULAVENO MANAVE CHINTA PARIHARA SULADI. Show all posts

Monday, 9 December 2019

ವ್ಯಾಕುಲವೇನೋ ಮನವೆ vijaya vittala suladi ಚಿಂತಾ ಪರಿಹಾರ ಸುಳಾದಿ VYAAKULAVENO MANAVE CHINTA PARIHARA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಚಿಂತಾಪರಿಹಾರಕ ಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 

ವ್ಯಾಕುಲವೇನೋ ಮನವೆ ಯಾಕೆ ನಿನಗೆ ನಿತ್ಯ
ಸಾಕುವ ದಾತಾರ ಶ್ರೀಕಾಂತನನುದಿನ
ಲೋಕ ಲೋಕವನೆಲ್ಲ ಸಾಕುವ ಭಾರಕರ್ತ
ಬೇಕೆಂದು ಪ್ರತಿದಿನ ಜೋಕೆ ಮಾಡುವನೋ
ಕಾಕ್ಕುಲತೆವಿಡಿದು ಲೌಕಿಕದೊಳು ಬಿದ್ದು
ಕೂಕರ್ಮವನುಸರಿಸಿ ಶೋಕಕ್ಕೊಳಗಾಗದಿರು
ನೂಕು ಸಂತಾಪವನೇಕೆ ಬಗೆಯಿಂದ 
ವಾಕು ಸಾರಿದೆನಿದು ನೀ ಕೇಳು ದೃಢವಾಗಿ 
ಈ ಕುಂಭಿನಿಯ ಮಧ್ಯ ಪ್ರಾಕೃತವಿಡಿದು ಬ -
ದೂಕುವ ಜೀವಿಗಳ ಸಾಕುವನಾರು
ಗೋಕುಲಾಂಬುಧಿ ಚಂದ್ರ ವಿಜಯವಿಟ್ಠಲ ಗ್ರಾಸ -
ಹಾಕುವನಿರಲಾಗಿ ನೀ ಕಳವಳಿಸುವರೆ ॥ 1 ॥ 

 ಮಟ್ಟತಾಳ 

ಬರ ಬಂದರೇನು ಬಾರದಿದ್ದರೆ ಏನು
ಧರೆಯೆಲ್ಲ ಇಂದು ಕರಗಿಪೋದರೆ ಏನು
ಅರಸಾಗಿದ್ದವರ ಕರುಣ ತಪ್ಪಿದರೇನು
ವರುಷಂಗಳ ತಡೆದು ಇರಲಿ ಇದ್ದರೆ ಏನು
ಗಿರಿ ಸಮುದಾಯಗಳು ತೆರಳಿ ಬಂದರೆ ಏನು
ಹರಿದು ಮುಗಿಲು ಮೇಲೆ ಒರಗಿದರೇನು
ಧರಣಿಪಾಲಕ ರಂಗ ವಿಜಯವಿಟ್ಠಲರೇಯ 
ಪರಮಪುರುಷ ಹರಿಯ ಶರಣಗೆ ಭಯವೇನು ॥ 2 ॥ 

 ತ್ರಿವಿಡಿತಾಳ 

ಶಾರೆ ಹೊನ್ನಿಗೆ ಭತ್ತ ಶಾರೆಯಾದರೆ ಏನು
ನೂರಾರು ಖಂಡಗ ಕಾಸಿಗಾದರೆ ಏನು
ಊರೂರಲಿ ಧನ ಸೂರೆಬಿಟ್ಟರೆ ಏನು
ಮಾರುವ ಧಾರಣಿ ಏರಿಳಿದರೇನು
ಘೋರಾರಣ್ಯದೊಳು ಪೋಗಿ ಇದ್ದರೆ ಏನು
ನೀರು ಇಲ್ಲದ ಠಾವು ದೊರಿತಾರೇನು
ಆರಾಜಕವಾಗಿ ಭೀತಿ ಬಂದರೇನು
ಆರಾದರು ಮೋರೆ ತಿರುಹಲೇನು
ಮೇರೆದಪ್ಪಿ ಏಳುವನಧಿ ಹೆಚ್ಚಿದರೇನು
ದಾರಣದಲಿ ದೇಹ ಬಳಲಲೇನು ಈ -
ಶಾರೀರವೆ ಶ್ರೀನಿವಾಸನ ಚರಣಕ್ಕೆ
ಆರೋಪಿಸಿದ ತರುವಾಯದಲ್ಲಿ
ವಾರವಾರಕೆ ಮನವೆ ಯೋಚನೆಗೊಳಸಲ್ಲ
ಪೂರೈಸಿ ತಿಳಿಯೊ ಹರಿಯ ಮಹಿಮೆಯನ್ನು
ನಾರಾಯಣ ರಂಗ ವಿಜಯವಿಟ್ಠಲ ನಿತ್ಯ
ಭಾರಕರ್ತನಾಗಿ ಪೊರೆವನು ಪ್ರತಿದಿವಸ ॥ 3 ॥ 

