Showing posts with label ಬಡವನ ಮನೋರಥ ಪೂರೈಸು ಸಿರಿಕೃಷ್ಣ ಒಡೆಯ ನೀನಲ್ಲದೆ ಪೂರೈಸುವರಿಲ್ಲ vasudeva vittala. Show all posts
Showing posts with label ಬಡವನ ಮನೋರಥ ಪೂರೈಸು ಸಿರಿಕೃಷ್ಣ ಒಡೆಯ ನೀನಲ್ಲದೆ ಪೂರೈಸುವರಿಲ್ಲ vasudeva vittala. Show all posts

Wednesday, 1 September 2021

ಬಡವನ ಮನೋರಥ ಪೂರೈಸು ಸಿರಿಕೃಷ್ಣ ಒಡೆಯ ನೀನಲ್ಲದೆ ಪೂರೈಸುವರಿಲ್ಲ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಬಡವನ ಮನೋರಥ ಪೂರೈಸು ಸಿರಿಕೃಷ್ಣ

ಒಡೆಯ ನೀನಲ್ಲದೆ ಪೂರೈಸುವರಿಲ್ಲ ಪ


ಕಿವಿಯು ನೀಡಿದುದಕೆ ಎನಗೊಮ್ಯಾದರು ಮನೋ

ಕುವರಿಯ ಭೃತ್ಯತನ ಕೊಡು ಕಂಡ್ಯ

ಸುವಿಮಲತರ ಮತಿಯಾದ ವಿಷ್ಣುರಾತೋ

ದ್ಭವನ ಬಳಿಯಲೊಮ್ಮೆ ನಿಲಿಸಯ್ಯಾ ಹರಿಯೆ 1


ನಯನವು ಕೊಟ್ಟದಕೆ ಎನ್ನೊಮ್ಮೆ ರಣದಿ ವಿ

ಜಯನ ಬಳಿಯಲೊಮ್ಮೆ ನಿಲಿಸಯ್ಯಾ

ಭಯದಿ ಸೂತರ ಸುಮ್ಮನಿಹ ಭೀಷ್ಮಕ ಕುರುಪ

ತಿಯರ ಸಭೆಯಲೊಮ್ಮೆ ನಿಲಿಸಯ್ಯ ಹರಿಯೆ 2


ರಸನವು ಎನಗಿನ್ನು ಕೃಪೆಮಾಡಿದುದಕೆ ಗೋ

ರಸವ ಕದ್ದು ಮೆಲುವ ಕಾಲದಲ್ಲಿ

ಇಸಕೊಂಬ ಗೋವಳರ ಒಳಗೆ ಎನ್ನನು ಒಬ್ಬ

ಶಿಶುವಿನ ಮಾಡಿ ಪುಟ್ಟಿಸು ಕಂಡ್ಯ ಹರಿಯೆ 3


ಎನಗೆ ತ್ವಗೇಂದ್ರಿಯವ ದಯಮಾಡಿದದಕಿನ್ನು

ಜನಕ ಭೀಷ್ಮಕ ಸುತೆಯ ಕರ ಕಂಜರದಿ

ಅನುವಾದಿಷ್ಟಕ ಭಾವ ಸರಯು ಯಮುನಾ ತೀರ

ಜನಿತವಾಳುಕ ಭಾವವನು ಕೊಡು ಹರಿಯೆ 4


ನಾಶಿಕವು ಇತ್ತದಕೆ ಗೋಪಿಯ ವಿಹಾರದಿ

ವಾಸುದೇವವಿಠಲ ನಿನ್ನ ಕೊರಳೊಳಿದ್ದ

ಸೂಸಿ ಬಿದ್ದ ಮಾಲಿಕೆಯ ಕುಸುಮಂಗಳ ಬಲು

ವಾಸನ ಲÉೂೀಲುಪ ಮಧುಕರ ಭಾವ ನೀಡೊ 5

***