 ಅಟ್ಟತಾಳ 

ಉದರದೊಳಗೆ ಬಂದು ಉದುಭವಿಸಿದಾಗ
ವದನಕ್ಕೆ ತಂದು ತೊಡದವರಾರೊ ಬೆಣ್ಣಿಯ
ಬದಿಗನು ತಾನಾಗಿ ಪದೆಪದೆಗೆ ಹರಿ
ಬದಿಯಲ್ಲಿ ನಿಂದು ಹದುಳ ನೋಡುತಲಿದ್ದು
ಪೊದೆ ವನ ಗಿರಿ ಗುಹೆ ಹೊದರಿನೊಳಿದ್ದರು
ಕ್ಷುಧೆಯಾಗಗೊಡದಂತೆ ಮಧುರನ್ನವ ತಂದು
ಉದಯಾಸ್ತಮಾನ ಬಿಡದೆ ಉಣಿಸುವ ಸತ್ಯ
ಮದಡುಮಾನವ ನಿನ್ನ ಉದರ ಚಿಂತಿಯ ಬಿಡು
ಹೃದಯದೊಳಗೆ ಸಿರಿ ಪದುಮನಾಭವ ಇಡು
ಒದಗಿ ಸಾಕುವ ತಂದೆ ವಿಜಯವಿಟ್ಠಲನಿರೆ 
ಇದೆ ಧೈರ್ಯವಿಡಿದು ಮುದದಿಂದ ನಲಿದಾಡು ॥ 4 ॥ 

 ಆದಿತಾಳ 

ಹಿಂದೆ ಬಹುಜನ್ಮಂಗಳು ಬಂದು ಬಂದು ಪೋದುದಕ್ಕೆ
ಒಂದು ತೃಣವಾದರೂ ನಿನ್ನಿಂದ ನೀನೇ ಗಳಿಸಲಿಲ್ಲ
ಇಂದಿರಾರಮಣನು ತಾ ಒಂದೊಂದು ಪರಿಯಲ್ಲಿ
ಬಾಂಧವನಾಗಿ ನಿತ್ಯ ನಿಂದು ಭಾರಕರ್ತನಾಗಿ
ಒಂದು ನಿಮಿಷ ಮೀರಗೊಡದೆ ಸಂದೇಹ ಬಡದಂತೆ
ಚಂದವಾಗಿ ಒಲಿದು ಆನಂದ ಸುಖ ಬಡಿಸುವ
ಮುಂದುಗೆಡದಲೆ ಹೇಗೆಂದು ಚಿಂತೆ ಮಾಡದಲೆ
ಎಂದೆಂದಿಗು ಕಳೆಗುಂದದಲಿರು ಮನವೆ
ಹಿಂದೆ ಇಂದು ಮುಂದು ಬಿಡದೆ ತಂದೆಯಾಗಿ ಸಾಕುವ ಗೋ -
ವಿಂದ ವಿಜಯವಿಟ್ಠಲಂಗೆ ವಂದಿಸುವದು ಬಿಡದಿರು ॥ 5 ॥ 

 ಜತೆ 

ಅಣುರೇಣು ಪೊಟ್ಟಿಗೆ ನಡೆಸುವ ದೇವನು
ನನಗೀಯದಿಪ್ಪನೆ ವಿಜಯವಿಟ್ಠಲ ಸ್ವಾಮಿ ॥ 
********


 ಲಘುಟಿಪ್ಪಣಿ : ಹರಿದಾಸರತ್ನಂ ಶ್ರೀಗೋಪಾಲದಾಸರು 

 ಧ್ರುವತಾಳದ ನುಡಿ : 

 ಕಾಕ್ಕುಲತೆ = ಕಕ್ಕುಲತೆ - ಚಿಂತೆ , ಹಂಬಲ ;
 ಕೂಕರ್ಮ = ಕುಕರ್ಮ - ಕೆಟ್ಟಕರ್ಮ ;
 ಬದೂಕುವ = ಬದುಕುವ ; 

 ಮಟ್ಟತಾಳದ ನುಡಿ : 

 ವರುಷಂಗಳು = ಕಾಲಕಾಲಕ್ಕೆ ಬೀಳುವ ಮಳೆ ;
 ಮುಗಿಲು = ಆಕಾಶ ; 

 ತ್ರಿವಿಡಿತಾಳದ ನುಡಿ : 

 ಠಾವು = ಆಶ್ರಯಸ್ಥಾನ ;
 ಆರಾಜಕ = ಅರಾಜಕ - ಅವ್ಯವಸ್ಥೆ ;
 ದಾರುಣ = ಕಠಿಣ ಪರಿಸ್ಥಿತಿ ;
 ಶಾರೀರವೆ = ಶರೀರವೇ ;
 ಆರೋಪಿಸಿದ = ಅರ್ಪಿಸಿದ , ಒಪ್ಪಿಸಿದ ; 

 ಅಟ್ಟತಾಳದ ನುಡಿ : 

 ಪದೆಪದೆಗೆ = ಹೆಜ್ಜೆಹೆಜ್ಜೆಗೂ ;
 ಹದುಳ = ಕ್ಷೇಮ ;
 ಹೊದರು = ಸಮೂಹ ; 

 ಆದಿತಾಳದ ನುಡಿ : 

 ಹಿಂದು = ಸೃಷ್ಟಿಗೆ ಬರುವುದಕ್ಕೆ ಮುಂಚೆ ;
 ಇಂದು = ಸೃಷ್ಟಿಗೆ ಬಂದ ಮೇಲೆ ;
 ಮುಂದು = ಮುಕ್ತಿಯನ್ನು ಹೊಂದಿದಾಗಲೂ ;
********

ಚಿಂತಾ ಪರಿಹಾರಕ ಸುಳಾದಿ

 ರಾಗ ಕಲ್ಯಾಣಿ 

 ಧ್ರುವತಾಳ 

ವ್ಯಾಕುಲವೇನೋ ಮನವೆ ಯಾಕೆ ನಿನಗೆ ನಿತ್ಯ
ಸಾಕುವ ದಾತಾರ ಶ್ರೀಕಾಂತನನುದಿನ
ಲೋಕ ಲೋಕವನೆಲ್ಲ ಸಾಕುವ ಭಾರಕರ್ತ
ಬೇಕೆಂದು ಪ್ರತಿದಿನ ಜೋಕೆ ಮಾಡುವನೋ
ಕಾಕ್ಕುಲತೆವಿಡಿದು ಲೌಕಿಕದೊಳು ಬಿದ್ದು
ಕೂಕರ್ಮವನುಸರಿಸಿ ಶೋಕಕ್ಕೊಳಗಾಗದಿರು
ನೂಕು ಸಂತಾಪವನೇಕ ಬಗೆಯಿಂದ 
ವಾಕು ಸಾರಿದೆನಿದು ನೀ ಕೇಳು ದೃಢವಾಗಿ 
ಈ ಕುಂಭಿನಿಯ ಮಧ್ಯ ಪ್ರಾಕೃತವಿಡಿದು ಬ -
ದೂಕುವ ಜೀವಿಗಳ ಸಾಕುವನಾರು
ಗೋಕುಲಾಂಬುಧಿ ಚಂದ್ರ ವಿಜಯವಿಠ್ಠಲ ಗ್ರಾಸ
ಹಾಕುವನಿರಲಾಗಿ ನೀ ಕಳವಳಿಸುವರೆ ॥ 1 ॥

 ಮಟ್ಟತಾಳ 

ಬರ ಬಂದರೇನು ಬಾರದಿದ್ದರೆ ಏನು
ಧರೆ ಎಲ್ಲ ಇಂದು ಕರಗಿಪೋದರೆ ಏನು
ಅರಸಾಗಿದ್ದವರ ಕರುಣ ತಪ್ಪಿದರೇನು
ವರುಷಂಗಳ ತಡೆದು ಇರಲಿ ಇದ್ದರೆ ಏನು
ಗಿರಿ ಸಮುದಾಯಗಳು ತೆರಳಿ ಬಂದರೆ ಏನು
ಹರಿದು ಮುಗಿಲು ಮೇಲೆ ಒರಗಿದರೇನು
ಧರಣಿಪಾಲಕ ರಂಗ ವಿಜಯವಿಠ್ಠಲರೇಯ 
ಪರಮಪುರುಷ ಹರಿಯ ಶರಣಗೆ ಭಯವೇನು ॥ 2 ॥

 ತ್ರಿವಿಡಿತಾಳ 

ಶಾರೆ ಹೊನ್ನಿಗೆ ಭತ್ತ ಶಾರೆಯಾದರೆ ಏನು
ನೂರಾರು ಖಂಡಗ ಕಾಸಿಗಾದರೆ ಏನು
ಊರೂರಲಿ ಧನ ಸೂರೆಬಿಟ್ಟರೆ ಏನು
ಮಾರುವ ಧಾರಣಿ ಏರಿಳಿದರೇನು
ಘೋರಾರಣ್ಯದೊಳು ಪೋಗಿ ಇದ್ದರೆ ಏನು
ನೀರು ಇಲ್ಲದ ಠಾವು ದೊರಿತಾರೇನು
ಆರಾಜಕವಾಗಿ ಭೀತಿ ಬಂದರೇನು
ಆರಾದರು ಮೋರೆ ತಿರುಹಲೇನು
ಮೇರೆದಪ್ಪಿ ಏಳುವನಧಿ ಹೆಚ್ಚಿದರೇನು
ದಾರುಣದಲಿ ದೇಹ ಬಳಲಲೇನು
ಶಾರೀರವೆ ಶ್ರೀನಿವಾಸನ ಚರಣಕ್ಕೆ
ಆರೋಪಿಸಿದ ತರುವಾಯದಲ್ಲಿ
ವಾರವಾರಕೆ ಮನವೆ ಯೋಚನೆಗೊಳಸಲ್ಲ
ಪೂರೈಸಿ ತಿಳಿಯೊ ಹರಿಯ ಮಹಿಮೆಯನ್ನು
ನಾರಾಯಣ ರಂಗ ವಿಜಯವಿಠ್ಠಲ ನಿತ್ಯ
ಭಾರಕರ್ತನಾಗಿ ಪೊರೆವನು ಪ್ರತಿದಿವಸ ॥ 3 ॥

 ಅಟ್ಟತಾಳ 

ಉದರದೊಳಗೆ ಬಂದು ಉದುಭವಿಸಿದಾಗ
ವದನಕ್ಕೆ ತಂದು ತೊಡದವನಾರೊ ಬೆಣ್ಣಿಯ
ಬದಿಗನು ತಾನಾಗಿ ಪದೆಪದೆಗೆ ಹರಿ
ಬದಿಯಲ್ಲಿ ನಿಂದು ಹದುಳ ನೋಡುತಲಿದ್ದು
ಪೊದೆ ವನ ಗಿರಿ ಗುಹೆ ಹೊದರಿನೊಳಿದ್ದರು
ಕ್ಷುಧೆಯಾಗಗೊಡದಂತೆ ಮಧುರನ್ನವ ತಂದು
ಉದಯಾಸ್ತಮಾನ ಬಿಡದೆ ಉಣಿಸುವ ಸತ್ಯ
ಮದಡು ಮಾನವ ನಿನ್ನ ಉದರ ಚಿಂತೆಯ ಬಿಡು
ಹೃದಯದೊಳಗೆ ಸಿರಿ ಪದುಮನಾಭನ ಇಡು
ಒದಗಿ ಸಾಕುವ ತಂದೆ ವಿಜಯವಿಠ್ಠಲನಿರೆ 
ಇದೆ ದೈರ್ಯವಿಡಿದು ಮುದದಿಂದ ನಲಿದಾಡು ॥ 4 ॥

 ಆದಿತಾಳ 

ಹಿಂದೆ ಬಹುಜನ್ಮಂಗಳು ಬಂದು ಬಂದು ಪೋದುದಕ್ಕೆ
ಒಂದು ತೃಣವಾದರೂ ನಿನ್ನಿಂದ ನೀನೇ ಗಳಿಸಲಿಲ್ಲ
ಇಂದಿರಾರಮಣನು ತಾ ಒಂದೊಂದು ಪರಿಯಲ್ಲಿ
ಬಾಂಧವನಾಗಿ ನಿತ್ಯ ನಿಂದು ಭಾರಕರ್ತನಾಗಿ
ಒಂದು ನಿಮಿಷ ಮೀರಗೊಡದೆ ಸಂದೇಹ ಬಡದಂತೆ
ಚಂದವಾಗಿ ಒಲಿದು ಆನಂದ ಸುಖ ಬಡಿಸುವ
ಮುಂದುಗೆಡದಲೆ ಹೇಗೆಂದು ಚಿಂತೆ ಮಾಡದಲೆ
ಎಂದೆಂದಿಗು ಕಳೆಗುಂದದಲಿರು ಮನವೆ
ಹಿಂದೆ ಇಂದು ಮುಂದು ಬಿಡದೆ ತಂದೆಯಾಗಿ ಸಾಕುವ ಗೋ -
ವಿಂದ ವಿಜಯವಿಠ್ಠಲಂಗೆ ವಂದಿಸುವದು ಬಿಡದಿರು ॥ 5 ॥

 ಜತೆ 

ಅಣುರೇಣು ಪೊಟ್ಟಿಗೆ ನಡೆಸುವ ದೇವನು
ನನಗೀಯದಿಪ್ಪನೆ ವಿಜಯವಿಠ್ಠಲ ಸ್ವಾಮಿ ॥
**********